ಅರೋಗ್ಯ

ಸರ್ಪ ಸುತ್ತು (Herpes -Zoster) ಹಾವಿನ ಶಾಪವಲ್ಲ ಬದಲಿಗೆ ವೈರಸ್ ಸೋಂಕು ಇದಕ್ಕೆ ಆಯುರ್ವೇದದ 5 ಮನೆಮದ್ದುಗಳು

ಹಾವಿನ ಶಾಪ ಅಂತಲೇ ಹೇಳಲಾಗುವ ಸರ್ಪ ಸುತ್ತು (Herpes -Zoster) ಗೆ ಆಯುರ್ವೇದದ ಮನೆಮದ್ದುಗಳು ..

ವೈರಸ್ ಸೋಂಕು ಹೆಚ್ಚಾಗಿ ಶರೀರದಲ್ಲಿ ನೋವು ಮತ್ತು ಉರಿಯುಳ್ಳ ಚಿಕ್ಕ ಚಿಕ್ಕ ಗುಳ್ಳೆಗಳು ಏಳುತ್ತವೆ ಮತ್ತು ಒಂದು ಕಡೆಯಿಂದ ಇನ್ನೊಂದು ಕಡೆ ಹರಡುತ್ತದೆ ..

ಆಯುರ್ವೇದದ ಮನೆಮದ್ದುಗಳು :

1. ಬೇವಿನ ಎಲೆಯ ರಸವನ್ನು ಮೈಗೆಲ್ಲಾ ಹಚ್ಚಬೇಕು .

 

 

2. ಗರಿಕೆಯನ್ನು ಬೇರುಸಮೇತ ಕಿತ್ತು ಚೆನ್ನಾಗಿ ನೀರಿನಲ್ಲಿ ತೊಳೆದು , ನಂತರ ನುಣ್ಣಗೆ ಅರೆದು ಸರ್ಪ ಸುತ್ತು ಇರುವ ಜಾಗಕೆಲ್ಲಾ ಹಚ್ಚಬೇಕು .

 

 

3. ಗೋಟು ಅಡಿಕೆಯನ್ನು ಅಕ್ಕಿ ತೊಳೆದ ನೀರಿನಲ್ಲಿ ಅರೆದು ಶರೀರಕೆಲ್ಲಾ ದಿನಕ್ಕೆ ನಾಲ್ಕು ಬಾರಿ ಲೇಪಿಸಬೇಕು .

 

 

4. ಕೆಂಪು / ಬಿಳಿ ಅಗಸೆ ಸೊಪ್ಪನ್ನು ತಣ್ಣೀರಿನಲ್ಲಿ ನುಣ್ಣಗೆ ಅರೆದು ಹಚ್ಚಬೇಕು .

 

 

5. ನೆಲ್ಲಿ ಪುಡಿ , ಲಾವಂಚ , ಸೊಗದೆ ಬೇರು ಪ್ರತಿಯೊಂದನ್ನು 10 -15 ಗ್ರಾಂ ನಷ್ಟು ತೆಗೆದುಕೊಂಡು ಬೇರೆ ಬೇರೆಯಾಗಿ ಪುಡಿಮಾಡಿ 8 ರಷ್ಟು ನೀರು ಬೆರೆಸಿ ಕುದಿಸಿ ,
ಅರ್ಧ ನೀರು ಹಿಂಗಿದ ಮೇಲೆ ಒಲೆಯಿಂದ ಇಳಿಸಿ , ಆರಿಸಿ ದಿನಕ್ಕೆ ಎರಡು ಬಾರಿ ಸೇವಿಸಬೇಕು , ಎರಡು ಚಮಚ ಕ್ಕಿಂತ ಹೆಚ್ಚು ಸೇವಿಸಬಾರದು .
21 ದಿನ ಈ ಕ್ರಿಯೆ ಮುಂದುವರಿಸಬೇಕು .

 

ಲಾವಂಚ

 

 

 

ಸೊಗದೆ ಬೇರು

 

 

ಈ ಮದ್ದು ಬಳಸುವ ಸಮಯದಲ್ಲಿ ಉದ್ದಿನಕಾಳು , ಹುರಳಿ ಕಾಳು , ಈರುಳ್ಳಿ ಬೆಳ್ಳುಳ್ಳಿ , ಜಿಡ್ಡು ಪದಾರ್ಥ , ಬೆಲ್ಲ ,ಸಿಹಿ ಪದಾರ್ಥ ಮತ್ತು ಹಗಲು ನಿದ್ರೆ ಮಾಡಬಾರದು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top