fbpx
ರಾಜಕೀಯ

ಅಮಿತ್ ಶಾ ಹೆಲಿಪ್ಯಾಡ್ ಗಾಗಿ ಅಮಾಯಕ ರೈತನ ಹೊಲ ನಾಶಗೊಳಿಸಿದ ಬಿಜೆಪಿಗರು

ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೆಲಿಪ್ಯಾಡ್ ಗಾಗಿ ಅಮಾಯಕ ರೈತರೊಬ್ಬರ ಹೊಲವನ್ನು ನಾಶ ಮಾಡಿರುವ ಆರೋಪ ಕೇಳಿ ಬರುತ್ತಿದೆ.

 

 

ಬಿಜೆಪಿಯ ಪಕ್ಷದವರು ಜಗದೀಶ್ ಕರಡಿ ಎಂಬ ರೈತರ ಹೊಲದ ಬಂದು ಒಡೆದು ಜಾಗ ಸಮ ಮಾಡಿದ್ದಾರೆ ಎನ್ನಲಾಗಿದೆ. ಇದನ್ನು ಪ್ರಶ್ನೆ ಮಾಡಿದಕ್ಕೆ ರೈತನಿಗೆ ಅವಾಚ್ಯ ಶಬ್ಧದಿಂದ ನಿಂದನೆ ಮಾಡಿದ್ದಾರೆ ಎನ್ನಲಾಗಿದೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಇಳಕಲ್ ನಗರದ ನಾಗೂರು ರಸ್ತೆ ಬಳಿಯ ಹೆಲಿಪ್ಯಾಡ್ ಬಳಿ ಸರ್ವೆ ನಂಬರ್ 111 ರ ಹೊಲವನ್ನು ಬಿಜೆಪಿಯವರು ನಾಶ ಮಾಡಿದ್ದಾರೆ. ದೊಡ್ಡನಗೌಡ ಪಾಟಿಲ್, ಮಂಜು ಶೆಟ್ಟರ್, ಮಲ್ಲಯ್ಯ ಮೂಗನೂರಮಠ, ಸುಗೂರೇಶ್ ನಾಗಲೋಟಿ, ಶ್ಯಾಮಸುಂದರ ಎಂಬುವವರ ವಿರುದ್ಧ ರೈತ ಇಳಕಲ್ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

 

 

ಅಮಿತ್ ಷಾ ಪ್ರಚಾರಕ್ಕೆ ಆಗಮಿಸಿ ಹುನಗುಂದದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದರು ಈ ವೇಳೆ ಅವರಿಗೆ ಶಾಸಕ ಲಕ್ಷ್ಮಣ ಸವದಿ ಮತ್ತು ಹುನಗುಂದ ಮುಖಂಡರು ಸಾಥ್ ನೀಡಿದರು ಎನ್ನಲಾಗಿದೆ.

 

 

ಚುನಾವಣೆಗೆ ಮತದಾನ ಮೇ 12 ರಂದು ನಡೆಯಲಿದ್ದು ಮೇ 15 ರಂದು ಫಲಿತಾಂಶ ಹೊರಬೀಳಲಿದೆ. ಎಲ್ಲ ರಾಜಕೀಯ ಪಕ್ಷಗಳು ಗೆಲ್ಲಲೇಬೇಕೆಂಬ ಪಣ ತೊಟ್ಟಿದ್ದು ರಾಜಕೀಯ ರಣತಂತ್ರ ಹೆಣೆಯುತ್ತಿವೆ. ರಾಹುಲ್ ಗಾಂಧಿ ಪ್ರಚಾರಕ್ಕೆ ಆಗಮಿಸಿದ್ದು, ಮೋದಿ ಕೂಡ ಮೇ ಮೊದಲ ವಾರದಲ್ಲಿ ಪ್ರಚಾರಕ್ಕೆ ಆಗಮಿಸಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top