fbpx
ರಾಜಕೀಯ

ಚಾಮುಂಡೇಶ್ವರಿ ಮತ್ತು ಬಾದಾಮಿಯಲ್ಲಿ ಸಿಎಂ ಸಿದ್ದು ಪರ ಪ್ರಚಾರಕ್ಕಿಳಿಯುತ್ತಾರೆಯೇ ಕಿಚ್ಚ ಸುದೀಪ್?

ಸದ್ಯಕ್ಕೆ ಎಲ್ಲೆಲ್ಲೂ ಚರ್ಚೆಗೆ ಗ್ರಾಸವಾಗಿರುವ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಲ್ಲಷ್ಟೇ ಬಾಕಿ ಉಳಿದಿದ್ದು ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ನಾನಾ ರಾಜಕೀಯ ಪಾರ್ಟಿಗಳು ಬಗೆಬಗೆಯ ಸ್ಟೇಟರ್ಜಿಗಳನ್ನು ಮಾಡಿಕೊಳ್ಳುತ್ತಿವೆ.. ಇಂಥಾ ವಾತಾವರಣದಲ್ಲಿ ರಾಜಕೀಯ ವಲಯದಲ್ಲಿ ಬಿರುಸಿನ ವಾತಾವರಣ ಇರೋದು ಸಹಜವೇ. ಆದರೆ ಈ ಸಲ ಚಿತ್ರರಂಗದಲ್ಲಿಯೂ ಚುನಾವಣಾ ಪ್ರಭಾವ ಕೂಡ ಬಲು ಜೋರಾಗಿದೆ.. ಆ ಸ್ಟಾರ್ ಅಲ್ಲಿ ಪ್ರಚಾರ ಮಾಡ್ತಾನಂತೆ ಈ ಸ್ಟಾರ್ ಇಲ್ಲಿ ಪ್ರಚಾರ ಮಾಡ್ತಾನಂತೆ ಎನ್ನುವ ಸಮಾಚಾರಗಳಿಗೇನು ಕಮ್ಮಿಯಿಲ್ಲ ಆದರೆ ಇದೀಗ ಚುನಾವಣಾ ಪ್ರಚಾರಕ್ಕೆ ಧುಮುಕಲು ಕಿಚ್ಚ ಸುದೀಪ್ ರೆಡಿಯಾಗಿದ್ದಾರೆ ಎನ್ನುವ ಪಕ್ಕ ಮಾಹಿತಿಯನ್ನು ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಬಾಯಿಬಿಟ್ಟಿದ್ದಾರೆ,

 

 

ಸಿಎಂ ಸಿದ್ದರಾಮಯ್ಯ ಅವರು ಸ್ಪರ್ಧಿಸಿರುವ ಚಾಮುಂಡೇಶ್ವರಿ ಮತ್ತು ಬಾದಾಮಿ ವಿಧಾನ ಸಭಾ ಕ್ಷೇತ್ರಗಳು ತೀವ್ರ ಕುತೂಹಲ ಕೆರಳಿಸಿದ್ದು ಈ ಎರಡು ಕ್ಷೇತ್ರಗಳು ಸಿದ್ದರಾಮಯ್ಯನವರಿಗೆ ಸುಲಭದ ತುತ್ತಲ್ಲ ಎಂದು ಸಮೀಕ್ಷೆಗಳು ಹೇಳುತ್ತಿವೆ. ಈ ನಿಟ್ಟಿನಲ್ಲಿ ಏನಾದರೂ ಮಾಡಿ ಎರಡೂ ಕ್ಷೇತ್ರಗಳಲ್ಲಿಯೂ ಜಯಭೇರಿ ಬಾರಿಸಬೇಕು ಎಂದು ಅಚಲ ಪಣ ತೊಟ್ಟಿರುವ ಸಿದ್ದು ಎರಡೂ ಕ್ಷೇತ್ರಗಳಲ್ಲಿಯೂ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ..

ಈ ವೇಳೆ ಮೈಸೂರಿನ ಮಾಧ್ಯಮದವರ ಜೊತೆ ಮಾತನಾಡುವಾಗ “ಸಿನಿಮಾ ತಾರೆಯರು ಯಾರಾದರೂ ಪ್ರಚಾರಕ್ಕೆ ಕರೆಸುವ ಪ್ಲಾನ್ ಏನಾದರೂ ಇದೆಯಾ” ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸಿಎಂ ಸಿದ್ದು ಯಾರನ್ನು ಕರೆಸುತ್ತಿಲ್ಲ ಎಂದು ಹೇಳಿ ಕೊನೆಯಲ್ಲಿ, “ಕ್ರಿಕೆಟ್ ಟೂರ್ನಿಮೆಂಟ್ ಉದ್ಘಾಟನಾ ಸಮಾರಂಭಕ್ಕೆ ನನ್ನನ್ನು ಆಹ್ವಾನಿಸಲು ಸುದೀಪ್ ಅವರು ಬಂದಿದ್ದಾಗ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರಕ್ಕೆ ಬರುವಂತೆ ಅವರಲ್ಲಿ ಕೇಳಿಕೊಂಡಿದ್ದೆ ಆದರೆ ಅವರು ಎಲ್ಲರಿಗೂ ಆಗಲ್ಲ ನಿಮ್ಮೊಬ್ಬರಿಗೆ ಮಾತ್ರ ಬಂದು ಪ್ರಚಾರ ಮಾಡಿಕೊಡುತ್ತೇನೆ ಅಂತ ಹೇಳಿದ್ದರು ಆದರೆ ಇನ್ನೂ ನಾನು ಆ ಬಗ್ಗೆ ಆವರಣ ಕೇಳೋದಕ್ಕೆ ಹೋಗಿಲ್ಲ” ಎಂದು ಸಿಎಂ ಸಿದ್ದರಾಮಯ್ಯ ಉತ್ತರಿಸಿದರು.

 

 

ಸಿಎಂ ಅವರ ಈ ಮಾತುಗಳಂತೆ ಕಿಚ್ಚ ಸುದೀಪ್ ಅವರು ಸಿಎಂ ಸಿದ್ದು ಪರ ಪ್ರಚಾರ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಹಿಂದೆ ಸುದೀಪ್ ಅವರು ಜೆಡಿಎಸ್ ಪಕ್ಷದ ಸ್ಟಾರ್ ಕ್ಯಾಂಪೈನರ್ ಆಗುತ್ತಾರೆ ಎನ್ನುವ ಸುದ್ದಿ ಹರಡಿತ್ತಾರೋ ಇನ್ನೂ ಯಾವುದೇ ಅಭ್ಯರ್ಥಿಯ ಪರವಾಗಿ ಮತಯಾಚನೆ ಮಾಡಲು ಸುದೀಪ್ ಇಳಿದಿಲ್ಲ. ಹಾಗೇನಾದರೂ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದರೆ ಯಾವುದೇ ವಿವಾದ, ವಿನಾ ಕಾರಣ ಮಾತುಗಳಿಂದ ದೂರವಿರುವ ಸುದೀಪ್ ಬಗ್ಗೆ ಕರ್ನಾಟಕದ ತುಂಬಾ ಗೌರವಾಧರಗಳಿದ್ದು ಅದುವೇ ಎಲ್ಲ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳಿಗೆ ಶ್ರೀರಕ್ಷೆಯಾಗಲಿದೆ!

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top