fbpx
ಸಮಾಚಾರ

ಬಾದಾಮಿಯಲ್ಲಿ ಅಖಾಡಕ್ಕಿಳಿದ ರಣಕಲಿಗಳು: ಸಿದ್ದು Vs ಶ್ರೀರಾಮುಲು: ಇಬ್ಬರು ಘಟಾನುಘಟಿಗಳ ಪ್ಲಸ್, ಮೈನಸ್ ಪಾಯಿಂಟ್ ಏನು? ಇಲ್ಲಿದೆ ಡೀಟೇಲ್ಸ್.

ಇಡೀ ಕರ್ನಾಟಕ ವಿಧಾನಸಭಾ ಚುನಾವಣೆಯ ಬಿಸಿಯೇರಿಸಿಕೊಂಡಿದ್ದು ಇನ್ನೇನು ಕೆಲವೇ ದಿನಗಲ್ಲಷ್ಟೇ ಬಾಕಿ ಉಳಿದಿದೆ.. ಇಂಥಾ ವಾತಾವರಣದಲ್ಲಿ ರಾಜಕೀಯ ವಲಯದಲ್ಲಿ ಬಿರುಸಿನ ವಾತಾವರಣ ಇರೋದು ಸಹಜವೇ. ಈ ನಿಟ್ಟಿನಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಗೆಲುವಿನ ರಣತಂತ್ರ ಹೆಣೆಯುತ್ತಿದ್ದು ಚುನಾವಣೆಯಲ್ಲಿ ಗೆಲುವು ಸಾಧಿಸುವ ಪಣವನ್ನು ತೊಟ್ಟಿವೆ.. ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯ ಭರಾಟೆ ಮುಕ್ತಾಯವಾಗಿದ್ದು ತೀವ್ರ ಕುತೂಹಲ ಮೂಡಿಸಿದ್ದ ಬಾದಾಮಿ ಕ್ಷೇತ್ರದದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದಿಂದ ಘಟಾನುಘಟಿ ನಾಯಕರುಗಳು ಚುನಾವಣಾ ಅಖಾಡದಲ್ಲಿ ಕಾದಾಡಲಿದ್ದಾರೆ.

 

 

ಕಾಂಗ್ರೆಸ್ ಪಕ್ಷದಿಂದ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಿದ್ದರೆ, ಬಿಜೆಪಿಯಿಂದ ಶ್ರೀರಾಮುಲು ಸ್ಪರ್ಧಿಸಿದ್ದಾರೆ. ಈ ಇಬ್ಬರೂ ನಾಯಕರು ತಮ್ಮ ತಮ್ಮ ಅಪಾರ ಬೆಂಬಲಿಗರ ಜೊತೆ ರೋಡ್ ಶೋ ನಡೆಸಿ ಇಂದು ನಾಮಪತ್ರ ಸಲ್ಲಿಸಿದರು.. ಇಬ್ಬರು ಘಟಾನುಘಟಿ ನಾಯಕರು ಸ್ಪರ್ಧೆ ಮಾಡಿರುವುದರಿಂದ ಈ ಕ್ಷೇತ್ರ ಭಾರಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು ಎರಡೂ ಪಕ್ಷಗಳು ಈ ಕ್ಷೇತ್ರವನ್ನು ಪ್ರತಿಷ್ಠೆಯ ಕಣವನ್ನಾಗಿಸಿಕೊಂಡಿವೆ.. ಹೇಗಾದರೂ ಮಾಡಿ ಈ ಕ್ಷೇತ್ರವನ್ನು ಗೆಲ್ಲಲೇಬೇಕು ಎಂದು ನಿಶ್ಚಯಿಸಿಕೊಂಡಿರುವ ಸಿದ್ದರಾಮಯ್ಯ ಒಂದು ಕಡೆಯಾದರೆ ಈ ಕ್ಷೇತ್ರದಲ್ಲಿ ಅವರಿಗೆ ಮಣ್ಣು ಮುಕ್ಕಿಸಲೇಬೇಕು ಎಂದು ಬಿಜೆಪಿ ಪದೇ ರಣತಂತ್ರವನ್ನು ಹೆಣೆಯುತ್ತಿದೆ. ಈ ಕ್ಷೇತ್ರದಲ್ಲಿ ಈ ಇಬ್ಬರು ನಾಯಕರಿಗೆ ಯಾವೆಲ್ಲಾ ಅಂಶಗಳು ಪ್ಲಸ್ ಪಾಯಿಂಟ್ ಆಗಬಹುದು? ಹಾಗೂ ಮೈನಸ್ ಪಾಯಿಂಟ್ ಆಗಬಹುದು? ಎಂಬ ವರದಿ ಇಲ್ಲಿದೆ ನೋಡಿ.

 

 

ಮುಖ್ಯಮಂತ್ರಿ ಸಿದ್ದರಾಮಯ್ಯ:

ಪ್ಲಸ್ ಪಾಯಿಂಟ್:
ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೇರಿದವರಾಗಿರುವ ಕುರುಬ ಸಮುದಾಯದ 50 ಸಾವಿರ ಮತದಾರರು ಇದ್ದಾರೆ, ಇದು ಸಿಎಂಗೆ ದೊಡ್ಡ ಪ್ಲಸ್ ಪಾಯಿಂಟ್ ಜೊತೆಗೆ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ ಕೂಡ ಸಿದ್ದುಗೆ ಸಹಾಯ ಆಗಬಹುದು. ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಅವರಿಗೆ ಇರುವ ವಯಕ್ತಿಕ ವರ್ಚಸ್ಸು ಉಪಯೋಗಕ್ಕೆ ಬರಬಹುದು.

ಮೈನಸ್ ಪಾಯಿಂಟ್:
ಬಾದಾಮಿಯಲ್ಲಿ ಇಬ್ಬರು ಟಿಕೆಟ್ ಆಕಾಂಕ್ಷಿಗಳ ಆಂತರಿಕ ಕಲಹದಿಂದಾಗಿ ನಿಜಕ್ಕೂ ಸಿದ್ದರಾಮಯ್ಯ ಅವರಿಗೆ ದೊಡ್ಡ ಹೊಡೆತ ಬೀಳುತ್ತದೆ. ಬಾದಾಮಿ ಸ್ಪರ್ಧೆ ಬಗ್ಗೆ ಕಡೆ ಕ್ಷಣದವರೆಗೂ ಗೊಂದಲ ಸೃಷ್ಟಿಯಾಗಿದ್ದು ಸ್ವಲ್ಪ ಹಿನ್ನಡೆಯಾಗಬಹುದು. ಇವುಗಳ ಜೊತೆಗೆ ವಾಲ್ಮೀಕಿ ಸಮುದಾಯಕ್ಕೆ ಸೇರಿದವರಾಗಿರುವ ಶ್ರೀರಾಮುಲು ಅವರ ಜಾತಿಯ ಮತದಾರರು ಕೂಡ 15 ಸಾವಿರ ಇರುವುದರಿಂದ ಆ ಮತಗಳೂ ಕೂಡ ನಿರ್ಣಾಯಕವಾಗಲಿವೆ.

 

 

ಶ್ರೀರಾಮುಲು:

ಪ್ಲಸ್ ಪಾಯಿಂಟ್:
ಬಾದಾಮಿಯಲ್ಲಿ ಶ್ರೀರಾಮುಲು ಅವರ ಜಾತಿ(ವಾಲ್ಮೀಕಿ ಸಮುದಾಯ)ಯ ಮತದಾರರು ಕೂಡ 15 ಸಾವಿರ ಇರುವುದರಿಂದ ಆ ಮತಗಳು ಶ್ರೀರಾಮುಲು ಅವರಿಗೆ ವರವಾಗಿ ಪರಿಣಮಿಸಲಿವೆ. ಬಾದಾಮಿಯ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಪ್ರಬಲವಾಗಿರುವ ಕಾರಣ ಶ್ರೀರಾಮುಲು ಅವರಿಗೆ ಇದು ದೊಡ್ಡ ಪ್ಲಸ್ ಪಾಯಿಂಟ್ ಆಗಿ ಪರಿಣಮಿಸಲಿದೆ.

ಮೈನಸ್ ಪಾಯಿಂಟ್:
ಕಾಂಗ್ರೆಸ್ ನಂತೆಯೇ ಬಿಜೆಪಿ ಕೂಡ ಕಡೆ ಕ್ಷಣದವರೆಗೂ ಆಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲ ಮೂಡಿಸಿಟ್ಟು ಈ ವಿಚಾರ ಪಕ್ಷಕ್ಕೆ ಹಿನ್ನಡೆಯಾಗಬಹುದು. ಕ್ಷೇತ್ರದಲ್ಲಿ ಕುರುಬ ಸಮುದಾಯದ 50 ಸಾವಿರ ಮತದಾರರು ಇರುವುದರಿಂದ ಅವರ ಓಲೈಕೆ ಮಾಡುವುದು ಶ್ರೀರಾಮುಲು ಅವರಿಗೆ ಕೊಂಚ ಕಷ್ಟವಾಗಬಹುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top