ಅರೋಗ್ಯ

ರುಚಿ ರುಚಿಯಾದ  ಬೆಂಡೆಕಾಯಿ ಕಿಚಡಿ ಮಾಡುವ ವಿಧಾನ.

ಬೆಂಡೆಕಾಯಿ ಕಿಚಡಿ  ಮಾಡಲು ಬೇಕಾಗುವ ಸಾಮಾಗ್ರಿಗಳು:

* ಬೆಂಡೆಕಾಯಿ ಕಾಲು ಕೆಜಿ

* ಹಸಿ ಮೆಣಸಿನ ಕಾಯಿ 4

* ತುರಿದ ತೆಂಗಿನ ಕಾಯಿ 1 ಕಪ್

* ಒಣ ಮೆಣಸು 2

* ಸಾಸಿವೆ ಅರ್ಧ ಚಮಚ

* ಸ್ವಲ್ಪ ಅರಿಶಿಣ

* ಕರಿ ಬೇವಿನ ಎಲೆ

* ಮೊಸರು 2 ಚಮಚ

* ರುಚಿಗೆ ತಕ್ಕ ಉಪ್ಪು

* ಎಣ್ಣೆ

 

 

 

ಬೆಂಡೆಕಾಯಿ ಕಿಚಡಿ ತಯಾರಿಸುವ ವಿಧಾನ:

* ಸ್ವಲ್ಪ ಎಣ್ಣೆಯನ್ನು ಬಾಣಲೆಯಲ್ಲಿ ಹಾಕಿ ಬಿಸಿ ಮಾಡಿ ನಂತರ ಅದಕ್ಕೆ ಕತ್ತರಿಸಿ, ಶುಚಿ ಮಾಡಿದ ಬೆಂಡೆಕಾಯಿ ಹಾಕಿ ಚೆನ್ನಾಗಿ ಹುರಿಯಬೇಕು. ನಂತರ ಅದನ್ನು ಒಂದು ಬಟ್ಟಲಿನಲ್ಲಿ ಹಾಕಿಡಬೇಕು.

* ನಂತರ ತೆಂಗಿನಕಾಯಿಗೆ ಹಸಿ ಮೆಣಸಿನ ಕಾಯಿ ಹಾಕಿ ಪೇಸ್ಟ್ ಮಾಡಬೇಕು.

* ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಬೇಕು. ನಂತರ ಕರಿಬೇವಿನ ಎಲೆ ಹಾಕಿ ಅದರಲ್ಲಿ ಕತ್ತರಿಸಿದ ಒಣ ಮೆಣಸನ್ನು ಹಾಕಿ 1 ನಿಮಿಷ ಕಾಲ ಹುರಿಯಬೇಕು.

* ನಂತರ ಅರೆದ ತೆಂಗಿನಕಾಯಿಯನ್ನು ಹಾಕಿ 4-5 ನಿಮಿಷ ಕಾಲ ಸೌಟ್ ನಿಂದ ಆಡಿಸುತ್ತಾ ಹುರಿಯಬೇಕು. ನಂತರ 2 ಚಮಚ ಮೊಸರು ಸೇರಿಸಬೇಕು. ನಂತರ ರುಚಿಗೆ ತಕ್ಕ ಉಪ್ಪು ಹಾಕಿ, ಅರಿಶಿಣ ಸೇರಿಸಿ,  ಫ್ರೈ ಮಾಡಿದ ಬೆಂಡೆಕಾಯಿಯನ್ನು ಹಾಕಿ 6-7 ನಿಮಿಷ ಕುದಿಸಿದರೆ ಬೆಂಡೆಕಾಯಿ ಕಿಚಡಿ ರೆಡಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top