fbpx
ರಾಜಕೀಯ

ತುರುವೇಕೆರೆಯಿಂದ ಯಶವಂತಪುರಕ್ಕೆ ಬಂದಿಳಿದ ಜಗ್ಗೇಶ್!

ನವರಸ ನಾಯಕ ಜಗ್ಗೇಶ್ ಅವರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಯಾವ ನಡೆ ಅನುಸರಿಸುತ್ತಾರೆಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಇದ್ದೇ ಇತ್ತು. ಇನ್ನು ರಾಜಕೀಯ ವಲಯದಲ್ಲಿ ಅವರು ಈ ಬಾರಿ ತುರುವೇಕೆರೆ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆಂದೇ ಭಾವಿಸಲಾಗಿತ್ತು.

 

 

ಆದರೀಯ ಈ ಊಹೆಗಳೆಲ್ಲವೂ ಅದಲು ಬದಲಾಗಿವೆ. ಜಗ್ಗೇಶ್ ಅವರಿಗೆ ಬಿಜೆಪಿ ವರಿಷ್ಠರು ಬೆಂಗಳೂರಿನ ಯಶವಂತಪುರ ಕ್ಷೇತ್ರದಿಂದ ಟಿಕೆಟ್ ಕೊಟ್ಟಿದ್ದಾರೆ. ಬಿಜೆಪಿ ಬಿಡುಗಡೆ ಮಾಡಿರುವ ನಾಲಕ್ಕನೇ ಅಭ್ಯರ್ಥಿಗಳ ಪಟ್ಟಿಯಲ್ಲಿ ಜಗ್ಗಣ್ಣನಿಗೆ ಟಿಕೆಟ್ ಪಕ್ಕಾ ಆಗಿದೆ.

ಹಾಸ್ಯಪ್ರಧಾನ ಪಾತ್ರಗಳನ್ನು ಮಾಡುತ್ತಾ ತಮ್ಮ ವಿಶಿಷ್ಟವಾದ ಮ್ಯಾನರಿಸಂನಿಂದಲೇ ಪ್ರೇಕ್ಷಕರನ್ನು ಆವರಿಸಿಕೊಂಡವರು ಜಗ್ಗೇಶ್. ಸಿನಿಮಾ ಜಗತ್ತಿನಾಚೆಗೆ ಇವರ ಚಿತ್ತ ರಾಜಕೀಯದತ್ತ ಹೊರಳಿಕೊಂಡಿದ್ದು ೨೦೦೮ರ ವಿಧಾನಸಭಾ ಚುನಾವಣೆಯ ಹೊತ್ತಿನಲ್ಲಿ. ಮೂಲತಃ ತುರುವೇಕೆರೆ ತಾಲೂಕಿನ ಜಡೆಮಾಯಸಂದ್ರದವರಾದ ಜಗ್ಗೇಶ್ ತುರುವೇಕೆರೆ ಕ್ಷೇತ್ರದಿಂದ ಕಾಂಗ್ರೆಸ್ ಮೂಲಕ ಕಣಕ್ಕಿಳಿದು ಗೆದ್ದಿದ್ದರು.

 

 

ಆ ನಂತರ ಅದೇನಾಯ್ತೋ… ಜಗ್ಗೇಶ್ ಏಕಾಏಕಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡಿದ್ದರು. ಅಲ್ಲವರಿಗೆ ವಿಧಾನಪರಿಷತ್ ಸದಸ್ಯತ್ವದ ಇನಾಮು ಸಿಕ್ಕಿತ್ತು. ಜೊತೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರವೂ ಸಿಕ್ಕಿತ್ತು. ಈ ವರ್ಷವೂ ಬಿಜೆಪಿ ಟಿಕೆಟ್ ಸಿಕ್ಕರೆ ಜಗ್ಗೇಶ್ ತುರುವೇಕೆರೆ ಕ್ಷೇತ್ರದಿಂದಲೇ ಕಣಕ್ಕಿಳಿಯುತ್ತಾರೆಂದು ಭಾವಿಸಲಾಗಿತ್ತು.
ಆದರೆ ಅವರಿಗೀಗ ಯಶವಂತಪುರ ಕ್ಷೇತ್ರ ಫಿಕ್ಸಾಗಿದೆ. ಈ ಭಾಗದಲ್ಲಿಯೂ ಅಪಾರ ಅಭಿಮಾನಿ ಬಳಗ ಇರೋದರಿಂದ ಗೆಲ್ಲಬಹುದೆಂಬ ಲೆಕ್ಕಾಚಾರ ಜಗ್ಗೇಶ್ ಅವರಿಗಿದ್ದಂತಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top