fbpx
ರಾಜಕೀಯ

ವಿಜಯೇಂದ್ರಗೆ ಟಿಕೆಟ್​​​​​ ತಪ್ಪಿದ ಹಿನ್ನಲೆ ವರುಣಾದಲ್ಲಿ ನೊಂದ ಬಿಜೆಪಿ ಕಾರ್ಯಕರ್ತರಿಂದ ನೋಟಾ ಅಭಿಯಾನ

ಕರ್ನಾಟಕ ವಿಧಾನಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಭರದಿಂದ ಸಾಗುತ್ತಿದೆ ರಾಜ್ಯದ ಪ್ರತಿಷ್ಠಿತ ಕ್ಷೇತ್ರವಾಗಿರುವ ವರುಣಾ ಕ್ಷೇತ್ರದಿಂದ ಸಿಎಂ ಸಿದ್ದರಾಮಯ್ಯ ಅವರ ಮಗನಾದ ಯತೀಂದ್ರ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದು ಇವರ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಮಗನಾದ ವಿಜಯೇಂದ್ರ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಲಾಗುತ್ತಿತ್ತು ಆದರೆ ವಿಜಯೇಂದ್ರ ಅವರಿಗೆ ಕೊನೆ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿದೆ. ಇದರಿಂದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದರು.

 

 

ಹೋರಾಟ ಮಾಡಿದ್ದ ಕಾರ್ಯಕರ್ತರು ಈಗ ಒಂದು ಹೆಜ್ಜೆ ಮುಂದೆ ಹೊಗಿ ನೋಟಾ ಅಭಿಯಾನವನ್ನ ಶುರು ಮಾಡಿದ್ದಾರೆ, ಈಗ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​​​ ವೈರಲ್​​ ಆಗುತ್ತಿದೆ. ಈ ನೋಟಾ ಅಭಿಯಾನ ಮುಂದುವರೆದಿದ್ದು, ಮನೆ ಮನೆಗೆ ಕರಪತ್ರಗಳನ್ನ ಕೂಡ ಹಂಚುತ್ತಿದ್ದಾರೆ ಎಂದು ತಿಳಿದು ಬಂದಿದೆ.

 

 

ನೋಟಾ ಅಭಿಯಾನಕ್ಕೆ ಕರಪತ್ರಗಳನ್ನ ಸಿದ್ದ ಮಾಡಿದ್ದೂ, ಅದರಲ್ಲಿ ಕೇಂದ್ರ ಸಚಿವ ಅನಂತ್‌ಕುಮಾರ್, ಆರ್‌ಎಸ್‌ಎಸ್ ಮುಖಂಡ ಸಂತೋಷ್ ಹೆಸರು ಉಲ್ಲೇಖ ಮಾಡಿದ್ದಾರೆ ಎಂದು ತಿಳಿದು ಬಂದಿದೆ, ನಿಮ್ಮ ಗರ್ವಭಂಗಕ್ಕಾಗಿ ಈ ಬಾರಿ ನೋಟಾ ಚಲಾವಣೆ ಎಂದು ಬರೆಯಲಾಗಿದೆ.

 

 

ಈ ಕರಪತ್ರಗಳ ಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿವೆ ಎಂದು ತಿಳಿದು ಬಂದಿದೆ. ಈ ಬಗ್ಗೆ ವಿಜಯೇಂದ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top