fbpx
ರಾಜಕೀಯ

ದಿನೇಶ್ ಗುಂಡೂರಾವ್ ನಾಮಪತ್ರ ಸಲ್ಲಿಕೆಯಲ್ಲಿ ಸದ್ದು ಮಾಡಿದ `ಚಪ್ಪಲಿ’ ಹೇಳಿಕೆ

ಕರ್ನಾಟಕ ಚುನಾವಣೆ ಸಮೀಪಿಸುತ್ತಿದಂತೆ ಎಲ್ಲಡೆ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ನಾಮಪತ್ರ ಸಲ್ಲಿಕೆ ಭರದಿಂದ ಸಾಗಿದೆ. ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ರವರು ಗಾಂಧಿನಗರ ವಿಧಾಸಭಾ ಮತಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ತಮ್ಮ ಅಫಿಡವಿಟ್ ನಲ್ಲಿ ಅವರು 26.6 ಕೋಟಿ ರೂ. ಆಸ್ತಿ ಇದೆ ಎಂದು ಘೋಷಣೆ ಮಾಡಿದ್ದಾರೆ.

 

 

ನಾಮಪತ್ರ ಸಲ್ಲಿಕೆ ,ಆಡುವಾಗ ಅಫಿಡವಿಟ್ ನಲ್ಲಿ ದಿನೇಶ್ ಗುಂಡೂರಾವ್ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಬಳಸಿದ ಚಪ್ಪಲಿ ಪದ ಹೇಳಿಕೆಯ ಸಂಬಂಧ ಅವರ ವಿರುದ್ಧ ದಾಖಲಾಗಿರುವ ಎಫ್ ಐಆರ್ ಬಗ್ಗೆಯೂ ಕೂಡ ನಮೂದಿಸಿದ್ದಾರೆ. ಇದೊಂದು ಎಫ್ ಐಆರ್ ಬಿಟ್ಟರೆ ದಿನೇಶ್ ಗುಂಡೂರಾವ್ ತಮ್ಮ ವಿರುದ್ಧ ಕೋರ್ಟ್ ನಲ್ಲಿ ಯಾವುದೇ ಕೇಸ್ ಇಲ್ಲಾ ಎಂದು ಘೋಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

 

ಇತ್ತೀಚಿಗೆ ದಿನೇಶ್ ಗುಂಡೂರಾವ್ ಹೇಳಿಕೆ ಭಾರಿ ಸದ್ದು ಮಾಡಿತ್ತು. ಬಿಜೆಪಿ ಯಿಂದ ಭಾರಿ ಆಕ್ರೋಶವು ಕೂಡ ವ್ಯಕ್ತವಾಗಿತ್ತು.ರಾಜ್ಯ ವಿಧಾನಸಭಾ ಚುನಾವಣೆ ಮೇ 12 ರಂದು ನಡೆಯಲಿದ್ದು ಮೇ 15 ಕ್ಕೆ ಫಲಿತಾಂಶ ಹೊರಬೀಳಲಿದೆ ಎಂದು ತಿಳಿದು ಬಂದಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top