ದೇವರು

ಈ ನದಿಯಲ್ಲಿ ಎಲ್ಲಿ ನೋಡಿದ್ರು ಬರಿ ಶಿವಲಿಂಗಗಳೇ ಕಾಣುತ್ತೆ ,ಈ ಶಿವಲಿಂಗಗಳ ದರ್ಶನ ಪಡ್ಕೊಂಡ್ರೆ ಸಾವಿರ ಜನ್ಮಗಳ ಪುಣ್ಯ ಅಂತಾರೆ ಹಾಗಾದ್ರೆ ಈ ಜಾಗ ಎಲ್ಲಿದೆ ಗೊತ್ತಾ

ಈ ನದಿಯಲ್ಲಿ ಎಲ್ಲಿ ನೋಡಿದರು ಶಿವಲಿಂಗಗಳೇ .ಈ ನದಿ ಯಾವುದು ? ಎಲ್ಲಿದೆ ಎಂದು ನಿಮಗೆ ಗೊತ್ತೇ ?

 

 

ಸಹಸ್ರ  ಲಿಂಗವು ಶಿರಸಿಯ ಯಲ್ಲಾಪುರ  ರಸ್ತೆಯಲ್ಲಿ ಶಿರಸಿಯಿಂದ ಸುಮಾರು 12 ಕಿಲೋಮಿಟರ್ ದೂರದಲ್ಲಿ ಮುಖ್ಯ ರಸ್ತೆಯಿಂದ 0.5  ಕಿಲೋಮೀಟರ್ ದೂರದಲ್ಲಿದೆ. ಶಾಲ್ಮಲಾ ನದಿಯ ಹರಿವಿನಲ್ಲಿರುವ ಕಲ್ಲು ಬಂಡೆಗಳ ಮೇಲೆ ಬಹಳಷ್ಟು ಲಿಂಗ ಮತ್ತು ನಂದಿ ವಿಗ್ರಹಗಳನ್ನು ಕೆತ್ತಿದ್ದಾರೆ.

ಇದರಿಂದಾಗಿ ಇದಕ್ಕೆ ಸಹಸ್ರಲಿಂಗ ಎಂಬ ಹೆಸರು ಬಂದಿದೆಯಂತೆ. ಈ ಪ್ರವಾಸಿ ತಾಣವು ಸೋಂದಾ ಮತ್ತು ಸ್ವರ್ಣ ವಲ್ಲಿ ಮತಗಳಿಗೆ  ತುಂಬ ಹತ್ತಿರದಲ್ಲಿದೆ.  ಈ ಲಿಂಗಗಳನ್ನು  ಕೆಳದಿ ನಾಯಕರ ಕಾಲದಲ್ಲಿ ಕೆತ್ತಲಾಗಿದೆ ಎಂದು ಹೇಳುತ್ತಾರೆ. ಕೆಲವು ಲಿಂಗಗಳು ಪ್ರಾಕೃತಿಕ ರಚನೆಯಂತೆಯೇ ಕಾಣುತ್ತದೆ.

 

 

ಶಿರಸಿ ಯಲ್ಲಾಪುರ ನಡುವಿನ ರಸ್ತೆಯಲ್ಲಿ ಈ ಪ್ರದೇಶವಿದ್ದು, ಶಾಲ್ಮಲಾ ನದಿಯ ಒಟ್ಟು ಜಾಗವನ್ನು ಸಂರಕ್ಷಿತ  ಪ್ರದೇಶವೆಂದು ಘೋಷಿಸಲಾಗಿದೆ.ದಾರಿಯುದ್ದಕ್ಕೂ ಪಕ್ಷಿಗಳ ಕಲರವ ಮತ್ತೆ ಮತ್ತೇ ಸವಿಯಬೇಕೆನ್ನುವ ಕಾಡು ಹಣ್ಣುಗಳು, ಸುವಾಸನೆ ಭರಿತ  ಹೂಗಳು, ಜನರನ್ನು ಸೆಳೆಯುತ್ತವೆ.

 

 

ಶಿರಸಿಯಿಂದ ಬಾಡಿಗೆಗೆ ಜೀಪುಗಳನ್ನು ಪಡೆದು  ಇಲ್ಲಿಗೆ ತೆರಳುವುದು ಬಲು ಸೂಕ್ತ. ಇನ್ನುಳಿದಂತೆ ನಿಮ್ಮ ಸ್ವಂತ ವಾಹನಗಳಿದ್ದರೆ ಇನ್ನಷ್ಟು ಆನುಕೂಲ.ಯಾಕೆಂದರೆ ಇದರ ಸುತ್ತ ಮುತ್ತಲೂ ಸಾಕಷ್ಟು ಇತರ ನೈಸರ್ಗಿಕ ಆಕರ್ಷಣೆಗಳಿಂದ ಆನಂದವನ್ನು ಹೊಂದಬಹುದು.

ಇನ್ನುಳಿದಂತೆ ಇಲ್ಲಿ ಯಾವುದೇ ರೀತಿಯ ಉಪಾಹಾರ ಗೃಹಗಳಿಲ್ಲ.ಈ  ಕಾರಣದಿಂದ  ಶಿರಸಿಯಿಂದಲೇ  ಊಟದ ವ್ಯವಸ್ಥೆ ಮಾಡಿಕೊಂಡು ಬಂದಿದ್ದಲ್ಲಿ, ಇಲ್ಲಿನ ಪ್ರಶಾಂತ ಹಾಗೂ ರಮಣೀಯ ಪರಿಸರದ ಮದ್ಯೆ  ಹಾಯಾಗಿ ವಿಶ್ರಾಂತಿ ತೆಗೆದುಕೊಳ್ಳಬಹುದು ಹಾಗೆ ಊಟವನ್ನು  ಸವಿಯಬಹುದು. ಆದರೆ ದಯವಿಟ್ಟು ಈ ಸ್ಥಳದಲ್ಲಿ  ಗಲೀಜು ಮಾಡದಂತೆ ನೋಡಿಕೊಂಡರೆ ಸಾಕು.

 

 

ಶಿರಸಿ ಪ್ರದೇಶದಲ್ಲಿ ಹಿಂದೆ ಅಂದರೆ 1678 ನೇ ಇಸವಿಯಿಂದ 1718 ನೇ ಇಸವಿಯ ಸಮಯದಲ್ಲಿ ಆಳುತ್ತಿದ್ದ ಸಾದಶಿವರಾಯ ಆರಸರು ಶಿವಲಿಂಗ ನಿರ್ಮಾತೃ ಎನ್ನಲಾಗಿದೆ. ಶಿವನ ಪರಮ ಭಕ್ತನಾಗಿದ್ದ  ಈತ ಇಲ್ಲಿ ಹರಿಯುತ್ತಿರುವ ಶಾಲ್ಮಲ ನದಿಯ ತಟದ ಕಲ್ಲುಗಳ ಮೇಲೆ, ನೀರ ಒಳಗಿನ  ಕಲ್ಲುಗಳ ಮೇಲೆ ಹೀಗೆ ಎಲ್ಲೆಂದರಲ್ಲಿ ಶಿವಲಿಂಗವನ್ನು ಕೆಟ್ಟಿಸಿದ್ದನಂತೆ,  ನೀವು ಪ್ರವಾಸ ಕೈಗೊಂಡರೆ  ಒಂದು ಬಾರಿ ಸಹಸ್ರ ಲಿಂಗವನ್ನು ದರ್ಶನ ಮಾಡಿಕೊಂಡು ಪುನೀತರಾಗಿ ಜೊತೆಗೆ ಇಲ್ಲಿನ  ಪ್ರಕೃತಿಯ ರಮಣೀಯತೆಯನ್ನು ಆಸ್ವಾದಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top