ರಾಜಕೀಯ

ದೇವೇಗೌಡರನ್ನು ಕರ್ನಾಟಕದ ಪುಣ್ಯಭೂಮಿಯ ಮಗ ಎಂದು ಹೊಗಳಿದ ಪ್ರಧಾನಿ ಮೋದಿ

ಇನ್ನೇನು ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದೆ ಮೇ ಹನ್ನೆರಡನೇ ತಾರೀಕಿನಿಂದ ಇನ್ನೂರ ಇಪ್ಪತ್ನಾಲ್ಕು ಕ್ಷೇತ್ರಗಳಿಗೆ ವಿಧಾನಸಭೆಯ ಚುನಾವಣೆ ನಡೆಯಲಿದೆ ಈ ಸಮಯದಲ್ಲಿ ಅಭ್ಯರ್ಥಿಗಳು ವಿವಿಧ ರೀತಿಯ ಕಸರತ್ತುಗಳನ್ನು ಮಾಡುತ್ತಿದ್ದಾರೆ.

 

 

ಬಿಜೆಪಿ ಪ್ರಚಾರ ನಿಮಿತ್ಯ ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ರಾಜ್ಯ ಪ್ರವಾಸ ಕೈಗೊಂಡಿದ್ದು ಇಂದು ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ. ಎಚ್.ಸಿ. ದೇವೇಗೌಡರಿಗೆ ಅಪಮಾನ ಮಾಡಿದವರು ರಾಜ್ಯಕ್ಕೆ ಮಾರಕವಾಗಿದ್ದಾರೆ ಅಂತ ಮುಖಮಂತ್ರಿ ಸಿದ್ದರಾಮಯ್ಯ ರವರ ವಿರುದ್ದ ಪ್ರಧಾನಿ ಮೋದಿ ಅವರು ಪರೋಕ್ಷವಾಗಿ ಕುಟುಕಿದ್ದಾರೆ ಎನ್ನಲಾಗುತ್ತಿದೆ. ಉಡುಪಿಯಲ್ಲಿ ಮಾತನಾಡಿದ ಮೋದಿ ಅವರು ದೇವೇಗೌಡರನ್ನು ಅವಮಾನಿಸಿದ ಪಕ್ಷವನ್ನು ಮತ್ತೆ ಅರಿಸಬೇಡಿ ಎಂದು ಕಾಂಗ್ರೆಸ್ ವಿರುದ್ಧ ಮೋದಿ ಕರೆ ನೀಡಿದ್ದಾರೆ. ಎಚ್​.ಡಿ.ದೇವೇಗೌಡರನ್ನು ಮಣ್ಣಿನ ಮಗ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿಸಿದ್ದಾರೆ ಎಂದು ತಿಳಿದು ಬಂದಿದೆ. ಕರ್ನಾಟಕದ ಪುಣ್ಯಭೂಮಿಯ ಮಗ ದೇವೇಗೌಡ ಎಂದು ಹೇಳಿದ್ದಾರೆ.

 

 

ಮೇ 15 ರಂದು ಚುನಾವಣಾ ಫಲಿತಾಂಶ ಹೊರಬೀಳಲಿದ್ದು ಯಾರು ಬಹುಮತ ಸಾಧಿಸಲಿದ್ದಾರೆ ಎಂದು ಕಾದುನೋಡಬೇಕಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top