ಮನೋರಂಜನೆ

ಮಾವಿನಹಣ್ಣುಗಳ ಜೊತೆ ಲವ್ವಲ್ಲಿ ಬಿದ್ಲು ಸ್ಟಾರ್ ನಟಿ: ಈಕೆಯ ಮನೆ ಮಾವಿನ ಹಣ್ಣಿನ ಮಿನಿ ಮಾರ್ಕೆಟ್ಟು

ಈ ಸಿನಿಮಾ ನಟಿಯರಿಗೆ ಚಿತ್ರ ವಿಚಿತ್ರವಾದ ಹುಚ್ಚುಗಳಿರುತ್ತವೆ. ಅದರಲ್ಲಿಯೂ ಆಹಾರದ ವಿಚಾದಲ್ಲಿಯಂತೂ ಈ ನಟಿಯರು ಗ್ಲ್ಯಾಮರನ್ನೂ ಪಣಕ್ಕಿಟ್ಟಿಟ್ಟು ಭೋಜನಕ್ಕೆ ಕೂತು ಬಿಡುತ್ತಾರೆ. ಬಂಗಾಲಿ ನಟಿ ತನುಶ್ರೀ ಚಕ್ರವರ್ತಿಗೂ ಅಂಥಾದ್ದೇ ಒಂದು ದೊಡ್ಡ ಮಟ್ಟದ ಲವ್ವು ಮಾವಿನಹಣ್ಣುಗಳ ಮೇಲಿದೆಯಂತೆ!

 

 

ತನುಶ್ರೀ ಚಕ್ರವರ್ತಿ ಬಂಗಾಲದ ನಂಬರ್ ಒನ್ ನಟಿ. ಅಲ್ಲಿ ಆಕೆಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಈಗೊಂದು ಎರಡ್ಮೂರು ವರ್ಷಗಳಿಂದ ಬಂಗಾಳದಲ್ಲಿ ಚಾಲ್ತಿಯಲ್ಲಿರುವ ಈಕೆಗೆ ಮಾವಿನಹಣ್ಣುಗಳೆಂದರೆ ವಿಚಿತ್ರ ಆಸೆ. ಒಂದೆರಡಲ್ಲ, ಸಿಕ್ಕರೆ ಬಾಕ್ಸುಗಟ್ಟಲೆ ಮಾವಿನಹಣ್ಣುಗಳನ್ನು ತನುಶ್ರೀ ತಿಂದು ಮುಗಿಸುತ್ತಾಳಂತೆ.

ಈಕೆಗೆ ಇರುವ ಈ ಮಾವಿನ ಹಣ್ಣುಗಳ ಮೋಹ ಬಂಗಾಳದ ಸಿನಿ ಪ್ರೇಮಿಗಳ ನಡುವೆ ಭಲೇ ಫೇಮಸ್. ಆಕೆಯ ಅಭಿಮಾನಿಗಳಂತೂ ಈ ಮಾವಿನಹಣ್ಣುಗಳ ಮೂಲಕವೇ ತನುಶ್ರೀಯನ್ನು ಓಲೈಸಿಕೊಳ್ಳಲು ಬಳಸಿಕೊಳ್ಳುತ್ತಾರಂತೆ. ಇಡೀ ಸೀಜನ್ನಿನಲ್ಲಿ ಮೊದಲ ಮಾವಿನಹಣ್ಣನ್ನು ತಮ್ಮಿಷ್ಟದ ನಟಿಯೇ ತಿನ್ನುವಂತಾಗಬೇಕು ಎಂಬ ಉದ್ದೇಶದಿಂದ ಅಭಿಮಾನಿಗಳು ಪೈಪೋಟಿಗೆ ಬೀಳುತ್ತಾರಂತೆ.

 

 

ಮಾವಿನ ಹಣ್ಣಿನ ಸೀಜನ್ ಆರಂಭವಾಗುತ್ತಲೇ ಈಕೆಯ ಮನೆ ಮಿನಿ ಮಾರ್ಕೆಟ್ಟಿನಂತಾಗಿ ಬಿಡುತ್ತದೆ! ಯಾಕೆಂದರೆ ಇಡೀ ಬಂಗಾಲದ ನಾನಾ ಮೂಲೆಗಳಿಂದ ಅಭಿಮಾನಿಗಳು ಬಾಕ್ಸುಗಟ್ಟಲೆ ಮಾವಿನಹಣ್ಣುಗಳನ್ನು ಅನುಶ್ರೀಗೆ ಕಳಿಸುತ್ತಾಳಂತೆ. ಅದರಲ್ಲಿ ಬಹು ಪಾಲನ್ನು ತಾನೇ ತಿಂದು ಮಿಕ್ಕವುಗಳನ್ನು ಅವರಿವರಿಗೆ ಈ ನಟಿ ದಾನ ಮಾಡುತ್ತಾಳಂತೆ!

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top