ಮನೋರಂಜನೆ

ವಿಕ್ರಮ್ ವೇದ ಚಿತ್ರದಲ್ಲಿ ನಟಿಸಲು ಶಾರುಖ್ ಇಟ್ಟ ಕಂಡೀಷನ್’ಗಳು ಯಾವು ಗೊತ್ತಾ?

ಕಳೆದ ತೆರೆಕಂಡು ಕಾಲಿವುಡ್ ಅಂಗಳದಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಚಿತ್ರ ಎನಿಸಿಕೊಂಡಿದ್ದ ಮಾಧವನ್ ಮತ್ತು ವಿಜಯ್ ಸೇತುಪತಿ ಅಭಿನಯಿಸಿದ್ದ ವಿಕ್ರಮ್ ವೇದ ಚಿತ್ರವು ಹಿಂದಿ ಇತರ ದಕ್ಷಿಣ ಭಾರತದ ಭಾಷೆಗಳಿಗೂ ರಿಮೇಕ್ ಆಗಲಿದೆ ಎಂಬ ಸುದ್ದಿ ಆ ಚಿತ್ರ ಹಿಟ್ ಆದಾಗಿನಿಂದಲೂ ಕೇಳಿಬರುತ್ತಿರುವುದು ಸುಳ್ಳಲ್ಲ! ಇದೀಗ ಈ ಚಿತ್ರವನ್ನು ಬಾಲಿವುಡ್ ನಲ್ಲಿ ನಿರ್ಮಿಸಲು ತಯಾರಿ ನಡೆಸಲಾಗುತ್ತಿದ್ದು ಚಿತ್ರದಲ್ಲಿ ಬಾಳಿದ್ ಕಿಂಗ್ ಖಾನ್ ಶಾರುಖ್ ನಾಯಕರಾಗಿ ನಾಟಿಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

 

 

ವಿಕ್ರಮ್ ವೇದ ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ ಖರೀದಿಸಿರುವ ನೀರಜ್ ಪಾಂಡೆ ಹಾಗೂ ಅಂಬಾನಿ ಪ್ರಡೊಕ್ಷನ್ ಸಂಸ್ಥೆಗಳು ಹಿಂದಿಯಲ್ಲಿ ಚಿತ್ರ ನಿರ್ಮಿಸಲು ಮುಂದಾಗಿದ್ದು ಶಾರುಖ್ ಖಾನ್ ರನ್ನು ಅಪ್ರೋಚ್ ಮಾಡಲಾಗಿದೆಯಂತೆ. ರೌಡಿ ಮತ್ತು ಪೋಲೀಸರ ನಡುವೆ ನಡಯುವ ಕ್ರೈಮ್ ಕಥಾನಕವಾದ ಈ ಚಿತ್ರದಲ್ಲಿ ನಟಿಸಲು ಶಾರುಖ್ ಖಾನ್ ಕೆಲವು ಬೇಡಿಕೆಗಳನ್ನು ನಿರ್ಮಾಪಕರ ಮುಂದೆ ಇಟ್ಟಿದ್ದಾರಂತೆ. ಆ ಕಂಡೀಷನ್ ಗಳು ಯಾವು? ಮುಂದೆ ಓದಿ.

 

 

ಈ ಚಿತ್ರದಲ್ಲಿ ನಟಿಸಬೇಕಂದ್ರೆ ವಿಜಯ್ ಸೇತುಪತಿ ಮಾಡಿದ್ದ ಗ್ಯಾಂಗ್ ಸ್ಟಾರ್ ಪಾತ್ರವನ್ನು ಶಾರುಖ್ ಅವರಿಗೇ ನೀಡಬೇಕಂತೆ. ಮತ್ತು ಮಾಧವನ್ ಮಾಡಿದ್ದ ಪಾತ್ರಕ್ಕೆ ಪಾತ್ರಕ್ಕೆ ಮಾಧವನ್ ಅವರನ್ನೇ ಕರೆಸಬೇಕಂತೆ. ನಿರ್ದೇಶನ ವಿಚಾರಕ್ಕೆ ಬಂದರೆ ನೀರಜ್ ಪಾಂಡೆ ಅವರು ನಿರ್ದೇಶನ ಮಾಡುದ್ರೆ ಮಾತ್ರ ಶಾರುಖ್ ಈ ಚಿತ್ರದಲ್ಲಿ ನಟಿಸುತ್ತಾರಂತೆ.. ಈ ಮೂರು ಕಂಡೀಷನ್ ಗಳಿಗೆ ಒಪ್ಪಿಕೊಂಡರೆ ಮಾತ್ರ ಶಾರುಖ್ ವಿಕ್ರಮ್ ವೇಧ ರಿಮೇಕ್ ಚಿತ್ರಕ್ಕೆ ಬಣ್ಣ ಹಚ್ಚುತ್ತಾರಂತೆ! ಒಟ್ಟಿನಲ್ಲಿ ಶಾರುಖ್ ಮುಂದಿಟ್ಟಿರುವ ಈ ಕಂಡೀಷನ್ ಗಳಿಗೆ ನಿರ್ಮಾಪಕರು ಒಪ್ಪುತ್ತಾರೆಯೇ? ಚಿತ್ರ ಆದಷ್ಟು ಬೇಗ ಸೆಟ್ಟಿರುತ್ತದೆಯೇ ಎಂಬ ಮುಂತಾದ ಪ್ರಶ್ನೆಗಳಿಗೆ ಕೆಲವೇ ದಿನಗಳಿಗೆ ಉತ್ತರ ಸಿಗಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top