fbpx
ರಾಜಕೀಯ

ಧೀಮಂತ ನಾಯಕಿ ಇಂದಿರಾ ಗಾಂಧಿಗೆ ಕೂಡ ಸೋಲಿನ ಭಯ ಹುಟ್ಟಿಸಿದ್ದರು ರಾಜಣ್ಣ

ದೇಶದ ಧೀಮಂತ ನಾಯಕಿ ಉಕ್ಕಿನ ಮಹಿಳೆ ಭಾರತ ರತ್ನ ಮಾಜಿ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರು ಅಂದು ಅತ್ಯಂತ ಪ್ರಭಾವಿ ರಾಜಕಾರಣಿ ಎನಿಸಿದ್ದರು. ಇಂದಿರಾ ಗಾಂಧಿ ಅಂದು ಅಷ್ಟೆಲ್ಲ ಪ್ರಭಾವ ಹೊಂದಿದ್ದರು ಅವರಿಗೂ ಕೂಡ ಸೋಲಿನ ಭಯ ಹುಟ್ಟಿದ್ದು ನಿಜ. ಅದು ಕೂಡ ಯಾರೋ ದೊಡ್ಡ ರಾಜಕಾರಣಿ ಇಂದಲ್ಲ ಬದಲಾಗಿ ಕನ್ನಡದ ಖ್ಯಾತ ನಟ ಡಾ. ರಾಜ್ ಕುಮಾರ ಅವರಿಂದ. ರಾಜಣ್ಣ ಅವರ ಹೆಸರು ಇಂದಿರಾ ಗಾಂಧಿ ಅವರನ್ನೇ ಬೆವರುವಂತೆ ಮಾಡಿದ್ದೂ ನಿಜ.

 

 

ಇಂದಿರಾ ಗಾಂಧಿ ಹೆಸರಲ್ಲಿ ಯಾರು ನಿಂತರು ಅವರು ಗೆಲ್ಲುತ್ತಾರೆ ಎಂದು ಮನೆಮಾತಾಗಿದ್ದ ಆ ಸಂಧರ್ಭದಲ್ಲಿ ರಾಜಣ್ಣ ಅವರಿಂದ ಇಂದಿರಾಗೆ ಸೋಲಿನ ಭಯ ಹುಟ್ಟಿತ್ತು. ಇಂದಿರಾ ಗಾಂಧಿ ಕರ್ನಾಟಕದ ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದರು. ಆಗ ಅವರೇ ಗೆಲ್ಲುತ್ತಾರೆ ಎಂದು ಎಲ್ಲರು ಅಂದುಕೊಂಡಿದ್ದರು ಆದರೆ ಅವರ ವಿರುದ್ಧ ರಾಜಣ್ಣ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿತು. ಮಾಧ್ಯಮದಲ್ಲಿ ಕೂಡ ರಾಜಣ್ಣ ಅವರು ಇಂದಿರಾ ಗಾಂಧಿ ವಿರುದ್ಧ ಸ್ಪರ್ಧೆ ಮಾಡಲಿದ್ದಾರೆ ಎಂದು ವರದಿಯಾಯಿತು.

 

 

ಆಗ ಇಂದಿರಾ ಗಾಂಧಿ ರವರು ರಾಜಕುಮಾರ ಅವರ ಬಗ್ಗೆ ಮಾಹಿತಿ ಪಡೆದುಕೊಂಡು ರಾಜಣ್ಣ ಅವರ ಪ್ರಭಾವ ಕೇಳಿದ ಇಂದಿರಾ ಗಾಂಧಿ ಅವರಿಗೆ ಸೋಲಿನ ಭಯ ಶುರುವಾಯ್ತು. ಆ ರಾಜಣ್ಣ ಅವರಿಗೆ ನಟ ಎಂ.ಜಿ.ಆರ್ ಆಪ್ತಗಾಗಿದ್ದಾರೆ ಎಂದು ತಿಳಿದ ಇಂದಿರಾ ಕೂಡಲೇ ಎಂ.ಜಿ.ಆರ್ ರನ್ನು ಸಂಪರ್ಕಿಸಿದರು. ಎಂ.ಜಿ.ಆರ್ ರಾಜಣ್ಣ ಜೊತೆ ಮಾತನಾಡಿದರು. ನಂತರ ರಾಜಣ್ಣ ನಾನು ರಾಜಕಾರಣಕ್ಕೆ ಬರುವುದಿಲ್ಲ ಎಂಬ ಸ್ಪಷ್ಟನೆ ನೀಡಿದರು.

 

 

ರಾಜಣ್ಣ ಸ್ಪರ್ಧೆ ಮಾಡುವುದಿಲ್ಲ ಎಂಬುದು ಖಚಿತವಾಯಿತು. ಇಂದಿರಾ ಗಾಂಧಿ ಚಿಕ್ಕಮಗಳೂರಲ್ಲಿ ಗೆದ್ದರು. ಗೆದ್ದ ನಂತರ ಇಂದಿರಾ ತಮ್ಮ ಭಾಷಣದಲ್ಲಿ ರಾಜಣ್ಣ ಅವರ ಗುಣಗಾನ ಮಾಡಿದ್ದನ್ನು ನಾವು ಸ್ಮರಿಸಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top