fbpx
ವಿಶೇಷ

ನೀವು ಮಾಡಿದ್ದೆ ಕೆಲಸ ಮಾಡಿ ಬೋರ್ ಆಗಿದೆ ಅಂದ್ರೆ ಈ 10 ವಿಚಿತ್ರ ಕೆಲಸಗಳನ್ನ ಟ್ರೈ ಮಾಡಿ ಆಶ್ಚರ್ಯ ಆಗುತ್ತೆ ಜೊತೆಗೆ ಕೈ ತುಂಬಾ ದುಡ್ಡು ಸಿಗುತ್ತೆ

ಪ್ರಪಂಚದಲ್ಲಿ ವಿವಿಧ ರೀತಿಯ ಕೆಲಸಗಳನ್ನು ನಾವು ನೋಡಿರುತ್ತೇವೆ ಆದರೆ ಕೆಲವು ಕೆಲಸಗಳಂತೂ ಬಹಳ ಭಯಂಕರವಾಗಿದ್ದರೆ ಇನ್ನೂ ಕೆಲವು ಕೆಲಸಗಳು ಬಹಳ ವಿಚಿತ್ರವಾಗಿರುತ್ತದೆ , ಈ ವಿಚಿತ್ರ ಕೆಲಸಗಳಿಗೆ ಹಾಗೆಯೇ ಕೈತುಂಬಾ ಸಂಬಳ ಕೂಡ ಕೊಡ್ತಾರೆ.

ಅಯ್ಯೋ ಇವೆಲ್ಲಾ ಒಂದು ಕೆಲಸನಾ ಅಂತ ನೀವು ಮೂಗು ಮುರಿಯುತ್ತಿದ್ದರೆ ಇದನ್ನೇ ಬಂಡವಾಳ ಮಾಡಿಕೊಂಡು ತಮ್ಮ ಜೇಬನ್ನು ತುಂಬಿಸಿಕೊಳ್ಳುತ್ತಿರುವ ಜನ ತುಂಬಾನೇ ಇದ್ದಾರೆ ಆ ರೀತಿಯ ವಿಚಿತ್ರ ಉದ್ಯೋಗಗಳ ಬಗ್ಗೆ ನಾವೀಗಾ ತಿಳಿದುಕೊಳ್ಳೋಣ ಬನ್ನಿ .

 

ಬಾಡಿಗೆ ಬಾಯ್ ಫ್ರೆಂಡ್

 

 

ಜಪಾನ್ ದೇಶದಲ್ಲಿ ಬಾಯ್ ಫ್ರೆಂಡ್ ಗಳನ್ನು ಸಹ ಬಾಡಿಗೆಗೆ ಪಡೆದುಕೊಳ್ಳುತ್ತಾರಂತೆ ಇದಕ್ಕಾಗಿ ಹೆಂಗಸರು ಕ್ಯೂನಲ್ಲಿದ್ದ ತಮ್ಮ ಬಾಯ್ಫ್ರೆಂಡ್ ಗಳಿಗಾಗಿ ಜೆಬಿ ತುಂಬಾ ಹಣ ಸುರಿದು ತಮ್ಮ ಜೊತೆಗೆ ಡೇಟಿಂಗ್ಗಾಗಿ ಕರೆದುಕೊಂಡು ಹೋಗುತ್ತಾರಂತೆ.

 

ಟಿಕೆಟ್ ಬಾಯ್

 

 

ಸಿನಿಮಾ ನೋಡೋಕೆ ಆಸೆ ಆದರೆ ಈ ದೊಡ್ಡ ದೊಡ್ಡ ಕ್ಯೂಗಳನ್ನು ನೋಡಿದರೆ ಭಯ ಆಗಿರುತ್ತೆ ಅಂತವರು ಏನ್ ಮಾಡ್ತಾರೆ ಅಂತ ಹೇಳಿದ್ರೆ ಕೆಲವು ಜನಗಳು ಟಿಕೆಟ್ ಖರೀದಿ ಮಾಡಿಕೊಡೋಕೆ ಅಂತಾನೇ ನಿಂತಿರುತ್ತಾರೆ ಇವರಿಗೆ ಇಷ್ಟು ದುಡ್ಡು ಅಂತ ಕೊಡಬೇಕಾಗುತ್ತದೆ , ಕ್ಯೂನಲ್ಲಿ ನಿಂತು ಟಿಕೆಟ್ ಕೊಂಡು ಕೊಡುವುದೇ ಇವರ ಕೆಲಸ ಇದಕ್ಕಾಗಿ ಇವರಿಗೆ ಜೇಬು ತುಂಬಾ ಹಣ ಕೊಡುತ್ತಾರೆ .

 

ನಿದ್ದೆ ಮಾಡೋದು

 

 

ಹೌದು ನಿದ್ದೆ ಮಾಡುವುದು ಕೂಡ ಒಂದು ಕೆಲಸ ಅಂತ ವಿಜ್ಞಾನಿಗಳು ಕೂಡ ಅನೇಕ ರೀತಿಯ ಸಂಶೋಧನೆಗಳನ್ನು ನಡೆಸುತ್ತಾ ಇರುತ್ತಾರೆ ,ಈ ರೀತಿ ಸಂಶೋಧನೆಗಳಲ್ಲಿ ನಿದ್ದೆ ಮಾಡುವವರ ಅವಶ್ಯಕತೆ ತುಂಬಾನೆ ಇದೆ ಅದಕ್ಕಾಗಿ ಸೋಮಾರಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ,ಆಯ್ಕೆ ಮಾಡಿಕೊಂಡು ಅವರ ಮೆದುಳಿನ ಚಟುವಟಿಕೆಗಳನ್ನು ಸಂಶೋಧನೆ ನಡೆಸುತ್ತಾರೆ ಇದಕ್ಕಾಗಿ ಕೈತುಂಬಾ ದುಡ್ಡು ಕೊಡ್ತಾರೆ .

 

ಮದುವೆಗೆ ಬರೋಕೆ ದುಡ್ಡು ಕೊಡ್ತಾರೆ

 

 

ಜಪಾನ್ ನಲ್ಲಿ ಮದುವೆಗಳಿಗಾಗಿ ಕೆಲವರನ್ನು ದುಡ್ಡು ಕೊಟ್ಟು ಕರೆಸುತ್ತಾರಂತೆ, ನಮ್ಮ ಭಾರತ ದೇಶದಲ್ಲಾದರೆ ಕರೀದೆ ಇದ್ರೂ ಸಹ ಬಂದು ಹೊಟ್ಟೆ ತುಂಬಾ ತಿಂದು ಹೋಗ್ತಾರೆ ಆದರೆ ಜಪಾನ್ ನಲ್ಲಿ ದುಡ್ಡು ಕೊಟ್ಟು ಇವರನ್ನು ಮದುವೆಗೆ ಅಂತ ಆರಿಸಿಕೊಳ್ಳುತ್ತಾರೆ ಇದಕ್ಕೆ ಅಂತ ಕೆಲಸ ಕಾರ್ಯ ಬಿಟ್ಟು ಕೆಲವು ಜನ ಇರ್ತಾರಂತೆ .

 

ವಾಂತಿ ಕ್ಲೀನ್ ಮಾಡೋರು

 

 

ಹೌದು ಕೆಲವು ಅಮ್ಯೂಸ್ಮೆಂಟ್ ಪಾರ್ಕ್ಗಳಲ್ಲಿ ಕೆಲವು ರೈಡ್ ಗಳಿಗೆ ಹೋದಾಗ ವಾಂತಿ ಬರುವುದು ಸಹಜವೇ ಆದರೆ ಈ ವಾಂತಿ ಬಂದವರನ್ನು ತೊಳೆದು ಶುಭ್ರ ಮಾಡಿ ವಾಂತಿ ಮಾಡಿರುವ ಜಾಗವೆಲ್ಲ ಕ್ಲೀನ್ ಮಾಡೋದೆ ಇವರ ಕೆಲಸ ಇದಕ್ಕೆ ಅಂತ ಇವರಿಗೆ ಕೈತುಂಬ ದುಡ್ಡು ಕೊಡ್ತಾರೆ .

 

ಡಿಯೋಡ್ರೆಂಟ್ ಟೆಸ್ಟರ್

 

 

ಇವರ ಕೆಲಸ ಏನು ಅಂದ್ರೆ ಯಾರ್ಯಾರು ಯಾವ ಯಾವ ರೀತಿಯ ಡಿಯೋಡ್ರೆಂಟ್ ಮೈಮೇಲೆ ಹಾಕ್ಕೊಂಡಿದ್ದಾರೆ ಅಂತ ಮೂಸಿ ನೋಡೋದು, ಹೀಗೆ ಮೂಸಿ ನೋಡೋದ್ರಿಂದ ಏನಾಗುತ್ತೆ ಅಂತ ಅಂದ್ರೆ ಮನುಷ್ಯರ ಮೈನಾ ವಾಸನೆ ಒಂದು ರೀತಿ ಇದ್ದರೆ ಡಿಯೋ ಟ್ರೆಂಡ್ನ ವಾಸನೆ ಇನ್ನೊಂದು ರೀತಿ ಇರುತ್ತದೆ ಇದು ಮನುಷ್ಯರ ವಾಸನೆಗೆ ಹೇಗೆ ಕೆಲಸ ಮಾಡುತ್ತದೆ ಅಂತ ತಿಳಿದುಕೊಳ್ಳಲಾಗುತ್ತದೆ ಇದೆ ಇವರ ಕೆಲಸ ಇದಕ್ಕಾಗಿ ಲಕ್ಷಾಂತರ ರೂಪಾಯಿ ಸಂಬಳವನ್ನು ಸಹ ಕೊಡುತ್ತಾರೆ .

 

ಹೆಣದ ಮುಂದೆ ಅಳೋರು

 

 

ಶವದ ಮುಂದೆ ಕೂತ್ಕೊಂಡು ಅಳೋರು ಹೌದು ನಮ್ಮ ಭಾರತ ದೇಶದಲ್ಲಿ ಕೆಲವು ದಕ್ಷಿಣ ಭಾರತದ ಪ್ರಾಂತ್ಯಗಳಲ್ಲಿ ಎದೆ ಎದೆ ಬಡ್ಕೊಂಡು ಅಳುತ್ತಾರೆ ಆದರೆ ವಿದೇಶಗಳಲ್ಲಿ ಇದೆ ಒಂದು ಕೆಲಸ ಅಂದ್ರೆ ನೀವು ನಂಬಲೇಬೇಕು, ಇಲ್ಲಿ ಚೆನ್ನಾಗಿ ಅತ್ರೆ ಸತ್ತು ಹೋದವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಅಂತ ನಂಬಿಕೊಂಡಿದ್ದಾರೆ ಅದಕ್ಕಾಗಿ ಸಾವಿರಾರು ರೂಪಾಯಿ ದುಡ್ಡು ಕೊಟ್ಟು ಅಳೋದಕ್ಕೆ ಅಂತ ಜನ ಸಿಗ್ತಾರೆ .

 

ಎಲಿಫೆಂಟ್ ಟೆಸ್ಟರ್

 

 

ಆನೆ ಸರಿಯಾಗಿ ಜೀರ್ಣ ಮಾಡ್ಕೊಳ್ತಾ ಇದೆಯಾ ಆದರೂ ಹೊಟ್ಟೆಯಲ್ಲಿ ನಾರು ಕಸ ಇದೆಯಾ, ಆರೋಗ್ಯ ಸರಿ ಇದೆಯಾ, ಈ ರೀತಿಯ ಟೆಸ್ಟ್ ಗಳನ್ನು ಇವರು ಮಾಡಬೇಕಾಗುತ್ತದೆ ಇದಕ್ಕೆ ಇವರು ಆನೆಯ ಗುದದ್ವಾರದ ಮೂಲಕ ಒಳಗೆ ಹೋಗಬೇಕಾಗುತ್ತದೆ ಇವರನ್ನು ಎಲಿಫೆಂಟ್ ಟೆಸ್ಟರ್ ಎಂದು ಕರೆಯುತ್ತಾರೆ ,ಒಂದು ಭಾರಿ ಯೋಚನೆ ಮಾಡಿ ಇದು ಎಷ್ಟು ಅಪಾಯಕಾರಿ ಅಂತ ? ಯಾಕೆ ಅಂದ್ರೆ ಆನೆ ಎಷ್ಟು ಟನ್ಗಳು ತೂಕ ಇರುತ್ತೆ ಆನೆ ಏನಾದ್ರೂ ಹೆಚ್ಚು ಕಡಿಮೆ ಮಾಡಿದ್ರೆ ಬದುಕು ಉಳಿಯೋದು ಕಷ್ಟ .

 

ಎಲೆಕ್ಟ್ರಿಕ್ ಶಾಕರ್

 

 

ಎಲೆಕ್ಟ್ರಿಕ್ ಶಾಕ್ ಕೊಡೊರೊ ಮೆಕ್ಸಿಕೋದ ಕೆಲವು ಬಾರ್ ಹಾಗೂ ಪಬ್ ಗಳಲ್ಲಿ ಎಲೆಕ್ಟ್ರಿಕ್ ಶಾಕ್ ಕೋಡೂರು ಇರ್ತಾರೆ ,ಯಾಕೆ ಅಂದ್ರೆ ಅಲ್ಲಿ ಚೆನ್ನಾಗಿ ಕುಡಿದ ಮೇಲೆ ನಶೆ ತುಂಬಾ ಹೆಚ್ಚಾಗಿದ್ದಾಗ ಇವರಿಗೆ ನಶೆ ಇಳೀಬೇಕು ಅಂದ್ರೆ ಸ್ವಲ್ಪ ಎಲೆಕ್ಟಿಕ್ ಶಾಕ್ ಕೊಡಲೇಬೇಕಂತೆ ಇದರಿಂದ ಇವರ ನಶೆ ಇಳಿದು ಮೊದಲಿನ ಹಾಗೆ ಆಗ್ತಾರೆ .

 

ಬೆತ್ತಲೆ ಪೇಂಟಿಂಗ್ ಕಲಾವಿದರು

 

 

ಹೌದು ಕೆಲವು ಮಾಡೆಲ್ ಗಳು ನಗ್ನವಾಗಿ ಕುಳಿತುಕೊಳ್ಳುತ್ತಾರೆ ಇವರ ಚಿತ್ರ ಬಿಡಿಸಲು ಹತ್ತರಿಂದ ಹದಿನೈದು ಜನ ಚಿತ್ರಕಲಾವಿದರು ಇರುತ್ತಾರೆ, ಈ ರೀತಿಯ ಚಿತ್ರಕಲಾವಿದರಿಗೆ ವಿದೇಶಗಳಲ್ಲಿ ಭಾರೀ ಬೇಡಿಕೆ ಇದೆ ಯಾಕೆಂದರೆ ಅವರ ಚಿತ್ರಕಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಈ ರೀತಿಯ ಕಲಾವಿದರನ್ನು ಬಳಸಿಕೊಳ್ಳುತ್ತಾರೆ ಇವರಿಗೆ ಕೈತುಂಬಾ ಸಂಬಳ ಇರುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top