ಸಮಾಚಾರ

“ನೀವು ಹಿಂದೂ ಧರ್ಮವನ್ನು ಗುತ್ತಿಗೆ ಪಡೆದಿದ್ದೀರಾ?”:ಬಿಜೆಪಿ ವಿರುದ್ಧ ಮತ್ತೆ ಗುಡುಗಿದರು ಪ್ರಕಾಶ್ ರೈ!

ಗೌರಿ ಲಂಕೇಶ್ ಅವರ ಹತ್ಯೆ ನಡೆದ ನಂತರದಲ್ಲಿ ಸಮಾಜದ ಆಗು ಹೋಗುಗಳ ಬಗ್ಗೆ ನಿರ್ಬಿಢೆಯಿಂದ ಧ್ವನಿಯೆತ್ತುತ್ತಾ ಒಂದು ಪಂಥದವರ ವಿರೋಧವನ್ನೂ ಕಟ್ಟಿಕೊಂಡಿರುವವರು ನಟ ಪ್ರಕಾಶ್ ರೈ. ಧರ್ಮಾಧಾರಿತ ರಾಜಕಾರಣ ಮತ್ತು ಆ ಭೂಮಿಕೆಯಲ್ಲಿ ಬಿಜೆಪಿ ಅಜೆಂಡಾಗಳನ್ನು ವಿರೋಧಿಸುತ್ತಾ ಬಂದಿರುವ ರೈ ಇದೀಗ ಮತ್ತೊಮ್ಮೆ ಬಿಜೆಪಿ ವಿರುದ್ಧ ಗುಡುಗಿದ್ದಾರೆ!

 

 

‘ಬಿಜೆಪಿಯವರೇನು ಹಿಂದೂ ಧರ್ಮವನ್ನು ಗುತ್ತಿಗೆಗೆ ತೆಗೆದುಕೊಂಡಿದ್ದಾರಾ? ಸಂವಿಧಾನದ ಕೆಳಗೆ ಸರ್ಕಾರ ರಚಿಸಿದ ಮೇಲೆ ಧರ್ಮ, ಜಾತಿ ಯಾಕೆ ಬೇಕು? ಯಾವುದೇ ಧರ್ಮವಾದರೂ ಅದು ದೀಪ ಹಚ್ಚಬೇಕು, ಬೆಂಕಿ ಹಚ್ಚಬಾರದು’ ಎಂಬುದು ಪ್ರಕಾಶ್ ರೈ ಮಾತಿನ ಸಾರಾಂಶ.

ಪ್ರಕಾಶ್ ರೈ ಸಾಮಾಜಿಕ ವಿಚಾರಗಳ ಬಗ್ಗೆ ಮಾತನಾಡುತ್ತಾ ಅದರತ್ತಲೇ ಹೆಚ್ಚು ಒತ್ತು ನೀಡೋದನ್ನು ಕಂಡ ಅನೇಕರು ರೈ ಕಾಂಗ್ರೆಸ್ ಟಿಕೆಟಿಗಾಗಿಯೇ ಆಟ ಕಟ್ಟುತ್ತಿದ್ದಾರೆಂಬ ಆರೋಪ ಮಾಡಿದ್ದರು. ಆದರೆ ರಾಜಕೀಯ ತನ್ನದಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದ ರೈ ಕಣದಿಂದ ದೂರವೇ ಉಳಿದಿದ್ದಾರೆ.

 

 

ಕರ್ನಾಟಕದಲ್ಲಿ ಮುಂದೇನಾದರೂ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದರೆ ತನ್ನ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸೋದಾಗಿಯೂ ರೈ ಹೇಳಿಕೊಂಡಿದ್ದಾರೆ. ಇದೀಗ ತಾನು ಕಾಂಗ್ರೆಸ್ ಪರವಾಗಿ ಮಾತಾಡುತ್ತಿದ್ದರೂ ಸಮಯ ಬಂದಾಯ ಕಾಂಗ್ರೆಸ್ ವಿರುದ್ಧ ಮಾತಾಡಲೂ ಅಂಜುವುದಿಲ್ಲ ಎಂಬ ಸಂದೇಶವನ್ನೂ ಕೂಡಾ ರೈ ರವಾನಿಸಿದ್ದಾರೆ. ಸದ್ಯದ ಮಟ್ಟಿಗಂತೂ ಧರ್ಮಾಧಾರಿತ ರಾಜಕಾರಣ ಮಾಡುತ್ತಿರುವ ಬಿಜೆಪಿಯೇ ಪ್ರಕಾಶ್ ರೈ ಅವರ ಪ್ರಧಾನ ಟಾರ್ಗೆಟ್!

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top