fbpx
ವಿಶೇಷ

ಪ್ರಪಂಚದಲ್ಲೇ ಅತಿ ವಿಕಾರವಾದ ಈ ಹೆಂಗಸಿನ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ , ಮಾನವೀಯತೆ ಬದುಕಿದ್ಯಾ ಅಂತ ಅನಿಸುತ್ತೆ

ಪ್ರಪಂಚದಲ್ಲೇ ಅತಿ ವಿಕಾರವಾದ ಈ ಹೆಂಗಸಿನ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ..

 

‘ಜೂಲಿಯಾನ ಪಸ್ತ್ರಾಣ’ ಈಕೆಯ ಕಥೆಯನ್ನು ಕೇಳಿದರೇ ಮಾನವೀಯತೆ ನೂರ ಐವತ್ತು ವರ್ಷಗಳ ಹಿಂದೆಯೇ ಸತ್ತು ಹೋಗಿದೆ ಎಂದು ಅನಿಸುತ್ತದೆ ಆಕೆಯ ಕಥೆಯನ್ನು ಕೇಳಿದರೇ ಮನುಷ್ಯರು ಹೀಗೂ ಇರುತ್ತಾರಾ ಎಂದು ಬೇಜಾರು ಸಹ ಆಗದೇ ಇರುವುದಿಲ್ಲ .

 

 

ಆಕೆ ನೋಡಲು ಸುಂದರವಾಗಿಲ್ಲ ಎನ್ನುವ ಒಂದೇ ಒಂದು ಕಾರಣಕ್ಕೆ ಆಕೆಯನ್ನು ವಿಚಿತ್ರ ಪ್ರಾಣಿಯಂತೆ ನೋಡಲಾಯಿತು ಅಂದ ಈಕೆಗೆ ವಿಚಿತ್ರವಾದ ವಸ್ತುವಿನಂತೆ ಕಂಡು ಬಂತು ಆಕೆಯ ಜೀವನದಲ್ಲಿ ದೊಡ್ಡದಾದ ಆಟವನ್ನು ಸಹ ಆಡಿತ್ತು ,1830 ರಲ್ಲಿ ಆಕೆ ಹುಟ್ಟಿದಾಗ ಆಕೆಯ ತಾಯಿಗೆ ಈ ವಿಚಿತ್ರವಾದ ಮಗುವನ್ನು ಕಂಡು ಆಶ್ಚರ್ಯವಾಗಿತ್ತು, ಆಕೆ ಈ ಮಗುವನ್ನು ನೋಡಿ ಗಾಬರಿಗೊಂಡಿದ್ದಳು .

 

ಅಸಲಿಗೆ ಆಕೆಯ ಜೀವನದಲ್ಲಿ ವಿಧಿ ಆಟವನ್ನೇ ಆಡಿತು

 

ಆಕೆ ಹುಟ್ಟಿದಾಗ ವಿಚಿತ್ರವಾಗಿ ಹುಟ್ಟಿದ ಮಗುವನ್ನು ಎಲ್ಲಿ ಊರಿನ ಜನರು ನೋಡಿ ಸಾಯಿಸಿಬಿಡುತ್ತಾರೆ ಎಂದು ಆಕೆಯ ತಾಯಿ ಭಾವಿಸಿ ಮಗುವನ್ನು ಕಂಕುಳಲ್ಲಿ ಇಟ್ಟುಕೊಂಡು ಊರಿನಿಂದ ಓಡಿ ಹೋಗಿ ಬೆಟ್ಟದ ಹತ್ತಿರ ಇರುವ ಗುಹೆಯೊಂದರಲ್ಲಿ ವಾಸಿಸುತ್ತಿರುತ್ತಾರೆ, ಕೆಲ ದಿನಗಳ ನಂತರ ಅಲ್ಲಿಯೇ ಜೀವನವನ್ನು ಸಾಗಿಸುತ್ತಿರುತ್ತಾರೆ.

ಒಂದು ದಿನ ಆ ಊರಿನ ಜನ ತಮ್ಮ ಊರಿನ ಎಮ್ಮೆ ಹಸುಗಳು ಕಳೆದು ಹೋಗಿದ್ದಾರೆ ಎಂದು ಹುಡುಕಿಕೊಂಡು ಈ ಬೆಟ್ಟದ ಕಡೆಗೆ ಬರುತ್ತಿರುತ್ತಾರೆ ಆಗ ತಾಯಿ ಮಗಳನ್ನು ನೋಡಿದ ಕೆಲ ಜನ ಮತ್ತೆ ಊರಿಗೆ ಬರುವಂತೆ ಕೇಳಿಕೊಳ್ಳುತ್ತಾರೆ.

ಆಗ ತಾಯಿ ಷರತ್ತೂಂದನ್ನು ವಿಧಿಸಿ ತನ್ನ ಮಗಳಿಗೆ ಯಾವುದೇ ರೀತಿಯ ಹಾನಿಯನ್ನು ಮಾಡದೇ ಇದ್ದರೆ ಊರಿಗೆ ಮರಳಿ ಬರುತ್ತೇನೆ ಎಂದು ಹೇಳುತ್ತಾಳೆ .

ಆದರೆ ಜುಲಿಯಾನಾ ತಂದೆ ಇದಕ್ಕೆ ಒಪ್ಪುವುದಿಲ್ಲ ಆಗ ತಾಯಿ ಮಗಳನ್ನು ಕರೆದುಕೊಂಡು ಆಕೆಯ ಅಣ್ಣನ ಮನೆಗೆ ಹೋಗಿ ಇರುತ್ತಾಳೆ ,ಅಲ್ಲಿ ಕೂಡ ಜೂಲಿಯಾಗೆ ಬಹಳ ಅವಮಾನವನ್ನು ಮಾಡುತ್ತಾರೆ ಆಕೆ ದೊಡ್ಡವಳಾಗುತ್ತಿದ್ದಂತೆ ಆಕೆಗೆ ಅವಮಾನಗಳೇ ಎದುರಾಗುತ್ತವೆ ಹೀಗಿರುವಾಗ ಅವಳ ಮೈ ಮೇಲಿನ ಕೂದಲು ಸಹ ದೊಡ್ಡದಾಗಿ ಬೆಳೆಯುತ್ತಾ ಹೋಗುತ್ತದೆ ಇದರಿಂದ ಆಕೆಯನ್ನು ಕೋತಿ, ಕರಡಿ ಈ ರೀತಿಯಾಗಿ ನಾನಾ ಪ್ರಾಣಿಗಳ ಹೆಸರನ್ನಿಟ್ಟು ಕರೆಯುತ್ತಿರುತ್ತಾರೆ .

 

 

ಹೊರಗಿನ ಜನ ಕೆಲವು ಅವಮಾನಗಳನ್ನು ಮಾಡಿದರೆ ಮನೆಯೊಳಗಿನ ಜನ ಆಕೆಗೆ ಸರಿಯಾಗಿ ಊಟವನ್ನು ಸಹ ಕೊಡುತ್ತಿರಲಿಲ್ಲ ಜುಲಿಯಾನ ಆಕೆಯ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಲು ಸಹ ಹೆದರುತ್ತಿದ್ದಳು .

ಆಕೆಯ ತಾಯಿಯ ಆರೋಗ್ಯದಲ್ಲಿ ಏರುಪೇರು ಶುರುವಾಗಿತ್ತು ಆಕೆ ತನ್ನ ಕೊನೆಯ ದಿನಗಳನ್ನು ಎಳೆಯುತ್ತಿದ್ದಳು ಆ ಸಮಯದಲ್ಲಿ ಜೂಲಿಯಳನ್ನು ಕರೆದು ತಾಯಿ ‘ನೀನು ನಿನ್ನ ದೇಹವನ್ನು ಪ್ರೀತಿಸಬೇಕು ಹಾಗೆಯೇ ನೀನು ಬೇರೆಯವರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು ನಿನ್ನ ಜೀವನವನ್ನು ನೀನು ಸುಖವಾಗಿ ನೋಡಿಕೊಳ್ಳಬೇಕು’ ಎಂದು ಹೇಳಿ ತನ್ನ ಕೊನೆಯ ಉಸಿರನ್ನು ಎಳೆದಳು.

ಜೂಲಿಯಾ ಅದಾಗಲೇ ಮೆಕ್ಸಿಕೋ ಪ್ರಾಂತ್ಯದಲ್ಲೆಲ್ಲ ಫೇಮಸ್ ಆಗಿ ಹೋಗಿದ್ದಳು, ಆ ಸಮಯದಲ್ಲಿ ಮೆಕ್ಸಿಕೋ ಗವರ್ನರ್ ಆಕೆಯನ್ನು ತಮ್ಮಲ್ಲಿಗೆ ಕಲಿಸಬೇಕು ಎಂದು ಆಜ್ಞೆ ಹೊರಡಿಸಿದ್ದರು ಆದರೆ ಕೆಲ ದಿನಗಳು ಅಲ್ಲಿದ್ದ ಜೂಲಿಯಾನ ಆ ನಂತರ ಹುಷಾರಿಲ್ಲದ ಕಾರಣ ತಮ್ಮ ಮಾವನ ಮನೆಗೆ ಮತ್ತೆ ಬಂದುಬಿಟ್ಟಳು .

ಮನೆಯ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದ ಅತ್ತೆ ಮಾವ ಆ ನಂತರದಲ್ಲಿ ಆಕೆಯನ್ನು ಸರ್ಕಸ್ ಕಂಪನಿಯೊಂದಕ್ಕೆ ಮಾರಿಬಿಡುತ್ತಾರೆ ಅಲ್ಲಿ ಜೂಲಿಯಾನ ಸರ್ಕಸ್ ಕಂಪನಿಯಲ್ಲಿ ಮಾಸ್ಟರ್ ಹೇಳಿದಂತೆ ಕೇಳಿಕೊಂಡು ಆತನ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುತ್ತಾಳೆ .

 

ಸರ್ಕಸ್ ಕಂಪನಿಯ ಮಾಲೀಕರು ವಿಚಿತ್ರವಾದ ಜೀವಿಯನ್ನು ನೋಡಬೇಕೆಂದರೆ ನಮ್ಮ ಸರ್ಕಸ್ ಕಂಪೆನಿಗೆ ಬನ್ನಿ ಎನ್ನುವ ಜಾಹೀರಾತುಗಳನ್ನು ಸಹ ನೀಡಲು ಶುರು ಮಾಡಿದ್ದರು , ಈ ಜಾಹೀರಾತನ್ನು ನೋಡಿದ ಜನ ಮುಗಿಬಿದ್ದು ಸರ್ಕಸ್ ನೋಡಲು ಹೋಗುತ್ತಿದ್ದರು ಆ ಸಮಯದಲ್ಲಿ ಆಕೆಯ ಪ್ರಖ್ಯಾತಿ ಹೆಚ್ಚಾಗುತ್ತಾ ಹೋಗುತ್ತದೆ ಆ ನಡುವೆ ಆಕೆಯನ್ನು ಪಂಜರವೊಂದರಲ್ಲಿ ಇರಿಸಲಾಗುತ್ತದೆ .

ಆಕೆಯನ್ನು ಕೋತಿ ಹಾಗೂ ಮನುಷ್ಯನಿಗೆ ಹುಟ್ಟಿದ ವಿಚಿತ್ರ ಜೀವಿ ಎಂದು ಜನರಿಗೆ ಪರಿಚಯ ಮಾಡಿಸುತ್ತಾ ಇರುತ್ತಾರೆ , ಆಕೆಯ ಕೈಯಲ್ಲಿ ಹಾಡುಗಳನ್ನು ಹಾಡಿಸುತ್ತಿದ್ದರು ಡಾನ್ಸ್ ಮಾಡಿಸುತ್ತಿದ್ದರು ಆಕೆಯ ಜೀವನವನ್ನು ಸರ್ವನಾಶ ಮಾಡಲು ಏನೇನು ಬೇಕೋ ಎಲ್ಲವನ್ನೂ ಸರ್ಕಸ್ ಕಂಪನಿಯಲ್ಲಿ ಮಾಡಿದ್ದರು.

ಈಕೆಯ ಮೂಕ ವ್ಯಥೆಯನ್ನು ಅರ್ಥ ಮಾಡಿಕೊಂಡ ಥಿಯೋಡೋರ್ ಲೆಂಟ್ ಎಂಬ ವ್ಯಕ್ತಿಯೊಬ್ಬ ಆಕೆಯನ್ನು ಮದುವೆ ಮಾಡಿಕೊಳ್ಳಲು ಇಷ್ಟ ಪಡುತ್ತಾನೆ ಆ ನಂತರದಲ್ಲಿ ಮದುವೆ ಮಾಡಿಕೊಳ್ಳಬೇಕು ಆಕೆ ಮಾಸ್ಕೊ ದೇಶದಿಂದ ಓಡಿ ಹೋಗುತ್ತಾಳೆ, ಅವರಿಬ್ಬರಿಗೂ ಒಂದು ಗಂಡು ಮಗು ಜನಿಸುತ್ತದೆ ,ಅದು ಕೂಡ ಜೂಲಿಯಾ ಮಾದರಿಯಲ್ಲೇ ಇರುತ್ತದೆ ಆದರೆ ಹುಟ್ಟಿದ ಐದು ದಿನಗಳಿಗೆ ಆ ಮಗು ತೀರಿ ಹೋಗುತ್ತದೆ .

 

 

ಈ ರೀತಿಯಾಗಿ ಜೂಲಿಯಾನ ಹಾಗೂ ಆಕೆಯ ಗಂಡ ತಮ್ಮ ಹೆಸರುಗಳನ್ನು ಬದಲಾಯಿಸಿಕೊಂಡು ದೇಶವನ್ನು ಬಿಟ್ಟು ಸಾರ್ವಜನಿಕ ಜೀವನದಿಂದ ದೂರವೇ ಉಳಿದುಬಿಡುತ್ತಾರೆ , ಆನಂತರದಲ್ಲಿ ಆಕೆ ಸತ್ತಾಗ ನಾರ್ವೆ ದೇಶದ ಸ್ವಯಂ ಸೇವಕ ಸಂಸ್ಥೆಯೊಂದು ಅಮೆರಿಕಕ್ಕೆ ಆಕೆಯ ಶವವನ್ನು ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ನಡೆಸುತ್ತಾರೆ , ಇದು ಮಾನವೀಯತೆಗೆ ನಡೆದ ಅತಿ ಘೋರ ನರಮೇಧ ಎಂದು ಖ್ಯಾತಿ ಹೊಂದುತ್ತದೆ ಈಕೆಯ ಜೀವನವನ್ನು ಆಧರಿಸಿದ ‘ದಿ ಏಪ್ ವುಮನ್ ‘ ಎಂಬುವ ಚಿತ್ರ ಸಹ ಬಿಡುಗಡೆಯಾಗುತ್ತದೆ .

ಆ ಕಾಲದಲ್ಲಿ ಮೆಡಿಕಲ್ ಕ್ಷೇತ್ರವು ಅಷ್ಟು ಅಭಿವೃದ್ಧಿಯನ್ನು ಹೊಂದಿರಲಿಲ್ಲ ಆಕೆ ಅಸಲಿಗೆ ವಂಶವಾಹಿಯಿಂದ ಬರುವ ‘ಹೈಪೆರ್ಟ್ರಿಕೋಸಿಸ್’ ಎಂಬುವ ಸಮಸ್ಯೆಯಿಂದ ಬಳಲುತ್ತಿದ್ದಳು ಆದರೂ ಸಹ ಆಕೆಯ ಜೀವನದಲ್ಲಿ ನಡೆದ ಘಟನೆಗಳು ಮಾನವೀಯತೆ ಯಾವ ಮಟ್ಟಿಗೆ ಜನರಲ್ಲಿ ಇತ್ತು ಎಂಬುದಕ್ಕೆ ಮೂಕ ಸಾಕ್ಷಿಯಾಗಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top