ಸಮಾಚಾರ

ಶ್ರೀರೆಡ್ಡಿ ಕಾಸ್ಟಿಂಗ್ ಆರೋಪದ ಬಗ್ಗೆ ರಾಮ್ ಚರಣ್ ತೇಜಾ ಹೇಳಿದ್ದೇನು ಗೊತ್ತಾ?

ಟಾಲಿವುಡ್ ಅಂಗಳದಲ್ಲಿ ಕಳೆದ ಎರಡು ವಾರದಿಂದ ನ್ಯೂಕ್ಲಿಯರ್ ಬಾಂಬಿನಂತೆ ಸ್ಪೋಟವಾಗಿರುವ ಕಾಸ್ಟಿಂಗ್ ಕೌಚ್ ವಿವಾದ ದಿನಕ್ಕೊಂದು ರೀತಿಯ ಸ್ಪೋಟಕ ವಿಚಾರಗಳನ್ನು ಆಚೆ ತರುತ್ತಿದ್ದು ಸ್ಪೋಟಕ ತಿರುವುಗಳನ್ನು ತೆಗೆದುಕೊಳ್ಳುತ್ತಿದೆ. ಇತ್ತೀಚಿಗೆ ಪಾತ್ರಕ್ಕಾಗಿ ಪಲ್ಲಂಗಕ್ಕೆ ಕರೆಯುವ ಕಾಮುಕರ ವಿರುದ್ಧ ರೊಚ್ಚಿಗೆದ್ದು ನಡುರಸ್ತೆಯಲ್ಲಿ ಬಟ್ಟೆಗಳನ್ನು ಬಿಚ್ಚಿ ಅರೆ ಬೆತ್ತಲೆ ಪ್ರತಿಭಟನೆ ನಡೆಸಿದೇಟಿಗೆ ತೆಲುಗು ಚಿತ್ರರಂಗದೊಳಗೆ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಈ ವಿಚಾರಕ್ಕೆ ಸಂಭಂದಿಸಿದಂತೆ ನಟ ಪವನ್ ಕಲ್ಯಾಣ್ ಅವರು ಆಕೆ ನಡುಬೀದಿಯಲ್ಲಿ ಈ ರೀತಿ ಮಾಡಿದ್ದು ತಪ್ಪು, ಅನ್ಯವಾಗಿದ್ದರೆ ಪೊಲೀಸ್ ಸ್ಟೇಷನ್ ಬಳಿಗೆ ಹೋಗಲಿ ಎಂದು ಹೇಳಿದ್ದರು.

 

 

ಪವನ್ ಕಲ್ಯಾಣ್ ಅವರ ಈ ಮಾತುಗಳಿಂದ ಕೆರಳಿದ್ದ ಶ್ರೀರೆಡ್ಡಿ ಪವನ್ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿ. ಅಸಭ್ಯವಾಗಿ ಮದ್ಯದ ಬೆರಳನ್ನು ತೋರಿಸಿದ್ದರು.. ಯಾವಾಗ ಪವನ್ ಕಲ್ಯಾಣ್ ಅವರನ್ನು ಶ್ರೀರೆಡ್ಡಿ ನಿಂದಿಸಿದರು ಆಗಿನಿಂದ ಪವನ್ ಅಭಿಮಾನಿಗಳು ಸೇರಿದಂತೆ ಚಿತ್ರರಂಗದ ಅನೇಕ ಮಂದಿ ಶ್ರೀ ರೆಡ್ಡಿ ವಿರುದ್ಧ ಹರಿಹಾಯ್ತಿದ್ದಾರೆ. ಇದೀಗ ಟಾಲಿವುಡ್ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತಮ್ಮ ಫೇಸ್ಬುಕ್ ಮೂಲಕ ರೆಸ್ಪಾನ್ಸ್ ಮಾಡಿದ್ದು ಶ್ರೀರೆಡ್ಡಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

 

 

“ನಮ್ಮ ಚಿತ್ರರಂಗ ಒಂದು ಕುಟುಂಬ ಇದ್ದಂತೆ ಇಂತಹ ನಮ್ಮ ಉದ್ಯಮದಲ್ಲಿ, ಮಹಿಳೆಯರು ಯಾವಾಗಲೂ ಹೆಚ್ಚು ಗೌರವಾನ್ವಿತರಾಗಿದ್ದಾರೆ. ಸಮಸ್ಯೆಗಳೇನೇ ಇರಲಿ, ಅವುಗಳನ್ನು ಕಾನೂನುಬದ್ಧ ಮತ್ತು ಕೋರ್ಟಿನಲ್ಲಿ ಪರಿಹರಿಸಬೇಕು. ಅದನ್ನು ಬಿಟ್ಟು ಪಬ್ಲಿಸಿಟಿಗಾಗಿ ಈ ರೀತಿಯ ನಾಟಕಗಳನ್ನು ಮಾಡುತ್ತಾ ಸುಖಾಸುಮ್ಮನೆ ದೊಡ್ಡ ವ್ಯಕ್ತಿಗಳ ಹೆಸರನ್ನು ಕೆಡಿಸುವ ಕೆಲಸ ಮಾಡಬಾರದು. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ” ಎಂದು ಪೋಸ್ಟ್ ಮಾಡುವ ಮೂಲಕ ಶ್ರೀರೆಡ್ಡಿಯವರ ನಡೆಯ ವಿರುದ್ಧ ಕಿಡಿಕಾರಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top