fbpx
ರಾಜಕೀಯ

ಸ್ವಂತ ಕ್ಷೇತ್ರದಲ್ಲೇ ನೆಲೆಯಿಲ್ಲ ಸಿಎಂ ಸಿದ್ದರಾಮಯ್ಯನವರಿಗೆ ಕುಟುಕಿದ ಶೆಟ್ಟರ್

5 ವರ್ಷ ಕರ್ನಾಟಕ ರಾಜ್ಯವನ್ನು ಆಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸ್ವಂತ ಕ್ಷೇತ್ರದಲ್ಲೇ ನೆಲೆ ಇಲ್ಲ ಎಂದು ವಿಧಾನಸಭೆಯ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ವ್ಯಂಗ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

 

ಬೆಂಗಳೂರಿನಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್ ರವರು, ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಒತ್ತಡಕ್ಕೆ ಮಣಿದು ಎರಡು ಮತಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಅವಕಾಶ ಕೊಟ್ಟಿದೆ. ಸಿದ್ದರಾಮಯ್ಯಗೆ ತಮ್ಮದೇ ಕ್ಷೇತ್ರದಲ್ಲಿ ನಿಂತು ಗೆದ್ದು ಬರುವ ವಿಶ್ವಾ ಇಲ್ಲ. ಇಂಥ ದುರ್ಬಲ ಮುಖ್ಯಮಂತ್ರಿಯನ್ನು ನೋಡಿಯೇ ಇಲ್ಲ. ಸದ್ಯ ಕಾಂಗ್ರೆಸ್ ಹೈಕಮಾಂಡ್ ಎಂದರೆ ಸಿದ್ದರಾಮಯ್ಯ ಅವರೇ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.

 

 

ರಾಜ್ಯ ವಿಧಾಸಭೆ ಚುನಾವಣೆ ಕಣ ರಂಗೇರಿದೆ. ಎಲ್ಲ ವಿಧಾಸಭಾ ಕ್ಷೇತದಲ್ಲಿ ಅಬ್ಬರದ ಪ್ರಚಾರ ಶುರುವಾಗಿದೆ. ಮತದಾರ ಪ್ರಭು ಕೊನೆಯ ಕ್ಷಣದಲ್ಲಿ ಯಾರಿಗೆ ವಿಜಯಮಾಲೆ ಹಾಕಲಿದ್ದಾನೆ ಕಾದುನೋಡಬೇಕಿದೆ. ಮೇ 12 ಕ್ಕೆ ಚುನಾವಣಾ ಮತದಾನ ನಡೆಯಲಿದ್ದು ಮೇ 15 ಕ್ಕೆ ಫಲಿತಾಂಶ ಬರಲಿದೆ.

 

 

ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತಕ್ಷೇತ್ರ ಈಗ ಎಲ್ಲರ ಕುತೂಹಲ ಮೂಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಸ್ಪರ್ಧೆ ಮಾಡುತ್ತಿರುವುದೇ ಇದಕ್ಕೆ ಕಾರಣ. ಸಿದ್ದರಾಮಯ್ಯಗೆ ಪ್ರಭಲ ಪೈಪೋಟಿ ಒಡ್ಡಲು ಬಿಜೆಪಿ ಶ್ರೀರಾಮುಲು ಅವರನ್ನು ಕಣಕ್ಕಿಳಿಸಿದೆ. ನಿನ್ನೆ ಇಬ್ಬರು ನಾಯಕರು ಅಪಾರ ಅಭಿಮಾನಿಗಳ ಬೆಂಬಲದೊಂದಿಗೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top