fbpx
ಮನೋರಂಜನೆ

ಕಾಸ್ಟಿಂಗ್ ಕೌಚ್ ಕಾಟದ ಬಗ್ಗೆ ಭೀಕರ ಸತ್ಯವನ್ನು ಬಿಚ್ಚಿಟ್ಟ ನಟಿ ಅನಿತಾ ಭಟ್.

ಸಿನಿಮಾಗಳಲ್ಲಿ ನಟಿಸಲು ಅವಕಾಶ ಕೊಡುವ ಆಮಿಷವೊಡ್ಡಿ ಯುವನಟಿಯರನ್ನು ಮಂಚಕ್ಕೆ ಕರೆಯುವ ಕಾಯಿಲೆ ಎಲ್ಲ ಚಿತ್ರರಂಗಗಳಿಗೂ ಸಾಂಕ್ರಾಮಿಕವಾಗಿ ಹರಡಿಕೊಂಡಂತಿದೆ. ಇತ್ತೀಚೆಗೆ ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ಭಾಷೆಯ ಪ್ರಸಿದ್ಧ ಯುವ ನಟಿಯರನೇಕರು ತಾವು ಅನುಭವಿಸಿದ್ದ ಕಾಸ್ಟಿಂಗ್ ಕೌಚ್ ಮನೋ ವ್ಯಾಕುಲವನ್ನು ಸಾಂದರ್ಭಿಕವಾಗಿ ಬಿಚ್ಚಿಡುತ್ತಿದ್ದಾರೆ.

 

 

ಕೆಲವು ದಿನಗಳ ಹಿಂದೆಯಷ್ಟೇ ಶ್ರುತಿ ಹರಿಹರನ್, ಕೃಷಿ ತಾಪಂಡ ಸೇರಿದಂತೆ ಅನೇಕ ನಟಿಯರು ಇಂಡಸ್ಟ್ರಿಯಲ್ಲಿ ನಡೆಯುತ್ತಿರುವ ಮಂಚಕ್ಕೆ ಕರೆಯುವ ಕೆಟ್ಟ ಪದ್ದತಿಯ ಬಗ್ಗೆ ಮಾತನಾಡಿದ್ದರು ಇದೀಗ ಸ್ಯಾಂಡಲ್ ವುಡ್ ನಲ್ಲಿ ಬೋಲ್ಡ್ ನಟಿ ಎಂತಲೇ ಹೆಸರುವಾಸಿಯಾಗಿರುವ ಅನಿತಾ ಭಟ್ ತಮಗಾದ ಕಾಸ್ಟಿಂಗ್ ಕೌಚ್ ಅನುಭವಗಳ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

‘ಕಾಸ್ಟಿಂಗ್ ಕೌಚ್ ಅನ್ನೋದು ಎಲ್ಲ ಕಡೆಯಲ್ಲೂ ಇದೆ. ಅದೇ ರೀತಿ ಚಿತ್ರರಂಗದಲ್ಲೂ ಇದೆ.. ಈ ಹಿಂದೆ ನನಗೂ ಚಿತ್ರರಂಗದಲ್ಲಿ ಸಾಕಷ್ಟು ನಿರ್ದೇಶಕರು, ನಿರ್ಮಾಪಕರು ಚಿತ್ರದಲ್ಲಿ ನಟಿಸಲು ಚಾನ್ಸ್ ಕೊಡೋದಾಗಿ ಹೇಳಿ ಮಂಚಕ್ಕೆ ಕರೆದು ಆಮಿಷವೊಡ್ಡಿದ್ದರು ಆದರೆ ನಾನು ಅಂತವರನ್ನೆಲ್ಲಾ ನಿರಾಕರಿಸಿದ್ದೇನೆ.. ಅಷ್ಟೆ ಏಕೆ, ನಮ್ಮ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ನಿರ್ದೇಶಕರೊಬ್ಬರು ಕೂಡ ಮಧ್ಯರಾತ್ರಿ ನನಗೆ ಫೋನ್ ಮಾಡಿ ಮಂಚಕ್ಕೆ ಕರೆದಿದ್ದರು’ ಎಂದು ಅನಿತಾ ಹೇಳಿದ್ದಾರೆ.

 

 

ಒಟ್ಟಿನಲ್ಲಿ ಎಲ್ಲ ಭಾಷೆಗಳ ನಟಿಯರೂ ಒಗ್ಗೂಡಿ ಕಾಸ್ಟ್ ಕೌಚಿಂಗ್ ವಿರುದ್ಧ ಸಮರ ಸಾರಿ ತಮ್ಮ ಅನುಕ್ರಮ ಚಿತ್ರರಂಗಗಳಲ್ಲಿ ಈ ಅನಿಷ್ಟ ಪದ್ದತಿಯ ವಿರುದ್ಧ ಕಟ್ಟುನಿಟ್ಟಾದ ನೀತಿ ನಿಯಮಗಳನ್ನು ಜಾರಿಗೆ ತರಿಸಿದರೆ ಮಾತ್ರ ಈ ಕಾಯಿಲೆಯನ್ನು ಕೊಂಚ ಮಟ್ಟಿಗಾದರೂ ವಾಸಿ ಮಾಡಲಾದೀತು! ಇಲ್ಲವಾದರೆ ಯಾವಕರಣಕ್ಕೂ ಈ ರೋಗ ವಾಸಿಯಾಗುವ ಲಕ್ಷಣ ಎಲ್ಲಿಂದ ನೋಡಿದರೂ ಕಾಣಿಸುತ್ತಿಲ್ಲ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top