ಸಮಾಚಾರ

ಕನ್ನಡ ಪ್ರೀತಿ ತೋರಿದ ಸಿಎಂ ಸಿದ್ದರಾಮಯ್ಯ

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನ್ನಡ ಪ್ರೇಮ ಅನಾವರಣಕ್ಕೆ ರಾಜ್ಯ ವಿಧಾನಸಭೆ ಚುನಾವಣೆ ವೇದಿಕೆ ಕಲ್ಪಿಸಿಕೊಟ್ಟಿದೆ.

 

 

ಮುಖಮಂತ್ರಿ ಸಿದ್ದರಾಮಯ್ಯ ರವರು ಶುಕ್ರವಾರ ಚಾಮುಂಡೇಶ್ವರಿ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ನಾಮಪತ್ರ ಸಲ್ಲಿಸಲು ಬಂದಾಗ ಚುಣಾವಣಾಧಿಕಾರಿ ಕನ್ನಡ ಹಾಗು ಇಂಗ್ಲಿಷ್ ನಲ್ಲಿ ಸಹಿ ಮಾಡಬೇಕೆಂದು ಹೇಳಿದ್ದಾರೆ, ಸಿಎಂ ಇಂಗ್ಲಿಷ್ ಬರದಿದ್ದರೆ ಏನು ಮಾಡಬೇಕು ಎಂದು ಪ್ರಶ್ನೆ ಮಾಡಿದ ಘಟನೆ ನಡೆದಿದೆ.

 

 

ಸಿದ್ದರಾಮಯ್ಯ ಅವರು ಇಂಗ್ಲೀಷ್ ಬರೆದಿದ್ದರೆ ಏನು ಮಾಡಬೇಕು. ಇಂಗ್ಲೀಷ್‌ನಲ್ಲಿ ಸಹಿ ಮಾಡಬೇಕು ಎಂದು ರೂಲ್ಸ್ ಇದೆಯಾ ಎಂದು ಮರು ಪ್ರಶ್ನೆ ಹಾಕಿದರು. ನಂತರ ಚುನಾವಣಾಧಿಕಾರಿ ಸ್ಪಷ್ಟನೆ ನೀಡಿದ ಬಳಿಕ ಇಂಗ್ಲೀಷ್‌ನಲ್ಲಿ ತಮ್ಮ ಹೆಸರು ಬರೆದು ನೀಡಿದರು. ಇದೇ ಸಂಧರ್ಭದಲ್ಲಿ ಚುನಾವಣೆಗೆ ಸ್ಪರ್ಧಿಸಲು ಠೇವಣಿ ಹಣವನ್ನು ತಾವೇ ಲೆಕ್ಕ ಹಾಕಿ ನೀಡಿದು ವಿಶೇಷವಾಗಿತ್ತು.

 

 

ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಸಿದ್ದರಾಮಯ್ಯ, ‘1983 ರಲ್ಲಿ ಮೊದಲ ಬಾರಿಗೆ ನಾಮಪತ್ರ ಸಲ್ಲಿಕೆ ಮಾಡಿದಾಗ ನನಗೆ ಆತಂಕ ಇತ್ತು. ಈಗ ನನಗೆ ಯಾವುದೇ ಭಯ ಇಲ್ಲ. ತುಂಬಾ ಸಮಾಧಾನದಿಂದ ಇದ್ದೇನೆ. ನನಗೆ ರಾಜಕೀಯದಲ್ಲಿ ಶತ್ರುಗಳು, ಹಿತ ಶತ್ರುಗಳು ಯಾರು ಇಲ್ಲ. ಕೇವಲ ರಾಜಕೀಯ ವಿರೋಧಿಗಳು ಇದ್ದಾರೆ ಅಷ್ಟೇ. ಚಾಮುಂಡೇಶ್ವರಿ ಜನ ನನಗೆ ಆಶೀರ್ವಾದ ಮಾಡುತ್ತಾರೆ ಎಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top