ಸಮಾಚಾರ

ಜನಾರ್ಧನ ರೆಡ್ಡಿ ಮಗ ಕಿರೀಟಿ ರೆಡ್ಡಿ ಪಿಯುಸಿಯಲ್ಲಿ ಡಿಸ್ಟಿಂಕ್ಷನ್

ನಿನ್ನ ರಾಜ್ಯ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ ಒಟ್ಟಾರೆ ಶೇಕಡಾ 59.56 ಫಲಿತಾಂಶ ಬಂದಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪದವಿ ಪೂರ್ವ ಶಿಕ್ಷಣ ಮಂಡಳಿ ನಿರ್ದೇಶಕಿ ಸಿ.ಶಿಖಾ ಅವರು ಮಾಹಿತಿ ತಿಳಿಸಿದ್ದಾರೆ. ಈ ಫಲಿತಾಂಶದಲ್ಲಿ ಪ್ರಥಮ ಸ್ಥಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಇದೆ, 91.49, ದ್ವಿತೀಯ ಸ್ಥಾನದಲ್ಲಿ ಉಡುಪಿ ಜಿಲ್ಲೆ ಇದೆ, ಇನ್ನು ತೃತೀಯ ಸ್ಥಾನದಲ್ಲಿ ಸ್ಥಾನದಲ್ಲಿ ಕೊಡಗು ಜಿಲ್ಲೆಯಿದೆ ಮತ್ತು ಚಿಕ್ಕೋಡಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.

 

 

ಜನಾರ್ಧನ ರೆಡ್ಡಿ ಏಕೈಕ ಪುತ್ರ ಜಿ. ಕಿರೀಟಿ ರೆಡ್ಡಿ ನಿನ್ನೆ ಪ್ರಕಟವಾದ ಪಿಯುಸಿ ಫಲಿತಾಂಶದಲ್ಲಿ ವಿಜ್ಞಾನ ವಿಭಾಗದಲ್ಲಿ 563 ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ಪಡೆದಿದ್ದಾನೆ. ಈ ಮೂಲಕ ತಂದೆಗೆ ಚುನಾವಣಾ ಫಲಿತಾಂಶಕ್ಕೆ ಮುನ್ನವೇ ಸಂಭ್ರಮ ಕೊಟ್ಟಿದ್ದಾರೆ.

 

 

ಜನಾರ್ಧನ ರೆಡ್ಡಿ ಮಗ ಕಿರೀಟಿ ರೆಡ್ಡಿ ಕನ್ನಡದಲ್ಲಿ 90, ಇಂಗ್ಲಿಷ್ 90, ಫಿಸಿಕ್ಸ್ 99, ಕೆಮಿಸ್ಟ್ರಿ 87, ಗಣಿತ 98 ಹಾಗು ಕಂಪ್ಯೂಟರ್ ಸೈನ್ಸ್ 99 ಅಂಕ ಗಳಿಸಿದ್ದಾರೆ. ಒಟ್ಟು 563 ಅಂಕ ಇವರಿಗೆ ಲಭಿಸಿದೆ ಎಂದು ತಿಳಿದು ಬಂದಿದೆ.

 

 

ಬಿಜೆಪಿ ರಾಷ್ಟ್ರಿಯ ಅಧ್ಯಕ್ಷ ಅಮಿತ್ ಶಾ ಅವರು ಜನಾರ್ಧನ ರೆಡ್ಡಿ ಅವರಿಗೂ ಬಿಜೆಪಿಗೂ ಯಾವುದೇ ಸಂಭಂದವಿಲ್ಲಾ ಎಂದು ಹೇಳಿದ್ದಾರೆ ಆದರೂ ಕೂಡ ಸ್ನೇಹಿತ ಶ್ರೀರಾಮುಲು ಅವರ ಗೆಲುವಿಗಾಗಿ ಜನಾರ್ಧನ ರೆಡ್ಡಿ ಶ್ರಮಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top