ಮನೋರಂಜನೆ

ಗುಟ್ಟಿನ ಮದುವೆ ಸುದ್ದಿಗೆ ಕೊನೆಗೂ ತೆರೆ ಎಳೆದ ಪ್ರಿಯಾಂಕಾ ಚೋಪ್ರಾ!

ಬಾಲಿವುಡ್ ನಟಿಮಣಿಯರು ಸದ್ದು ಮಾಡಲು ಭಾರಿ ಘನಂಧಾರಿ ಕಾರಣಗಳೇನೂ ಬೇಕಾಗಿಲ್ಲ. ತೀರಾ ಒಂದೆರಡು ಚಿತ್ರಗಳಲ್ಲಿ ಕಾಣಿಸಿಕೊಂಡು ಅದರಲ್ಲೂ ಬರಖತ್ತಾಗದ ಪಾತ್ರಗಳನ್ನ ಮಾಡಿ ನಟಿ ಎನಿಸಿಕೊಂಡವರೂ ಇಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಹಾಗಿರೋವಾಗ ತನ್ನ ನಟನಾ ಪ್ರತಿಭೆಯ ಮೂಲಕವೇ ವಿಶ್ವಾಧ್ಯಂತ ಅಭಿಮಾನಿಗಳನ್ನು ಹೊಂದಿರೋ ಪ್ರಿಯಾಂಕಾ ಚೋಪ್ರಾ ಸುದ್ದಿ ಕೇಂದ್ರವಾಗೋದರಲ್ಲೇನೂ ವಿಶೇಷವೇನಿಲ್ಲ ಬಿಡಿ!

 

 

ಸಿನಿಮಾ ಮಂದಿಯ ಮದುವೆ, ಅಫೇರು ವಿಚಾರಗಳಲ್ಲಿ ಪದೇ ಪದೇ ಅಂತೆಕಂತೆ ನ್ಯೂಸುಗಳು ಸಾಮಾಜಿಕ ಜಾಲತಾಣಗಳಲ್ಲಿ ಗಾಸಿಪ್ ಪ್ರಿಯ ಬಾಯಿಯ ತುದಿಯಿಂದ ಹರಡುತ್ತಿರುತ್ತವೇ. ಇಂಥ ಗಾಸಿಪ್ ಪ್ರಿಯರಿಗೆ ಇದೀಗ ಮೃಷ್ಟಾನ್ನವೂ ಭೋಜನವಾಗಿ ಪರಿಮಣಿಸಿರುವವರು ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ. ಮೊನ್ನೆ ವತ್ತಾರೆಯಿಂದ ಪ್ರಿಯಾಂಕಾ ಚೋಪ್ರಾ ಗುಟ್ಟಾಗಿ ಮದುವೆ ಮಾಡ್ಕೊಂಡಿದ್ದಳಂತೆ, ಕೈಯಲ್ಲಿ ಕರಿಮಣಿ ಕಟ್ಕೊಂಡಿದ್ದಳಂತೆ ಎಂಬಂತ ನಾನಾ ಗಾಳಿಸುದ್ದಿಗಳು ವೈರಲ್ ಆಗಿದ್ದವು ಈ ಹಿನ್ನೆಲೆಯಲ್ಲಿ ಈ ವಿಚಾರ ತಾರಕಕ್ಕೇರಲು ಬಿಡಬಾರದು ಎಂದು ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದ ಅಕೌಂಟಿನಲ್ಲಿ ಪ್ರಿಯಾಂಕಾ ಸ್ಪಷ್ಟೀಕರಣ ನೀಡಿದ್ದಾರೆ.

 

 

ರಹಸ್ಯವಾಗಿ ಮದುವೆಯಾಗಿದ್ದಾರೆ ಎನ್ನುವ ಸುಳ್ಳು ಸುದ್ದಿಯ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ’ಹಹಹ..ನನ್ನ ಮದುವೆ ಕುರಿತ ಊಹಾಪೋಹ ಮುಗಿಲು ಮುಟ್ಟುತ್ತಿವೆ. ಕೆಟ್ಟ ಕಣ್ಣು ಬೀಳದಂತೆ ಕಟ್ಟಿಕೊಂಡಿರುವ ಕರಿಮಣಿ ಸರ ಇದು ಅಷ್ಟೇ. ಒಂದೊಮ್ಮೆ ನಾನು ಮದುವೆಯಾದರೆ ಖಂಡಿತ ನಿಮಗೆಲ್ಲಾ ತಿಳಿಸಿಯೇ ಮದುವೆಯಾಗುತ್ತೇನೆ.. ಇದರಲ್ಲಿ ರಹಸ್ಯವೇನು ಇಲ್ಲ”ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಮಾಡಲು ಕೆಲಸವಿಲ್ಲದೇ ವಿನಾಕಾರಣ ಮದುವೆ ಗಾಸಿಪ್ ಹರಡಿಸುತ್ತಿದ್ದ ಮಂದಿಗೆ ಬಾಯಿಗೆ ಅನ್ಯಾಯವಾಗಿ ಬೀಗ ಜಡಿದಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top