ಸಮಾಚಾರ

ಮೊಟ್ಟೆ ಇಡುತ್ತಿರುವ ಹುಂಜಕ್ಕೆ ಡಿಮ್ಯಾಂಡಪ್ಪೋ ಡಿಮ್ಯಾಂಡು

ಕೋಳಿ ಮೊದಲೋ ಮೊಟ್ಟೆ ಮೊದಲೋ ಎಂದು ಈ ಹಿಂದೆ ಕೇಳುತ್ತಿದ್ದರು ಆದರಿಂಗ ಕೋಳಿ ಮೊಟ್ಟೆನೋ ಅಥವಾ ಹುಂಜದ ಮೊಟ್ಟೆನಾ ಎಂದು ಕೇಳುವ ಸ್ಥಿತಿ ಬಂದಿದೆ ಏಕೆ ಅಂತೀರಾ ಮುಂದೆ ಓದಿ.

 

 

ಕೋಳಿ ಮೊಟ್ಟೆ ಇಡುವುದು ಸಾಮಾನ್ಯ ಆದರೆ ಈ ಗ್ರಾಮದಲ್ಲಿ ಹುಂಜ ಮೊಟ್ಟೆ ಇಡುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಖಾಸಗಿ ಮಾಧ್ಯಮದಲ್ಲಿ ವರದಿ ಆಗಿದೆ, ತೆಲಗಾಂಣ ರಾಜ್ಯದ ಖಮ್ಮಂ ಜಿಲ್ಲೆಯ ರಘುನಾಥ್‌ಪಾಲೆಂ ತಾಲೂಕಿನ ವಿ.ವೆಂಕಟಾಯಪಾಲೆಂ ಹಳ್ಳಿಯಲ್ಲಿ ಹುಂಜವೊಂದು ಮೊಟ್ಟೆ ಇಡುವ ಮೂಲಕ ಎಲ್ಲರು ಅಚ್ಚರಿಗೊಳ್ಳುವಂತೆ ಮಾಡಿದೆ.

ಈ ಹುಂಜವೂ ವಿ.ವೆಂಕಟಾಯಪಾಲೆಂ ಗ್ರಾಮದ ಆಲಸ್ಯಂ ಶ್ರೀನಿವಾಸ್‌ ರಾವ್‌ ಅವರಿಗೆ ಸೇರಿದ್ದಾಗಿದೆ. ಕೋಳಿಗಳ ಮೊಟ್ಟೆಯಲ್ಲಿ ಅತಿ ಚಿಕ್ಕದಾದ ಮೊಟ್ಟೆ ಕಾಣಿಸಿದೆ. ಮರುದಿನ ಹುಂಜವನ್ನು ಬೇರೆ ಜಾಗದಲ್ಲಿ ಕಟ್ಟಿದಾಗ ಅಲ್ಲೂ ಕೂಡ ಹುಂಜ ಚಿಕ್ಕದಾದ ಮೊಟ್ಟೆ ಇಟ್ಟಿದೆ. ಹುಂಜ ಮೊಟ್ಟೆ ಇಡುತ್ತಿರುದು ಬೆಳಕಿಗೆ ಬಂದ ಕೂಡಲೇ ಪಶು ವೈದ್ಯರಿಗೆ ಈ ಮಾಹಿತಿಯನ್ನು ನೀಡಿದ್ದಾರೆ.

 

 

ಸ್ಥಳಕ್ಕಾಗಮಿಸಿದ ಪಶುವೈದ್ಯ ಡಾ. ಕೆ.ಕಿಶೋರ್‌ ಬಂದು ನೋಡಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು. ಜೆನೆಟಿಕ್ ರೂಪಾಂತರಗಳಿಂದ ಹೀಗೆ ಆಗುತ್ತದೆ. ಇದನ್ನು ವಿಂಡ್ ಎಗ್ ಎಂದು ಕರೆಯಲಾಗುತ್ತಿದೆ. ಇದರಲ್ಲಿ ಹಳದಿ ಭಾಗ ಇರುವುದಿಲ್ಲ ಹಾಗಾಗಿ ಈ ಮೊಟ್ಟೆಯಿಂದ ಸಂತಾನೋತ್ಪತ್ತಿಗೆ ಯೋಗ್ಯವಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top