ಸಮಾಚಾರ

ದ್ರೋಣಾಚಾರ್ಯ ಪ್ರಶಸ್ತಿಗೆ ದ್ರಾವಿಡ್‌ ಹೆಸರು ಸೂಚಿಸಿದ ಬೆನ್ನಲ್ಲೇ ಬಿಸಿಸಿಐನಲ್ಲೇ ಅಪಸ್ವರ

ಕೆಲವು ದಿನಗಳ ಹಿಂದೆ ಭಾರತದ ಕಿರಿಯರ ಅಂಡರ್ ೧೯ ಕ್ರಿಕೆಟ್ ತಂಡ ವಿಶ್ವಕಪ್ ಗೆಲ್ಲುವ ಮುಖೇನ ಸಾಧನೆ ಮೆರೆದಿತ್ತು. ಸತತ ನಾಲ್ಕನೇ ಬಾರಿ ವಿಶ್ವಕಪ್ ಕ್ರಿಕೆಟ್ ಕಿರೀಟ ಗೆಲ್ಲುವ ಮುಖೇನ ದಾಖಲೆ ಮಾಡಿದ ಭಾರತ ತಂಡಕ್ಕೆ ತರಬೀಡುದಾರರಾಗಿರುವ ಆಗಿರುವ ಕನ್ನಡಿಗ ರಾಹುಲ್ ದ್ರಾವಿಡ್ ರವರಿಗೆ ಈ ಸಮಯದಲ್ಲಿ ಸಿಕ್ಕಾಬಟ್ಟೆ ಪ್ರಶಂಸೆಯ ಸುರಿಮಳೆ ಹರಿದುಬಂದಿತ್ತು. ತಂಡದ ಗೆಲುವಿನ ಹಿಂದಿರುವುದು ‘ಗೋಡೆ’ ದ್ರಾವಿಡ್ ಅವರ ನಿರಂತರ ಪರಿಶ್ರಮ ಎಂದು ಹಾಡಿಹೊಗಳಲಾಗಿತ್ತು.

 

 

ಈಗ ರಾಹುಲ್‌ ದ್ರಾವಿಡ್‌ ಅವರ ಹೆಸರನ್ನು ಬಿಸಿಸಿಐ ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಿದೆ. ಆದರೆ ಇದಕ್ಕೆ ಬಿಸಿಸಿಐನಲ್ಲೇ ಅಪಸ್ವರ ಕೇಳಿಬಂದಿದೆ ಎನ್ನಲಾಗುತ್ತಿದೆ. ದ್ರಾವಿಡ್‌ ಅಸಾಮಾನ್ಯ ಕ್ರಿಕೆಟಿಗ, ಕೊಚ ಇದ್ದಾರೆ ಆದರೆ ಈ ಪ್ರಶಸ್ತಿಗೆ ಅವರ ಹೆಸರು ಸೂಚನೆ ಸರಿಯಿಲ್ಲ. ಇದರಿಂದ ತೆರೆಮರೆಯ ಸಾಧಕರಿಗೆ ಅನ್ಯಾಯ ಆಗುತ್ತದೆ ಎಂದು ಬಿಸಿಸಿಐನ ಕೆಲ ಮೂಲಗಳು ವಾದ ಮಾಡಿವೆ ಎನ್ನಲಾಗಿದೆ.

 

 

ಈ ಹಿಂದಿನ ಅಂಡರ್ 19 ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದಾಗ ಕುಲದೀಪ್‌ ಸಿಂಗ್‌, ರಿಷಭ್‌ ಪಂತ್‌, ಯಜುವೇಂದ್ರ ಚಹಲ್‌ರನ್ನು ರೂಪಿಸಿರುವ ವ್ಯಕ್ತಿಗಳು ಮರೆಯಲ್ಲೇ ಇರುತ್ತಾರೆ. ಅಂತಹವರಿಗೆ ನೀಡಬೇಕಾದ ಪ್ರಶಸ್ತಿಗೆ ದ್ರಾವಿಡ್‌ ಹೆಸರನ್ನು ಶಿಫಾರಸು ಮಾಡುವುದು ತಪ್ಪು ಎನ್ನುವುದು ಕೆಲವರ ವಾದ. ಭಾರತ ಅಂಡರ್ 19 ಕ್ರಿಕೆಟ್ ತಂಡ ವಿಶ್ವಕಪ್‌ ಗೆಲ್ಲಲು, ಎ ತಂಡ ಉತ್ತಮವಾಗಿ ಆಡಲು ರಾಹುಲ್ ದ್ರಾವಿಡ್‌ ಕಾರಣ ಎನ್ನುವುದು ಪ್ರಶ್ನಾತೀತ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top