ಸಿನಿಮಾ

ಈ ಕಾರಣಕ್ಕೆ ಈ ಸ್ಟಾರ್ ನಟ ನಟಿಯರ ಫಿಲಂ ,ಸೀರಿಯಲ್ ಬ್ಯಾನ್

ಇನ್ನೇನು ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದೆ ಮೇ ಹನ್ನೆರಡನೇ ತಾರೀಕಿನಿಂದ ಇನ್ನೂರ ಇಪ್ಪತ್ನಾಲ್ಕು ಕ್ಷೇತ್ರಗಳಿಗೆ ವಿಧಾನಸಭೆಯ ಚುನಾವಣೆ ನಡೆಯಲಿದೆ ಈ ಸಮಯದಲ್ಲಿ ಅಭ್ಯರ್ಥಿಗಳು ವಿವಿಧ ರೀತಿಯ ಕಸರತ್ತುಗಳನ್ನು ಮಾಡುತ್ತಿದ್ದಾರೆ.

 

 

 

ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಫಿಲಂ ಸ್ಟಾರ್ಸ್​ ಪ್ರಚಾರ ಹೆಚ್ಚಾಗುತ್ತಿದೆ. ಚುನಾವಣೆಗೆ ಸ್ಪರ್ಧಿಸಿರುವ ನಟ ನಟಿಯರ ಮೇಲೆ ರಾಜಕೀಯ ಪಕ್ಷಗಳು ಈಗಾಗಲೇ ಆರೋಪ ಮಾಡುತ್ತಿವೆ ಎನ್ನಲಾಗಿದೆ. ಧಾರವಾಹಿ, ಚಿತ್ರಗಳಲ್ಲಿ ಅಭಿನಯ ಮಾಡಿರುವ ನಟ ನಟಿಯರು ಚುನಾವಣೆಗೆ ಸ್ಪರ್ಧೆ ಮಾಡಿದ್ದರೋ ಅವರು ತಮ್ಮ ಹಾಡುಗಳನ್ನಾಗಲೀ ,ಸಿನಿಮಾದ ಡೈಲಾಗ್​ ಆಗಲೀ, ರಿಯಾಲಿಟಿ ಶೋ, ಅಥವಾ ಟಿವಿ ಕಾರ್ಯಕ್ರಮ, ಸಿನಿಮಾಗಳು ಯಾವುದನ್ನೂ ಚುನಾವಣೆ ಆಗುವತನಕ ಪ್ರಸಾರ ಮಾಡದೇ ತಡೆಹಿಡಿಬೇಕೆಂದು ಮನವಿ ಮಾಡಿ ಆಯೋಗದ ಮುಂದೆ ದೂರು ನೀಡಿದ್ದಾರೆ.

 

ಯಶವಂತಪುರ ಕ್ಷೇತ್ರದಿಂದ ನಟ ಜಗ್ಗೇಶ್ ಸ್ಪರ್ಧೆ ಮಾಡುತ್ತಿದ್ದು ಅವರ ರಿಯಾಲಿಟಿ ಶೋ ಪ್ರಸಾರ ಮಾಡದಂತೆ ಕಾಂಗ್ರೆಸ್​ ನಾಯಕರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ ಎನ್ನಲಾಗಿದೆ. ನಟ ಬಂಗಾರಪ್ಪ ಕೂಡ ಸ್ಪರ್ಧೆ ಮಾಡಿದ್ದೂ ಪ್ರಚಾರದ ವೇಳೆ ಅವರು ನಟಿಸಿರುವ ಅಶ್ವಮೇಧ ಸಿನಿಮಾದ’ ಹೃದಯ ಸಮುದ್ರ ಕಲಕಿ ‘ಹಾಡನ್ನು ಹಾಡಿ ರಂಜಿಸುತ್ತಿದ್ದಾರೆ. ಇವರ ಹಾಡನ್ನು ಕೂಡ ಪ್ರಸಾರಮಾಡಬಾರದು ಎಂದು ದೂರು ನೀಡಲಾಗಿದೆ. ಉಮಾಶ್ರೀ ತೇರದಾಳ ಮತಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. ಶಶಿಕುಮಾರ್ ಕೂಡ ಈ ಬಾರಿಯ ಚುನಾವಣಾ ಕಣದಲ್ಲಿದ್ದಾರೆ ಎನ್ನಲಾಗಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top