ಸಮಾಚಾರ

ಮತದಾನದ ಕುರಿತು ಅರಿವು ಮೂಡಿಸಲು ಮುಂದಾದ ನಿವೇದಿತಾ ಗೌಡ!

ಪಕ್ಕಾ ಕನ್ನಡಿಗ ಕುಟುಂಬದಿಂದ ಬಂದಿದ್ದರೂ ಅದರಲ್ಲೂ ಮೈಸೂರಿನಲ್ಲೇ ಹುಟ್ಟಿ ಬೆಳೆದಿದ್ದರೂ ಬ್ರಿಟನ್ ಸಾಮ್ರಾಜ್ಯದಿಂದ ತಪ್ಪಿಸಿಕೊಂಡು ಬಂದಿರುವಂತೆ ತಾನು ಮಾತಾಡಿದ್ದು ಕನ್ನಡವೋ ಇಂಗ್ಲಿಶೋ ಎಂಬ ಬಗ್ಗೆ ಖುದ್ದು ಆಕೆಗೇ ಅನುಮಾನ ಮೂಡುವಂತೆ, ಚಿತ್ರ-ವಿಚಿತ್ರವಾಗಿ ನುಲಿಯುತ್ತ ಬಿಗ್‌ಬಾಸ್ ಶೋದ ಪ್ರಮುಖ ಆಕರ್ಷಣೆಯಾಗಿದ್ದವಳು ನಿವೇದಿತಾ ಗೌಡ. ಇಂತಹ ನಿವೇದಿತಾ ಗೌಡ್ಡಾ ಉರ್ಫ್ ಬೊಂಬೆ ಈಗ ಒಂದೊಳ್ಳೆ ಕೆಲಸಕ್ಕೆ ಕೈ ಹಾಕಿದ್ದಾಳೆ.

 

 

ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕ ವಿಧಾನ ಸಭಾ ಚುನಾವಣೆ ನಡೆಯಲಿದ್ದು ಪ್ರತಿಯೊಬ್ಬರೂ ಮತದಾನ ಮಾಡಬೇಕು ಎನ್ನುವ ಕಾರಣದಿಂದಾಗಿ ಚುನಾವಣಾ ಆಯೋಗ ಮತದಾನ ಪ್ರಮಾಣವನ್ನು ಹೆಚ್ಚುಗೊಳಿಸುವ ಸಲುವಾಗಿ ಸಾಮಾಜಿಕ ಜೀವನದಲ್ಲಿ ಹೆಸರುಗಳಿಸಿರುವ ವಿವಿಧ ವ್ಯಕ್ತಿಗಳಿಂದ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದೆ.

 

 

ಚುನಾವಣಾ ಆಯೋಗ ಈ ಬಾರಿಯ ಚುನಾವಣೆಗೆ ನಿವೇದಿತಾ ಗೌಡ ಅವರನ್ನ ರಾಯಬಾರಿಯಾಗಿ ಆಯ್ಕೆ ಮಾಡಿಕೊಂಡಿದ್ದು ಆಕೆಯ ಕೈಯಿಂದ ಮೈಸೂರಿನ ಜನತೆಯಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.. ವಿಶೇಷವೆಂದರೆ ಈಕೆಯೂ ಕೂಡ ಇದೇ ಮೊದಲಬಾರಿಗೆ ಮತದಾನ ಮಾಡುತ್ತಿದ್ದು “ಓಟ್ ಮಾಡುತ್ತಿರುವುದಕ್ಕೆ ತುಂಬಾ ಖುಷಿಯಾಗ್ತಿದೆ, ಫರ್ಸ್ಟ್ ಟೈಮ್ ವೋಟ್ ಮಾಡುತ್ತಿದ್ದೇನೆ. ನನ್ನ ದೊಡ್ಡವರು ವೋಟ್ ಮಾಡಿಬಂದ ಬೆರಳಿನ ಗುರುತನ್ನು ನೋಡಿ ನಾನು ವೋಟ್ ಮಾಡುವುದು ಯಾವಾಗ ಎಂದುಕೊಳ್ಳುತ್ತಿದ್ದೆ. ಆ ಟೈಮ್ ಈಗ ಬಂದಿದೆ.”

 

 

“ಮತದಾನ ಮಾಡುವುದು ಬಹಳ ಮುಖ್ಯ, ಯಾರು ವೋಟ್ ಮಾಡುತ್ತಾರೋ ಅವರೇ ನಿಜವಾದ ಬಿಗ್ ಬಾಸ್’ಗಳು ಎಂದು ಹೇಳಿರುವ ನಿವೇದಿತಾ ಗೌಡಗೆ ಕೆಲವು ರಾಜಕೀಯ ಪಕ್ಷಗಳಿಂದ ಪ್ರಚಾರ ಮಾಡುವಂತೆ ಆಫರ್ ಗಳು ಬಂದಿದ್ದವಂತೆ ಆದರೆ ಚುನಾವಣಾ ಆಯೋಗದಿಂದ ರಾಯಭಾರಿಯಾಗಿದ್ದ ಕಾರಣ ಯಾವುದೇ ಆಫರ್ ಗಳನ್ನೂ ಒಪ್ಪಿಕೊಳ್ಳದೇ ವೋಟಿಂಗ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸದಲ್ಲಿ ಮಗ್ನರಾಗಿದ್ದಾಳೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top