ಮನೋರಂಜನೆ

ಡಾಲಿಯ ಫೋಟೋ ಪೇಪರ್ ನಲ್ಲಿ ಬಂದಿದ್ದು ಯಾಕೆ ಗೊತ್ತಾ?ಟಾಪರ್ ದನಂಜಯನ ಪೇಪರ್ ಪುರಾಣ!

ಅದೆಂಥಾ ಟ್ಯಾಲೆಂಟ್ ಇರೋ ನಟನಾದರೂ ಆತನಿಗಾಗಿಯೇ ಒಂದು ಪಾತ್ರ ಸೃಷ್ಟಿಯಾಗುವ ಪವಾಡ ನಡೆಯುವವರೆಗೂ ಸೈಕಲ್ ಹೊಡೆಯಲೇ ಬೇಕಾಗುತ್ತದೆ. ಗುರುಪ್ರಸಾದ್ ನಿರ್ದೇಶನದ ಡೈರೆಕ್ಟರ‍್ಸ್ ಸ್ಪೆಷಲ್ ಚಿತ್ರದ ಮೂಲಕ ಅವಕಾಶ ಪಡೆದುಕೊಂಡು ನಂತರ ಹೀರೋ ಆದರೂ ಒಂದು ಹಿಟ್ ಸಿಗದೆ ಪರಿತಪಿಸುತ್ತಿದ್ದ ಪ್ರತಿಭಾವಂತ ನಟ ಧನಂಜಯ್ ವಿಚಾರದಲ್ಲಿಯೂ ಈ ಮಾತು ಅಕ್ಷರಶಃ ನಿಜ! ಯಾಕೆಂದರೆ, ಧನಂಜಯ್‌ಗೊಂದು ಪಾತ್ರ ಸೃಷ್ಟಿಯಾಗಲು, ಆ ಮೂಲಕ ಅವರು ಹವಾ ಸೃಷ್ಟಿ ಮಾಡಲು ಸೂರಿ ಟಗರು ಅಂತೊಂದು ಚಿತ್ರ ಮಾಡಿ ಡಾಲಿ ಎಂಬ ರಗಡ್ ಪಾತ್ರವೊಂದನ್ನು ಸೃಷ್ಟಿಸಬೇಕಾಗಿ ಬಂದಿತ್ತು!

 

 

ಟಗರು ಚಿತ್ರದ ನಂತರ ಧನಂಜಯ್ ನಿಂತಲ್ಲಿ ಕುಂತಲ್ಲಿ ಸುದ್ದಿಯ ಸುಗ್ಗಿ. ಆದರೆ ಅತ್ಯಂತ ಕಷ್ಟದ ಹಾದಿಯನ್ನು ಸವೆಸಿಕೊಂಡು ಬಂದ ಈ ಡಾಲಿಯ ಫೋಟೋ ಮೊದಲ ಸಲ ಪತ್ರಿಕೆಯಲ್ಲಿ ಅಚ್ಚಾದುದ್ದರ ಹಿಂಚು ಮುಂಚಿನ ಸ್ಟೋರಿ ಡಿಫರೆಂಟಾಗಿದೆ. ಅಂದಹಾಗೆ ಧನಂಜಯ್ ಫೋಟೋ ಪತ್ರಿಕೆಗಳಲ್ಲಿ ಮೊದಲ ಸಲ ಅಚ್ಚಾಗಿದ್ದು ಅವರು ಹತ್ತನೇ ತರಗತಿಯಲ್ಲಿ ಇಡೀ ಜಿಲ್ಲೆಗೇ ಟಾಪರ್ ಆಗಿ ಹೊರ ಹೊಮ್ಮಿದಾಗ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಸೇಂಟ್ ಮೇರೀಸ್ ಪ್ರೌಢ ಶಾಲೆಯಲ್ಲಿ ಓದಿದ್ದ ಧನಂಜಯ್ ಟಾಪರ್ ಆಗಿ ಹೊರ ಹೊಮ್ಮಿದ್ದರು. ಆಗ ಪತ್ರಿಕೆಗಳಲ್ಲಿ ತಮ್ಮ ಫೋಟೋ ಪ್ರಕಟವಾದಾಗ ಖುದ್ದು ಧನಂಜಯ್ ಹಿರಿ ಹಿರಿ ಹಿಗ್ಗಿದ್ದರಂತೆ.

 

 

ಇದೀಗ ಟಗರು ಚಿತ್ರದ ಡಾಲಿ ಪಾತ್ರದ ಮೂಲಕ ಧನಂಜಯ್ ಕನ್ನಡದಲ್ಲಿ ಟಾಪ್ ಖಳನಟನಾಗಿಯೂ ಮಿಂಚಲಾರಂಭಿಸಿದ್ದಾರೆ. ಇದೀಗ ಥರ ಥರದ ಪಾತ್ರಗಳು ಕೈ ತುಂಬಾ ಅವಕಾಶಗಳು ಧನಂಜಯ್ ಅವರನ್ನು ಹುಡುಕಿ ಬರಲಾರಂಭಿಸಿವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top