fbpx
ರಾಜಕೀಯ

ಬಾದಾಮಿ ‘ಮಹಾಭಾರತ’ ಯುದ್ಧ ಗೆಲ್ಲೋದು ಯಾರು.

ರಾಜ್ಯ ವಿಧಾಸಭೆ ಚುನಾವಣೆ ಕಣ ರಂಗೇರಿದೆ. ಎಲ್ಲ ವಿಧಾಸಭಾ ಕ್ಷೇತದಲ್ಲಿ ಅಬ್ಬರದ ಪ್ರಚಾರ ಶುರುವಾಗಿದೆ. ಮತದಾರ ಪ್ರಭು ಕೊನೆಯ ಕ್ಷಣದಲ್ಲಿ ಯಾರಿಗೆ ವಿಜಯಮಾಲೆ ಹಾಕಲಿದ್ದಾನೆ ಕಾದುನೋಡಬೇಕಿದೆ. ಮೇ 12 ಕ್ಕೆ ಚುನಾವಣಾ ಮತದಾನ ನಡೆಯಲಿದ್ದು ಮೇ 15 ಕ್ಕೆ ಫಲಿತಾಂಶ ಬರಲಿದೆ.

 

 

ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತಕ್ಷೇತ್ರ ಈಗ ಎಲ್ಲರ ಕುತೂಹಲ ಮೂಡಿಸಿದೆ. ಹೌದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಸ್ಪರ್ಧೆ ಮಾಡುತ್ತಿರುವುದೇ ಇದಕ್ಕೆ ಕಾರಣ. ಸಿದ್ದರಾಮಯ್ಯಗೆ ಪ್ರಭಲ ಪೈಪೋಟಿ ಒಡ್ಡಲು ಬಿಜೆಪಿ ಶ್ರೀರಾಮುಲು ಅವರನ್ನು ಕಣಕ್ಕಿಳಿಸಿದೆ. ನಿನ್ನೆ ಇಬ್ಬರು ನಾಯಕರು ಅಪಾರ ಅಭಿಮಾನಿಗಳ ಬೆಂಬಲದೊಂದಿಗೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

 

 

ಇಲ್ಲಿ ಕುರುಬ ಸಮುದಾಯದ ಮತಗಳು ಹೆಚ್ಚಾಗಿರುವುದರಿಂದ ಹಾಗು ಹಿಂದಿನ ಬಾರಿ ಕಾಂಗ್ರೆಸ್ ಇಲ್ಲಿ ಗೆದ್ದಿರುವುದರಿಂದ ಇಲ್ಲಿ ಸಿದ್ದರಾಮಯ್ಯ ಕಣಕ್ಕಿಳಿದಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಅವರನ್ನು ಸೋಲಿಸಲು ಬಿಜೆಪಿ ರಣತಂತ್ರ ರೂಪಿಸುತ್ತಲೇ ಇತ್ತು. ಕೊನೆಯ ಕ್ಷಣದಲ್ಲಿ ನಾಯಕ ಸಮುದಾಯದ ಪ್ರಭಾವಿ ನಾಯಕನಾದ ಶ್ರೀರಾಮುಲು ಅವರನ್ನು ಇಲ್ಲಿ ಕಣಕ್ಕಿಳಿಸಿದೆ. ನಾಯಕ ಸಮುದಾಯದ ಮತಗಳು ಕೂಡ ಇಲ್ಲಿ ಜಾಸ್ತಿ ಇರುವುದೇ ಇವರನ್ನು ಕಣಕ್ಕಿಳಿಸಿರುವದಕ್ಕೆ ಕಾರಣ ಎನ್ನಲಾಗುತ್ತಿದೆ. ಸಿದ್ದರಾಮಯ್ಯ ಹಾಗು ಶ್ರೀರಾಮುಲು ಬಾದಾಮಿಯ ಜೊತೆಗೆ ಇನ್ನೊಂದು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ ಹಾಗು ಶ್ರೀರಾಮುಲು ಮೊಳಕಾಲ್ಮುರ್ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ.

 

ಸಿದ್ದರಾಮಯ್ಯ ಅವರನ್ನು ಗೆಲ್ಲಿಸಲು ಸತೀಶ ಜಾರಕಿಹೊಳಿ ಕ್ಷೇತ್ರದಲ್ಲೇ ಇದ್ದು ಸಿದ್ದರಾಮಯ್ಯ ಪರ ಪ್ರಚಾರ ಮಾಡುತ್ತೇನೆ ಎಂದು ಹೇಳಿದ್ದಾರೆ. ರಾಮುಲು ಪರ ಪ್ರಚಾರ ಮಾಡಲು ಬಿಜೆಪಿ ಪ್ರಮುಖ ನಾಯಕರು ಕ್ಷೇತ್ರಕ್ಕೆ ಲಗ್ಗೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಕ್ಷೇತ್ರ ಅತ್ಯಂತ ಕುತೂಹಲ ಮೂಡಿಸಿದ್ದು ಮತದಾದರೂ ಯಾರಿಗೆ ವಿಜಯ ಮಾಲೆ ಹಾಕುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top