ಸಮಾಚಾರ

“ಜೈಲಿಗೆ ಹೋಗಿ ಬಂದೋರಿಗೆ ವೋಟ್ ಹಾಕ್ಬೇಡಿ, ಅಚ್ಛೇ ದಿನ್ ಯಾರಿಗೂ ಬಂದಿಲ್ಲ ಬರೋದು ಇಲ್ಲ”- ಲೂಸ್ ಮಾದ ಯೋಗಿ ಗುಡುಗು.

ಚಿತ್ರರಂಗದಲ್ಲಿ ಲೂಸ್ ಮಾದ ಎಂದೇ ಹೆಸರಾಗಿರುವ ನಟ ಯೋಗಿ ಬಿಜೆಪಿ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ.. ಸದ್ಯಕ್ಕೆ ಎಲ್ಲೆಲ್ಲೂ ಚರ್ಚೆಗೆ ಗ್ರಾಸವಾಗಿರುವ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಲ್ಲಷ್ಟೇ ಬಾಕಿ ಉಳಿದಿದ್ದುಇಂಥಾ ವಾತಾವರಣದಲ್ಲಿ ರಾಜಕೀಯ ವಲಯದಲ್ಲಿ ಬಿರುಸಿನ ವಾತಾವರಣ ಇರೋದು ಸಹಜವೇ. ಆದರೆ ಈ ಸಲ ರಾಜಕೀಯ ವಲಯದಲ್ಲಿ ಮಾತ್ರವಲ್ಲದೆ ಚಿತ್ರರಂಗದಲ್ಲಿಯೂ ಚುನಾವಣಾ ಪ್ರಭಾವ ಕೂಡ ಬಲು ಜೋರಾಗಿದೆ.. ವಿವಿಧ ಪಕ್ಷಗಳಿಗೆ ಸಿನಿಮಾ ರಂಗದಿಂದ ಅನೇಕ ಮಂದಿ ಪ್ರಚಾರ ನಡೆಸುತ್ತಿದ್ದು ಇದೀಗ ಅವರ ಸಾಲಿಗೆ ಸೇರಿಕೊಂಡಿರುವುದು ನಟ ಯೋಗಿ.

 

 

ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ನಡೆಸುತ್ತಿರುವ ನಟ ಯೋಗಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಕೆ.ರಮೇಶ್ ಪರವಾಗಿ ಪರಪ್ಪನ ಅಗ್ರಹಾರದಲ್ಲಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು ಈ ವೇಳೆ “ಜೈಲಿಗೆ ಹೋಗಿ ಬಂದವರಿಗೆಲ್ಲಾ ವೋಟ್ ಹಾಕಬೇಡಿ” ಎಂದು ಹೇಳುವ ಮುಖೇನ ಹೇಗಾದರೂ ಮಾಡಿ ಮುಂದಿನ ಮುಖ್ಯಮಂತ್ರಿಯಾಗಲೇಬೇಕು ಎಂದು ಪಣ ತೊಟ್ಟಿರುವ ಯಡಿಯೂರಪ್ಪನವರಿಗೆ ತಮ್ಮ ಬಿರುಸಿನ ಮಾತುಗಳ ಮೂಲಕ ಟಾಂಗ್ ನೀಡಿದರು.

 

 

ಮಾತು ಮುಂದುವರಿಸಿದ ಯೋಗಿ ಬಿಜೆಪಿ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ “ಬಿಜೆಪಿಯವರು ಮಾತೆತ್ತಿದರೆ ಅಚ್ಛೇ ದಿನ್, ಅಚ್ಛೇ ದಿನ್ ಅಂತನೇ ಹೇಳ್ತಿರ್ತಾರೆ, ಆದರೆ ಅಚ್ಛೇ ದಿನ್ ಯಾರಿಗೂ ಬಂದಿಲ್ಲ. ಅಚ್ಛೆದಿನ್ ಅಂದ್ರೆ ಏನು ಅಂತಲೂ ನಮಗೆ ಅರ್ಥ ಆಗಿಲ್ಲ. ಬಿಜೆಪಿಯವರು ಯಾವೊಂದು ಕೆಲಸನೂ ಕೂಡ ಮಾಡಿಕೊಟ್ಟಿಲ್ಲ. ಈ ಮಾತನ್ನು ನೀವೆಲ್ಲಾ ಮೆಚ್ಚಿಕೊಳ್ಳಲಿ ಅಂತ ಹೇಳ್ತಿಲ್ಲ, ಇದು ನನ್ನ ಸ್ವಂತ ಅನುಭವ ಹಾಗಾಗಿ ಹೇಳ್ತಿದ್ದೀನಿ ನಿಜಕ್ಕೂ ಅವರು ಯಾವ್ ಕೆಲ್ಸನೂ ಮಾಡಲ್ಲ ಸುಳ್ ಹೇಳ್ಕೊಂಡು ಬರಿ ಮಾತಲ್ಲೇ ಮನೆ ಕಡ್ತಾರೆ ಅಷ್ಟೇ”

“ಬಿಜೆಪಿಯವರು ಜೈಲಿಗ್ ಹೋಗಿ ಬಂದವರನ್ನ ಇಂದು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ.. ಕಳ್ಳರಿಗೆಲ್ಲ ನೀವು ವೋಟ್ ಹಾಕಬೇಡಿ ಅದರ ಬದಲು ಎಲ್ಲರೂ ಕಾಂಗ್ರೆಸ್ ಗೆ ಬೆಂಬಲ ನೀಡಿ.. ನಾನು ಕೂಡ ಕಾಂಗ್ರೆಸ್ ಪಕ್ಷಕ್ಕೆ ಸಪೋರ್ಟ್ ಮಾಡ್ತೀನಿ. ನೀವೂ ಕೂಡ ಕಾಂಗ್ರೆಸ್ ಗೆ ವೋಟ್ ಮಾಡಿ ಎಂದು ಜನತೆಯಲ್ಲಿ ಮನವಿ ಮಾಡಿಕೊಂಡರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top