fbpx
ರಾಜಕೀಯ

ಯತ್ನಾಳಗೆ ಖಡಕ್ ಎಚ್ಚರಿಗೆ ನೀಡಿ ಎಂ. ಬಿ. ಪಾಟೀಲ ಹೇಳಿದ್ದೇನು

ಕರ್ನಾಟಕ ವಿಧಾಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ರಾಜಕೀಯ ನಾಯಕರ ಹೇಳಿಕೆ ಹಾಗು ಪ್ರತಿ ಹೇಳಿಕೆಗಳು ದಿನೇ ದಿನೇ ಹೆಚ್ಚುತ್ತಿವೆ. ಈಗ ಉತ್ತರ ಕರ್ನಾಟಕದ ಪ್ರಭಾವಿ ನಾಯಕರಿಬ್ಬರ ಸರದಿ.

 

 

ಇತ್ತೀಚಿಕೆ ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಬಿಜೆಪಿ ವಿಜಯಪುರದ ಅಭ್ಯರ್ಥಿ ಸಚಿವ ಬಸನಗೌಡ ಪಾಟೀಲ ಯತ್ನಾಳ “ಉತ್ತರ ಕರ್ನಾಟಕದ ಕಾಂಗ್ರೆಸ್ ಮುಖಂಡರಿಗೆ ಧೈರ್ಯ ಇಲ್ಲ” ಹೇಳಿಕೆ ನೀಡಿದ್ದಾರೆ ಈಗ ಇದರ ವಿರುದ್ಧ ಆಕ್ರೋಶಗೊಂಡಿರುವ ಜಲಸಂಪನ್ಮೂಲ ಸಚಿವ ಡಾ. ಎಂ. ಬಿ. ಪಾಟೀಲ ತೀವ್ರವಾಗಿ ಹರಿಹಾಯ್ದಿದ್ದಾರೆ ಎಂದು ತಿಳಿದು ಬಂದಿದೆ.

 

 

ವಿಜಯಪುರ ಜಿಲ್ಲೆ ಬಬಲೇಶ್ವರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿ ಮಾತನಾಡಿದ ಸಚಿವ ಎಂ. ಬಿ. ಪಾಟೀಲ ಸಿದ್ದರಾಮಯ್ಯನವರು ಸ್ಪರ್ಧೆ ಮಾಡುವುದರಿಂದ ಉತ್ತಮ ಸಂದೇಶ ಹೊಂದುತ್ತದೆ. ಸಿದ್ದರಾಮಯ್ಯನವರು ಬಾದಾಮಿಯಿಂದ ಸ್ಪರ್ಧೆ ಮಾಡಬೇಕೆಂದು ಒತ್ತಾಯ ಮಾಡಿದ್ದೇವೆ ಎಂದು ಹೇಳಿದರು. ಯತ್ನಾಳ್ ರವರು ಹಿಂದಿನ ಎಂ‌ಎಲ್ ಸಿ ಚುನಾವಣೆಯಲ್ಲಿ ಸೈಲೆಂಟ್ ಇದ್ದರಲ್ಲಾ? ಅದೇ ರೀತಿ ಸೈಲೆಂಟ್ ಇದ್ದರೆ ಒಳ್ಳೆಯದು ಅವರಿಗೆ ಎಂದು ಎಂ. ಬಿ. ಪಾಟೀಲ ಯತ್ನಾಳ ರವರಿಗೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

 

 

ಇನ್ನು ಇದೆ ವೇಳೆ ಅವರು ನಾಮಪತ್ರ ಸಲ್ಲಿಕೆಯ ಬಗ್ಗೆ ತಿಳಿಸಿದ ಅವರು ನಾನು ಬಸವಣ್ಣವರ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಿ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ ಎಂದು ತಿಳಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top