ಸಿನಿಮಾ

“ಎರಡು ಕೈ ಸೇರಿದ್ರೇನೇ ಚಪ್ಪಾಳೆ ಆಗೋದು”- ಕಾಸ್ಟಿಂಗ್ ಕೌಚ್ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ರಾಗಿಣಿ!

ಸಿನಿಮಾಗಳಲ್ಲಿ ನಟಿಸಲು ಅವಕಾಶ ಕೊಡುವ ಆಮಿಷವೊಡ್ಡಿ ಯುವನಟಿಯರನ್ನು ಮಂಚಕ್ಕೆ ಕರೆಯುವ ಕಾಯಿಲೆ ಎಲ್ಲ ಚಿತ್ರರಂಗಗಳಿಗೂ ಸಾಂಕ್ರಾಮಿಕವಾಗಿ ಹರಡಿಕೊಂಡಂತಿದೆ.. ಇತ್ತೀಚಿನ ದಿನಗಳಲ್ಲಿ ದೇಶವ್ಯಾಪಿ ಭಾರಿ ಚರ್ಚೆಯನ್ನು ಹುಟ್ಟುಹಾಕಿರುವ ಇಂತಹ ಅನಿಷ್ಟ ಪಿಡುಗಿನ ವಿರುದ್ಧ ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ಭಾಷೆಯ ಪ್ರಸಿದ್ಧ ಯುವ ನಟಿಯರನೇಕರು ತಾವು ಅನುಭವಿಸಿದ್ದ ಕಾಸ್ಟಿಂಗ್ ಕೌಚ್ ಮನೋ ವ್ಯಾಕುಲವನ್ನು ಸಾಂದರ್ಭಿಕವಾಗಿ ಬಿಚ್ಚಿಡುತ್ತಿದ್ದಾರೆ.

 

 

ಕೆಲವು ದಿನಗಳ ಹಿಂದೆಯಷ್ಟೇ ಶ್ರುತಿ ಹರಿಹರನ್, ಕೃಷಿ ತಾಪಂಡ, ಅನಿತಾ ಭಟ್, ಹರ್ಷಿಕಾ ಪೂಣಚ್ಚ ಸೇರಿದಂತೆ ಅನೇಕ ನಟಿಯರು ಇಂಡಸ್ಟ್ರಿಯಲ್ಲಿ ನಡೆಯುತ್ತಿರುವ ಮಂಚಕ್ಕೆ ಕರೆಯುವ ಕೆಟ್ಟ ಪದ್ದತಿಯ ಬಗ್ಗೆ ಮಾತನಾಡಿದ್ದರು ಇದೀಗ ಸ್ಯಾಂಡಲ್ ವುಡ್ ನಲ್ಲಿ ಬೋಲ್ಡ್ ನಟಿ ಎಂತಲೇ ಹೆಸರುವಾಸಿಯಾಗಿರುವ ರಾಗಿಣಿ ದ್ವಿವೇದಿ ಪಾತ್ರಕ್ಕಾಗಿ ಪಲ್ಲಂಗಕ್ಕೆ ಆಹ್ವಾನಿಸುವ ಕೆಟ್ಟ ಚಾಳಿಯ ಬಗ್ಗೆ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಈ ಮೂಲಕ ನಟಿಯರನ್ನು ಮಂಚ ಹತ್ತಿಸಿಕೊಳ್ಳೋ ಕಾಮಾಂಧ ಮನಸ್ಥಿತಿಗೆ ನಟಿಯರೂ ಹೇಗೆ ಕಾರಣವಾಗುತ್ತಾರೆಂಬ ವಿಚಾರವನ್ನೂ ರಾಗಿಣಿ ಪರೋಕ್ಷವಾಗಿ ಬಿಚ್ಚಿಟ್ಟಿದ್ದಾರೆ!

 

 

ಕಿಚ್ಚು ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಕಾಸ್ಟಿಂಗ್ ಕುರಿತಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಗಿಣಿ “ಕಾಸ್ಟಿಂಗ್ ಕೌಚ್ ಎಂಬುದು ನಟಿಯರ ವಿಚಾರಕ್ಕೆ ಬಿಟ್ಟಿದ್ದು, ಅದು ಅವರವರ ವಯಕ್ತಿಕ ವಿಚಾರ. ಆದರೆ ನನಗೆ ಚಿತ್ರರಂಗದಲ್ಲಿ ಆ ರೀತಿಯ ಯಾವುದೇ ಅನುಭವವಾಗಿಲ್ಲ.. ಈ ವಿಚಾರದಲ್ಲಿ ಕೇವಲ ಮಂಚಕ್ಕೆ ಕರೆಯುವವರದ್ದು ಮಾತ್ರ ತಪ್ಪು ಎಂದು ಹೇಳೋಕಾಗಲ್ಲಾ ಯಾಕಂದ್ರೆ ಒಂದು ಕೈಯಿಂದ ಚಪ್ಪಾಳೆ ಆಗಲ್ಲ. ಎರಡು ಕೈ ಸೇರಿದರೆ ಚಪ್ಪಾಳೆ ಆಗೊದು ಎಂದು ಕಾಸ್ಟಿಂಗ್ ಕೌಚ್ ವಿಚಾರದಲ್ಲಿ ನಟಿಯರದ್ದೂ ತಪ್ಪಿದೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top