ಭವಿಷ್ಯ

ಮೇ 2018 , ಮೇಷ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಮೇ 2018 , ಮೇಷ ರಾಶಿ ತಿಂಗಳ ಭವಿಷ್ಯ 

ಮೇಷ ರಾಶಿ.

 

ಆರೋಗ್ಯ.

ಈ ತಿಂಗಳ ದೇಹಕ್ಕೆ ಸಂಬಂಧಪಟ್ಟ ನೋವು ಮತ್ತು ಮಾನಸಿಕ ಯಾತನೆಗಳು ಬಹುತೇಕ ಕಡಿಮೆಯಾಗುತ್ತವೆ ಹಾಗೂ ನಿಮ್ಮ ಆರೋಗ್ಯ ಸುಧಾರಿಸುತ್ತದೆ .

 

ಕುಟುಂಬ.

ಬಹು ದಿನಗಳಿಂದ ಕಾಡುತ್ತಿದ್ದ ಕುಟುಂಬದಲ್ಲಿ  ಇದ್ದ ಘರ್ಷಣೆಗಳು ಈ ತಿಂಗಳು ಬಗೆಹರಿಯಬಹುದು ಹಾಗೂ ನೀವು ನಿಮ್ಮ ಕುಟುಂಬದವರೊಂದಿಗೆ ಸಮಯ ಕಳೆಯಲು ಹೆಚ್ಚು ಅವಕಾಶ ಸಿಗುತ್ತದೆ. ಈ ತಿಂಗಳು ಕುಟುಂಬದವರ ಜೊತೆ ಹೆಚ್ಚು ಸಂತೋಷವಾಗಿ ಸಮಯವನ್ನು ಕಳೆಯುತ್ತೀರ. ಈ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ ಹಾಗೂ ನಿಮ್ಮ ಕುಟುಂಬದವರ ಜೊತೆ ಹೊಂದಾಣಿಕೆಯಿಂದ ಇದ್ದು ಇನ್ನಷ್ಟು ನಿಮ್ಮ ಸಂಬಂಧವನ್ನು ಗಟ್ಟಿ ಗಳಿಸಿಕೊಳ್ಳಿ.

 

ಹಣಕಾಸು.

ನಿಮಗೆ ಈ ತಿಂಗಳು ಹಣಕಾಸು ಪ್ರಯೋಜನಗಳು ಸ್ನೇಹಿತರು ಮತ್ತು ಸಂಬಂಧಿಕರ ಮೂಲಕ ಸಹಾಯ ದೊರೆಯುತ್ತದೆ ಹಾಗೂ ನಿಮ್ಮ ಖ್ಯಾತಿ ಇನ್ನೂ ಹೆಚ್ಚಾಗುತ್ತದೆ.

 

ವ್ಯಾಪಾರ.

ಸರಿಯಾಗಿ ಜಾಗ್ರತೆ ವಹಿಸದಿದ್ದಲ್ಲಿ ಈ ತಿಂಗಳು ಸುಲಭವಾಗಿ ಆಗಬೇಕಾದ ಎಷ್ಟೋ ಯೋಜನೆಗಳು ಕೊನೆ ಹಂತದಲ್ಲಿ ಕೈಬಿಟ್ಟು ಹೋಗಬಹುದು. ಕೆಲಸ ಪೂರ್ಣ ಮಾಡಿಕೊಳ್ಳುವತ್ತ ಗಮನಹರಿಸಿ. ಸರಿಯಾಗಿ ಯೋಜನೆಗಳನ್ನು ಮಾಡಿಕೊಂಡು ನಿಮ್ಮ ವ್ಯಾಪಾರದಲ್ಲಿ ಮತ್ತು ಕೆಲಸಗಳಲ್ಲಿ ಹೆಚ್ಚು ಶ್ರದ್ಧೆಯನ್ನು ವಹಿಸಿ.

 

ನಿಮ್ಮ ಎದುರಾಳಿಗಳು ಮತ್ತು ವೈರಿಗಳು.

 

ಈ ತಿಂಗಳು ನಿಮ್ಮ ಹೊರಗಿನ ವೈರಿಗಳು ನಿಮ್ಮನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ. ನಿಮ್ಮ ಹೊರಗಿನ ವೈರಿಗಳು ಮಾಡುವ ಯಾವುದೇ ತಂತ್ರ ಕುತಂತ್ರ ಈ ತಿಂಗಳು ನಿಮ್ಮ ವಿರುದ್ಧ ಅವರು ಅಂದುಕೊಂಡಂತೆ ಕೆಲಸ ಮಾಡುವುದಿಲ್ಲ .ಜಯ ನಿಮ್ಮದೇ, ಆದರೆ ಮನೆ ಒಳಗಿನ ವೈರಿಗಳ ಬಗ್ಗೆ ಎಚ್ಚರದಿಂದ ಇರಿ.

 

ಕೆಲಸ.

ಈ ತಿಂಗಳು ಕೆಲಸದ ವಿಚಾರವಾಗಿ ಮೇ ಎರಡನೇ ತಾರೀಖಿನಿಂದ ಈ ತಿಂಗಳ ಕೊನೆಯವರೆಗೂ ಶುಭ ಲಕ್ಷಣಗಳು ಗೋಚರಿಸಲಿದೆ.ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಸರಿಯಾಗಿ ಉಪಯೋಗಿಸಿಕೊಳ್ಳಿ. ಅತಿಯಾದ ಉತ್ಸಾಹ ಬೇಡ. ಕೆಲಸ ಹುಡುಕುತ್ತಿರುವವರಿಗೆ ಮೇ ಹದಿನಾಲ್ಕನೇ ತಾರೀಖಿನಿಂದ ಮೇ  27 ರವರೆಗೆ ಅರ್ಜಿ ಹಾಕಲು ಶುಭ ಕಾಲ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top