fbpx
ರಾಜಕೀಯ

ಗಣಿ ಧಣಿ ಮನೆ ಮುಂದೇನೆ ಸಿದ್ಧವಾಯ್ತು ಚೆಕ್ ಫೋಸ್ಟ್ ಯಾಕ್ ಗೊತ್ತಾ

ಶ್ರೀರಾಮುಲು ಈ ಬಾರಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ವಿಧಾಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದು. ಗೆಳೆಯನ ಪ್ರಚಾರದ ಜವಾಬ್ದಾರಿ ಹೊತ್ತಿರುವ ಜನಾರ್ಧನ ರೆಡ್ಡಿ ಮೊಳಕಾಲ್ಮುರು ವಿಧಾಸಭಾ ಕ್ಷೇತ್ರದಲ್ಲೇ ಮನೆ ಮಾಡಿ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ಜನಾರ್ಧನ ರೆಡ್ಡಿ ವಾಸ್ತವ್ಯ ಮಾಡಿರುವ ಮೊಳಕಾಲ್ಮೂರು ತಾಲೂಕಿನ ಮೇಗಲಹಟ್ಟಿ ಸಮೀಪದ ಫಾರಂಹೌಸ್‌ ಬಳಿಯೇ ಚುನಾವಣಾ ಆಯೋಗ ಈಗ ಚೆಕ್ ಪೋಸ್ಟ್ ನಿರ್ಮಾಣ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

 

ಹಿಂದಿನ ಬಾರಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಗಣಿ ಹಗರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ವಿರುದ್ಧ ದಾಖಲಾಗಿರುವ ಪ್ರಕರಣಗಳ ವಿಚಾರಣೆ ಇನ್ನು ನ್ಯಾಯಾಲಯದಲ್ಲಿ ಬಾಕಿ ಇವೆ ಎನ್ನಲಾಗಿವೆ. ಇದರಿಂದ ಅವರಿಗೆ ಬಳ್ಳಾರಿ ಪ್ರವೇಶ ನಿಷೇಧಿಸಲಾಗಿದೆ. ಹಾಗಾಗಿ ಬಳ್ಳಾರಿ ಗಡಿಗೆ ಹೊಂದಿಕೊಂಡಿರುವ ಚಿತ್ರದುರ್ಗದಲ್ಲೇ ವಾಸ್ತವ್ಯ ಮಾಡಿ ತಮ್ಮ ಆಪ್ತರ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ ಎನ್ನಲಾಗಿದೆ.

 

 

ಮೊಳಕಾಲ್ಮೂರು ತಾಲೂಕಿನ ಮೇಗಲಹಟ್ಟಿ ಸಮೀಪದ ಫಾರಂಹೌಸ್‌ ನಲ್ಲಿ ಜನರಾಧನಾ ರೆಡ್ಡಿ ಎರಡು ಜಿಲ್ಲೆಯ ಪ್ರಚಾರ ನೋಡಿಕೊಳ್ಳುತ್ತಿದ್ದಾರೆ. ಇವರ ಫಾರಂಹೌಸ್‌ ನಿಂದ ಕೇವಲ 50 ಮೀಟರ್ ದೂರದಲ್ಲೇ ಚುನಾವಣಾ ಆಯೋಗ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಕೇಂದ್ರೀಯ ಮೀಸಲು ಪಡೆಯ ಆರು ಸಿಬ್ಬಂದಿ, ಇಬ್ಬರು ಪೊಲೀಸ್‌ ಮತ್ತು ಮೂವರು ಚುನಾವಣಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

 

 

ಚುನಾವಣೆಗೆ ಮತದಾನ ಮೇ 12 ರಂದು ನಡೆಯಲಿದ್ದು ಮೇ 15 ಕ್ಕೆ ಫಲಿತಾಂಶ ಹೊರಬೀಳಲಿದೆ. ಯಾರು ಗೆಲ್ಲಲಿದ್ದಾರೆ ಎಂದು ಕಾದುನೋಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top