ಭವಿಷ್ಯ

ಈ ದಿನಗಳಲ್ಲಿ ಕೂದಲು ಕತ್ತರಿಸೋದು ಮತ್ತು ಸ್ನಾನ ಮಾಡೋದು ಮಾಡಬಾರದು ಅಂತ ಶಾಸ್ತ್ರ ಸಂಪ್ರದಾಯಗಳು ಹೇಳ್ತಾವೆ.

ಯಾಕೆ ಮಂಗಳವಾರದ ದಿನ ಕೂದಲು ತೊಳೆಯಬಾರದು ಅಂದರೆ ತಲೆಗೆ ಸ್ನಾನ ಮಾಡಿದರೆ ಅದು ಕೆಟ್ಟದ್ದು ಎಂದು ಪರಿಗಣಿಸಲಾಗಿದೆ. ಪುರಾಣಗಳಲ್ಲಿ  ಇದರ ಜೊತೆ ಇನ್ನೂ ಮೂರು ಕೂದಲುಗಳಿಗೆ ಸಂಬಂಧಪಟ್ಟ ವಿಷಯಗಳನ್ನು  ಹೇಳಿದ್ದಾರೆ ಅವುಗಳನ್ನು ಹಿಂದೂ ಧರ್ಮದವರು ನಂಬುತ್ತಾರೆ.

 

 

 

 

ಹಿಂದೂ ಧರ್ಮದಲ್ಲಿ ಪ್ರತಿಯೊಂದು ದಿನವೂ ಒಂದೊಂದು  ಸಂಪ್ರದಾಯಗಳಿವೆ ,ಆಚರಣೆಗಳಿವೆ.ಅನೇಕ ವರ್ಷಗಳ ಹಿಂದಿನಿಂದಲೇ  ನಮ್ಮ ಪೂರ್ವಜನರು ಇವುಗಳನ್ನು ರೂಢಿಯಲ್ಲಿ ತಂದಿದ್ದಾರೆ.ಉದಾಹರಣೆಗೆ-  ಪುರುಶರು ಕ್ಷೌರ   ಮಾಡಿಸುವುದನ್ನು ಗುರುವಾರ ಮತ್ತು ಶನಿವಾರ ನಿಷೇಧಿಸಲಾಗಿದೆ. ತಲೆಗೆ ಸ್ನಾನ ಮಾಡುವುದು ಕೂದಲು ತೊಳೆಯವುದನ್ನು ಸಹ ಗುರುವಾರ ಒಳ್ಳೆಯದಲ್ಲ ಹೀಗೆ ಇನ್ನೂ ಅನೇಕ ನಂಬಿಕೆಗಳು ಇವೆ.

ಇನ್ನೂ ಕೆಲವು ಜನರು ಶನಿವಾರದ ದಿನ ಕೂದಲು ಕತ್ತರಿಸುವುದರಿಂದ  ಶನೈಶ್ಚರ ದೇವನ ಸಾಡೇ ಸಾತಿಯ ಪರಿಣಾಮವು ಕಡಿಮೆ ಯಾಗುವುದೆಂದು ಸಹ ನಂಬಲಾಗಿದೆ.

 

 

 

ಇನ್ನೂ ಮಹಿಳೆಯರು ಗುರುವಾರದ  ದಿನ ತಲೆಗೆ ಸ್ನಾನ ಮಾಡಿದರೆ ಅಥವಾ ಕೂದಲನ್ನು ನೀರಿನಿಂದ ತೊಳೆದರೆ ಲಕ್ಷ್ಮೀ ನಿಮ್ಮ ಮನೆಯನ್ನು  ಬಿಟ್ಟು ಹೊರಟು ಹೋಗುತ್ತಾಳೆ.ನೀವು ದಿನ ಕಳೆದಂತೆ ಎಲ್ಲವನ್ನು ಕಳೆದುಕೊಂಡು ಬಿಡುವ ಪರಿಸ್ಥಿತಿ ಎದುರಾಗುತ್ತದೆ. ಹಣ,ಆಸ್ತಿ,ಸಂಪತ್ತಿನ ನಷ್ಟ ಉಂಟಾಗುವುದು.ಹಾಗೆ ಬಟ್ಟೆ ಹೊಗೆಯುವುದನ್ನು  ಸಹ ಗುರುವಾರ  ನಿಷೇಧಿಸಲಾಗಿದೆ.ಸಾಮಾನ್ಯವಾಗಿ ಮಹಿಳೆಯರು ಇಂತಹ ಧಾರ್ಮಿಕ ಆಚರಣೆಗಳನ್ನು ,ಪದ್ಧತಿಗಳನ್ನು ಮತ್ತು  ಧಾರ್ಮಿಕ ಸಂಪ್ರದಾಯವನ್ನು ಪಾಲಿಸುತ್ತಾರೆ.

ಮಂಗಳವಾರ- ಮಂಗಳವಾರದ ದಿನ ಕೂದಲು ಕತ್ತರಿಸುವುದನ್ನು  ನಿಷೇಧಿಸಿದ್ದಾರೆ.ಅದು ಜಾಸ್ತಿ ಅನ್ವಯಿಸುವುದು ಕುಜ ದೋಷದಿಂದ (ಮಂಗಳ ಗ್ರಹದ ದೋಷ)  ಬಳಲುತ್ತಿರುವವರಿಗೆ.ಆದ್ದರಿಂದ ಕುಜ ದೋಷದ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಮಂಗಳವಾರದ ದಿನ ಕೂದಲು ತೊಳೆಯುಬಾರದು ,ತಲೆಗೆ ಸ್ನಾನ ಮಾಡಬಾರದು ಹಾಗೆ ತಲೆ ಮತ್ತು ಕೂದಲಿಗೆ  ಎಣ್ಣೆಯನ್ನು ಸಹ ಹಚ್ಚಬಾರದು ಎಂದು ಶಾಸ್ತ್ರಗಳು ಹೇಳುತ್ತವೆ.

 

 

ಬುಧುವಾರ- ಗಂಡು ಮಗುವನ್ನು ಹೊಂದಿರುವ ತಾಯಂದಿರು ಬುಧುವಾರದ ದಿನ ತಲೆಗೆ ಸ್ನಾನ ಮಾಡಬಾರದು.ಹಾಗೇನಾದರೂ ಒಂದು ವೇಳೆ ತಲೆಗೆ ಸ್ನಾನ  ಮಾಡಿದರೆ ಗಂಡು ಮಕ್ಕಳಿಗೆ ಆರೋಗ್ಯ ದೃಷ್ಟಿಯಲ್ಲಿ ಕೆಟ್ಟ ಪರಿಣಾಮಗಳು ಬೀರುವುದು.ಹಾಗೂ ಅದಕ್ಕಿಂತ ಹೆಚ್ಚಾಗಿ ಹೊಸದಾಗಿ ಮದುವೆಯಾದ ಮಹಿಳೆಯರು ಗಂಡು ಸಂತಾನವನ್ನು ಪಡೆಯಲು ಬುಧುವಾರದ ದಿನ ತಲೆಗೆ ಸ್ನಾನ ಮಾಡಬೇಕು ಎಂದು ಹೇಳಲಾಗಿದೆ.ಆದರೆ ಇದು ಎಷ್ಟರ ಮಟ್ಟಿಗೆ  ಸತ್ಯ  ಎಂದು ಗೊತ್ತಿಲ್ಲ.

ಗುರುವಾರ- ಗುರುವಾರದ ದಿನ  ಮಹಿಳೆಯರು ತಲೆಗೆ ಸ್ನಾನ ಮಾಡಿದರೆ ನಿಮ್ಮ ಮನೆಯಲ್ಲಿರುವ ಲಕ್ಷ್ಮೀಯು ನಿಮ್ಮ ಮನೆಯನ್ನು ಬಿಟ್ಟು ಹೊರಟು ಹೋಗುತ್ತಾಳೆ ಮತ್ತು ಹಣದ ಅಭಾವ,ನಷ್ಟ,ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಹಾಗೂ ಇದರ ಬಗ್ಗೆ  ಕಥೆಗಳು ಸಹ ಇವೆ.ಗುರುವಾರದ ದಿನ ತಲೆಗೆ ಸ್ನಾನ ಮಾಡಿದರೆ ಕ್ರಮೇಣವಾಗಿ  ಎಲ್ಲವನ್ನೂ ಕಳೆದುಕೊಂಡು  ಬಡವರಾಗಿ ಬಿಡುತ್ತಾರೆ.ಇದರ ಜೊತೆಗೆ ಗುರುವಾರ ಬಟ್ಟೆಯನ್ನು ಸಹ ತೊಳೆಯಬಾರದು.ಅದು ಅಮಂಗಳಕರವೆಂದು ಭಾವಿಸಲಾಗಿದೆ.

 

 

ಶನಿವಾರ- ಶನಿವಾರ ದಿನ ತಲೆಗೆ ಸ್ನಾನ ಮಾಡುವುದರ ಬಗ್ಗೆ  ಹಿಂದೂ ಪುರಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು  ಇದರಲ್ಲಿ ವ್ಯಕ್ತವಾಗಿವೆ.ಕೆಲವು ಪುರಾಣಗಳಲ್ಲಿ ಶನಿವಾರದ ದಿನ ತಲೆಗೆ ಸ್ನಾನ ಮಾಡುವುದರಿಂದಸಾಡೇ ಸಾತಿಯಂತಹ ಶನಿ ದೋಷ ಕಡಿಮೆಯಾಗಬಹುದೆಂದು.ಇನ್ನೂ ಕೆಲವರು ಶನಿವಾರದ ದಿನ ತಲೆಗೆ ಸ್ನಾನಾ ಮಾಡುವುದರಿಂದ ಶನೈಶ್ಚರನು ಕೋಪಗೊಂಡು ಇನ್ನೂ ಅನೇಕ ಕಷ್ಟಗಳನ್ನು ಸಹ ಕೊಡುತ್ತಾರೆ ಎಂದು ನಂಬಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top