ಭವಿಷ್ಯ

ಮೇ 2018 , ವೃಷಭ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

ಮೇ 2018 , ವೃಷಭ ರಾಶಿ ತಿಂಗಳ ಭವಿಷ್ಯ 

 

ವೃಷಭ ರಾಶಿಯವರಿಗೆ ಮೇ ತಿಂಗಳ ಮೊದಲ ಎರಡು ವಾರಗಳು ವಿಶೇಷವಾಗಿ ಗಮನ ಹರಿಸಿ ಹಾಗೂ ಜಾಗ್ರತೆ ವಹಿಸಬೇಕು. ಕೊನೆಯ ಎರಡು ವಾರಗಳಲ್ಲಿ ಒಂದಿಷ್ಟು ಬದಲಾವಣೆಗಳು ಆಗಲಿವೆ. ಯಾವ ದಿನಾಂಕಗಳು ಶುಭ ಹಾಗೂ ಅಶುಭ ಎಂದು ಮೊದಲು ತಿಳಿದುಕೊಳ್ಳಿ.

 

ವಿಶೇಷ ಸೂಚನೆ –

ಹೆಚ್ಚಿನ ಯಶಸ್ಸಿಗೆ ಈ ತಿಂಗಳು ಕಹಿ ಮತ್ತು ಅಹಿತಕರ ಪದಗಳನ್ನು ಬಳಸುವುದನ್ನು ತಪ್ಪಿಸಿ ಹಾಗೂ ಮಾತಿನ ಮೇಲೆ ನಿಗಾ ಇಟ್ಟು ಮಾತನಾಡಿ. ನಿಮ್ಮ ಮಾತಿನಲ್ಲಿ ಹಿಡಿತವಿದ್ದು, ಆದಷ್ಟು ತಾಳ್ಮೆಯಿಂದ ವರ್ತಿಸಿ .

ಮೇ ತಿಂಗಳ ಮೊದಲ ಎರಡು ವಾರಗಳು ನಿಮ್ಮಲ್ಲಿ ಈ ಲಕ್ಷಣಗಳು ಕಂಡು ಬರಬಹುದು. ಒಂದು ವೇಳೆ ಈ ಕೆಳಗಿನ ಲಕ್ಷಣಗಳು ಇದ್ದರೆ ಮೊದಲೇ ಎಚ್ಚೆತ್ತುಕೊಳ್ಳಿ ಹಾಗೂ ಮೊದಲ ಎರಡು ವಾರಗಳು ನಿಮ್ಮ ಕೋಪದಿಂದ ಜಗಳಗಳು ಉಂಟಾಗದಂತೆ ನೋಡಿಕೊಳ್ಳಿ. ಮಾತಿನ ಮೇಲೆ ಹಿಡಿತ ಇರಲಿ. ಆದಷ್ಟು ತಾಳ್ಮೆಯಿಂದ ವರ್ತಿಸಿ .

ಕೆಲಸ ಕಾರ್ಯಗಳಲ್ಲಿ.

 

ದೈಹಿಕವಾಗಿ ನೀವು ನಿಮ್ಮ ಕೆಲಸ ಕಾರ್ಯಗಳನ್ನು ಸುಗಮವಾಗಿ ಮುಂದುವರಿಸಲು ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಕೆಲಸದ ಸ್ಥಳ ಅಥವಾ ಕಚೇರಿ ಸ್ಥಳಗಳಲ್ಲಿ ಬದಲಾವಣೆಗಳು ಕಂಡುಬರುತ್ತವೆ. ಕೆಲಸದ ಸ್ಥಳಗಳಲ್ಲಿ ಇನ್ನೊಬ್ಬರಿಂದ ನಿಂದನೆಗಳನ್ನು ಎದುರಿಸಬೇಕಾಗುತ್ತದೆ. ಆರ್ಥಿಕ ಪರಿಸ್ಥಿತಿಯೂ ಸ್ವಲ್ಪ ದುರ್ಬಲವಾಗಿ ಇರುತ್ತದೆ. ವಿರೋಧಿಗಳು ಮೇಲುಗೈ ಸಾಧಿಸುವ ಸಾಧ್ಯತೆಗಳಿವೆ. ಆದ್ದರಿಂದ ಈ ತಿಂಗಳು ಹೆಚ್ಚಿನ ಖರ್ಚು ಬೇಡ. ಆದಷ್ಟು ಖರ್ಚಿನಲ್ಲಿ ಹಿಡಿತವಿರಲಿ

ಆರೋಗ್ಯ.

ಕಣ್ಣಿನ ರೋಗ, ರಕ್ತದೊತ್ತಡ ಅಥವಾ ಹೃದಯ ಸಂಬಂಧಿತ ಕಾಯಿಲೆಗಳು ನಿಮ್ಮನ್ನು ಕಾಡಬಹುದು ಹಾಗೂ ಕುಟುಂಬದಲ್ಲಿ ತೊಡಕು ಹೆಚ್ಚಾಗಬಹುದು. ಮಾತಿನ ಮೇಲೆ ನಿಗಾ ಇರಲಿ. ಅನಾವಶ್ಯಕ ಚರ್ಚೆ ಬೇಡ.

ಆರ್ಥಿಕ ಪರಿಸ್ಥಿತಿ.

ಮೂರನೇ ವಾರದಿಂದ ನಿಮ್ಮ ಸ್ಥಿತಿ ಬಹಳಷ್ಟು ಬದಲಾಗುತ್ತದೆ. ಆರ್ಥಿಕವಾಗಿ  ಪ್ರಯೋಜನಗಳು ನಿಮಗೆ ಕಂಡು ಬರುತ್ತವೆ. ಹಾಗೂ ಹಣಕಾಸಿನ ಲಾಭಗಳನ್ನು  ನಿರೀಕ್ಷಿಸಬಹುದು. ಮಕ್ಕಳು ಸಂತೋಷವನ್ನು ಅನುಭವಿಸುತ್ತಾರೆ. ಬೆಲೆ ಬಾಳುವ ವಸ್ತುಗಳನ್ನು ಸ್ವೀಕರಿಸುತ್ತೀರಿ ಅಥವಾ ಕೊಂಡುಕೊಳ್ಳುತ್ತೀರಿ. ಯಾರು ನಿಮಗೆ ಹಾನಿ ಮಾಡಲು ಸಾಧ್ಯವಾಗುವುದಿಲ್ಲ ಹಾಗೂ ವಿರೋಧಿಗಳು ನಿಮ್ಮನ್ನು ಗೆಲ್ಲಲು ಆಗುವುದಿಲ್ಲ. ಮನಸ್ಸಿನಲ್ಲಿ ತೃಪ್ತಿ ಮನೆ ಮಾಡುತ್ತದೆ.

 

ನಿಮ್ಮ ಮಾತು ಹಾಗೂ ಸಂಭಾಷಣೆಯಲ್ಲಿ ಸೌಮ್ಯತೆ ಇರುತ್ತದೆ. ಎಲ್ಲರಿಗೂ ಇದು ಇಷ್ಟವಾಗುತ್ತದೆ. ನಿಮ್ಮ ಬಹಳಷ್ಟು ತೊಂದರೆಗಳು ಈ ತಿಂಗಳು ಬಗೆಹರಿಯುತ್ತವೆ. ಇನ್ನೂ ಹೆಚ್ಚಿನ ಯಶಸ್ಸಿಗೆ ಈ ತಿಂಗಳು ಕಹಿ ಮತ್ತು ಅಹಿತಕರ ಪದಗಳನ್ನು ಬಳಸುವುದನ್ನು ತಪ್ಪಿಸಿ ಹಾಗೂ ಮಾತಿನ ಮೇಲೆ ನಿಗಾ ಇಟ್ಟು ಮಾತನಾಡಿ.

ದಿನಾಂಕಗಳು .

ಈ ತಿಂಗಳು ಒಳ್ಳೆಯ ದಿನಗಳು 15,19,26 ಇವಾಗಿವೆ. ಕೆಟ್ಟ ದಿನಗಳು 1,8,11,28.ವಿಶೇಷವಾಗಿ ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳಬೇಕಾದ ದಿನಗಳು ಹೀಗಿವೆ. ಈ ದಿನಗಳು ಸ್ವಲ್ಪ  ಆದಷ್ಟು ಎಚ್ಚರವಾಗಿರಿ 4,5,13,14,22,23.

 

ಮೇ 2018 , ಮೇಷ ರಾಶಿಯವರಿಗೆ ಈ ತಿಂಗಳು ಶುಭ ಅಶುಭ ಫಲಗಳು ಹೀಗಿರುತ್ತವೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top