fbpx
ರಾಜಕೀಯ

ನಾಮಪತ್ರದಲ್ಲಿ ಯಡವಟ್ಟು ಮಾಡ್ಕೊಂಡ ರಾಮಲಿಂಗಾ ರೆಡ್ಡಿಗೆ ಸಂಕಷ್ಟ ಎದುರಾಗಿದೆ

ಕರ್ನಾಟಕ ವಿಧಾಸಭೆ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ ಅನೇಕರ ನಾಮಪತ್ರ ತಿರಸ್ಕಾರ ಆಗಿದ್ದವು. ಕಾಂಗ್ರೆಸ್ ಅಭ್ಯರ್ಥಿ ಸಚಿವ ರಾಮಲಿಂಗಾರೆಡ್ಡಿಗೆ ಸಂಕಷ್ಟ ಎದುರಾಗಿದೆ ಎಂದು ತಿಳಿದು ಬಂದಿದೆ. ರಾಮ ಲಿಂಗಾರೆಡ್ಡಿ ವಿರುದ್ಧ ಸಹಿ ಮಾಡದ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಎಂದು ಆರೋಪವೊಂದು ಕೇಳಿಬಂದಿದೆ.

 

 

ನಾಮಪತ್ರದಲ್ಲಿ ಸಲ್ಲಿಸಿರುವ ಮಾಹಿತಿಯನ್ನ ಪ್ರಮಾಣೀಕರಿಸಿದ ಮೇಲೆ ಸಹಿ ಮಾಡಬೇಕು. ಆದರೆ ರಾಮಲಿಂಗಾರೆಡ್ಡಿ ನಾಮಪತ್ರದಲ್ಲಿ ಸಹಿ ಮಾಡಿಲ್ಲ. ಅಲ್ಲದೇ ಸಹಿ ಮಾಡದ ನಾಮಪತ್ರವನ್ನ ಬಿಟಿಎಂ ಲೇಔಟ್ ಆರ್ ಓ ರಂಗಪ್ಪ ಅವರು ಚುನಾವಣಾ ಆಯೋಗಕ್ಕೂ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

 

 

ಈ ಬಗ್ಗೆ ಮಾತನಾಡಿರುವ ಕರ್ನಾಟಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ನಾಮಪತ್ರವನ್ನ ತಿರಸ್ಕಾರ ಮಾಡಬೇಕು ಎಂದು ದೂರು ಸಲ್ಲಿಕೆ ಮಾಡಿದ್ದಾರೆ. ಇತ್ತ ಆಯೋಗ ಕೂಡ ತಮ್ಮ ವೆಬ್ ಸೈಟ್ ನಲ್ಲೂ ಸಹಿ ಮಾಡದ ನಾಮಪತ್ರವನ್ನೇ ಅಪ್ಲೋಡ್ ಮಾಡಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ರಾಮಲಿಂಗಾರೆಡ್ಡಿ ಚುನಾವಣೆಗೆ ಒಬ್ಬರು ಮೂರೂ ನಾಮಪತ್ರ ಸಲ್ಲಿಕೆ ಮಾಡಬಹದು. ಎರಡು ನಾಮಪತ್ರದಲ್ಲಿ ಸರಿ ಇದೆ ಒಂದರಲ್ಲಿ ಮಿಸ್ ಆಗಿದೆ ಎಂದು ಹೇಳಿದ್ದಾರೆ. ಆಯೋಗ ಇದನ್ನೇ ಅಪ್ಲೋಡ್ ಮಾಡಿರಬಹುದು ಎಂದು ಹೇಳಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top