ಮನೋರಂಜನೆ

ನ್ಯೂಸ್ 18 ಮತ್ತು ನಿರೂಪಕಿ ಶಾಲಿನಿ ವಿರುದ್ಧ ರೊಚ್ಚಿಗೆದ್ದ ಹುಚ್ಚ ವೆಂಕಟ್!

ತನ್ನ ತಿಕ್ಕಲುತನಗಳಿಂದಲೇ ಹೆಸರವಾಸಿಯಾಗಿ ಕಂಡ ಕಂಡವರಿಗೆಲ್ಲಾ ಅವಾಜು ಹಾಕಿ, ಒಂದಿಬ್ಬರಿಗೆ ಗೂಸಾ ಕೂಡ ಕೊಟ್ಟು ಯದ್ವಾ ತದ್ವಾ ಫೇಮಸ್ ಆದವನು ಫೈರಿಂಗ್ ಸ್ಟಾರ್ ಹುಚ್ಚಾ ವೆಂಕಟ್. ಇಷ್ಟುದಿನ ತನ್ನ ವೈವಿಧ್ಯಮಯ ತಿಕ್ಕಲಾಟಗಳಿಂದಲೇ ವಿವಾದಗಳನ್ನು ಹುಟ್ಟುಹಾಕಿ ರಂಕಲು ಎಬ್ಬಿಸಿಕೊಂಡು ಸುದ್ದಿಯಾಗುತ್ತಿದ್ದ ಕಾಂಟ್ರಾವರ್ಷಿಯಲ್ ಯಕ್ಕಡ ಸ್ಟಾರ್ ಯಾವುದೇ ರಂಖಲು ಮಾಡಿಕೊಂಡಾಗಲೂ ಗೊಣ್ಣೆ ಸುರಿಸುತ್ತಾ ಮಾಧ್ಯಮದವರನ್ನು ಭೇಟಿಯಾಗಿ ತನ್ನ ಹುಚ್ಚಾಟಗಳನ್ನ ಜನತೆಯ ಮುಂದೆ ಬಿಚ್ಚಿಡುತ್ತಿದ್ದನು. ಆದರೆ ಇದೀಗ ತನ್ನ ತಿಕ್ಕಲುತನಗಳನ್ನು ಪ್ರದರ್ಶಿಸಲು ಆಶ್ರಯ ಕೊಟ್ಟ ನ್ಯೂಸ್ ಚಾನೆಲ್’ಗಳ ವಿರುದ್ಧವೇ ಹುಚ್ಚ ವೆಂಕಟ್ ತಿರುಗಿಬಿದ್ದಿದ್ದಾರೆ.

 

 

ನಟ, ನಿರ್ದೇಶಕ ಎಂಬ ಲೇಬಲ್ಲು ಹೊಂದಿರುವ ಈ ಹುಚ್ಚ ವೆಂಕಟ್ ನ್ಯೂಸ್ 18 ಎಂಬ ಕನ್ನಡ ಸುದ್ದಿವಾಹಿನಿಯೊಂದರ ಮೇಲೆ ಅಕ್ಷರಸಹ ಎರಗಿಬಿದ್ದಿದ್ದಾನೆ. ನ್ಯೂಸ್ 18 ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಖ್ಯಾತಿಯ ಶಾಲಿನಿ ಅವರ ನಿರೂಪಣೆಯಲ್ಲಿ ಮೂಡಿಬರುತ್ತಿರುವ “ಸಿಲ್ಲಿ ಪಾಯಿಂಟ್ ವಿಥ್ ಶಾಲಿನಿ” ಎಂಬ ಹಾಸ್ಯಾತ್ಮಕ ಕಾರ್ಯಕ್ರಮದಲ್ಲಿ ಹುಚ್ಚಾಟವನ್ನೇ ಕಸುಬು ಮಾಡಿಕೊಂಡಿರುವ ವೆಂಕಟ್ ಅವರ ಮನಸ್ಸಿಗೆ ನೋವಾಗುವಂತೆ ನಡೆದುಕೊಳ್ಳಲಾಗಿದೆಯಂತೆ.. ಈತನೇ ಹೇಳುವಹಾಗೆ ಸದರಿ ಕಾರ್ಯಕ್ರಮದಲ್ಲಿ ಈತನ ಟ್ರೇಡ್ ಮಾರ್ಕ್ ವೇಷಭೂಷಣ, ಶರ್ಟ್, ಚಪ್ಪಲಿ ಮುಂತಾದ ವಿಷಯಗಳ ಬಗ್ಗೆ ಕುಚೋದ್ಯ ಮಾಡಲಾಗಿದೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾನೆ.

 

 

ಈ ಬಗ್ಗೆ ತನ್ನ ಯೌಟ್ಯೂಬ್ ಚಾನೆಲ್ ನಲ್ಲಿ ಸರಣಿಯೋಪಾದಿಯಲ್ಲಿ ವಿಡಿಯೋಗಳನ್ನು ಬಿಟ್ಟಿರುವ ಹುಚ್ಚ ವೆಂಕಟ್ ತನ್ನ ಎಂದಿನ ಶೈಲಿಯಲ್ಲಿಯೇ ತಲೆ ಕೊಡವಿ ನ್ಯೂಸ್ 18 ವಾಹಿನಿಗೆ ಸಂಭಂದಪಟ್ಟ ಪ್ರತಿಯೊಬ್ಬರಿಗೂ ಮತ್ತು “ಸಿಲ್ಲಿ ಪಾಯಿಂಟ್ ವಿಥ್ ಶಾಲಿನಿ” ಕಾರ್ಯಕ್ರಮದಲ್ಲಿ ವೆಂಕಟನ ಮಿಮಿಕ್ರಿ ಮಾಡಿದ್ದ ಗೋಪಿಗೂ ಭಯಾನಕ ಅವಾಜ್ ಬಿಟ್ಟಿದ್ದಾರೆ. ಜೊತೆಯಲ್ಲಿ ಎಂದಿನಂತೆ ತನ್ನ ಕಲ್ಪಿತ ಹುಚ್ಚ ವೆಂಕಟ್ ಸೇನೆಯ ಬಗ್ಗೆಯೂ ಬಿಲ್ಡಪ್ ಕೊಟ್ಟು ಎಚ್ಚರಿಕೆ ನೀಡಿದ್ದಾರೆ.

 

 

ಹೆಚ್ಚಾ ವೆಂಕಟನ ಈ ಹೊಸ ಅವಾಂತರದ ಬಗ್ಗೆ ಹೆಚ್ಚು ತಿಳಿದುಕೊಳ್ಳೋ ಕುತೂಹಲವೇನಾದರೂ ಇದ್ದರೇ ಈ ಕೆಳಗಿನ ವಿಡಿಯೋಗಳನ್ನು ವೀಕ್ಷಿಸತಕ್ಕದ್ದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top