ದೇವರು

ಹಿಂದಿನ ಕಾಲದಲ್ಲಿ ಆಚರಿಸುತ್ತಿದ್ದ ತಲೆ ಮುಡಿ ಎಂದರೇನು, ಇದರ ಹಿಂದಿರೋ ವೈಜ್ಞಾನಿಕ ಕಾರಣ ,ಅರ್ಥ ತಿಳ್ಕೊಂಡ್ರೆ ಈ ತರದ ಆಚರಣೆಗಳನ್ನ ಗೌರವಿಸುತ್ತೀರಾ

ತಲೆ ಮುಡಿ ಎಂದರೇನು ? ಈ ಸಂಪ್ರದಾಯದ ಹಿಂದಿರುವ ಕಾರಣ ಏನು ? ನಮ್ಮ ಪೂರ್ವಜರು ಇದನ್ನು ಆಚರಿಸುವುದರ ಹಿಂದೆ ಇದ್ದ ಉದ್ದೇಶ ಮತ್ತು ಅರ್ಥ ಏನು ? ಎಂದು ನಿಮಗೆ ಗೊತ್ತೇ ?

 

ಪೂರ್ವದಲ್ಲಿ ಸ್ತ್ರೀಯರು, ಪುರುಷರು ಎಲ್ಲರೂ ತಲೆಯ ಮೇಲೆ ಕೂದಲುಗಳನ್ನು ಬೆಳೆಸುತ್ತಿದ್ದರು. ಬೆಳೆಸಿದ ಕೂದಲನ್ನು ತಲೆಯ ಮಧ್ಯಭಾಗದಲ್ಲಿ ಮುಡಿ ಹಾಕುತ್ತಿದ್ದರು. ಮನಸ್ಸಿನ ಒಂದು ಆಲೋಚನೆಗಳಿಗೆ ಶಿರಸ್ಸು  ಸ್ಥಾನ. ಅದು ತಲೆಯಲ್ಲಿನ ಯೋಚನೆಗಳು ವಿಕಾರಗಳು ಲೆಕ್ಕವಿಲ್ಲದಷ್ಟು ಇವೆ. ಆದ್ದರಿಂದ ಯೋಚನೆಗಳನ್ನು ತಲೆ ಕೂದಲುಗಳ ಸಂಖ್ಯೆಯಾಗಿ ತಿಳಿದು ಅವುಗಳನ್ನು ಮುಡಿ ಹಾಕುವುದು ನಡೆದಿದೆ. ತಲೆಯ ಮಧ್ಯಭಾಗದಲ್ಲಿ ಬ್ರಹ್ಮ ನಾಡಿ ಇದೆ. ತಲೆಯ ಮೇಲೆ  ಇದರ ಸ್ಥಾನವನ್ನು “ನೆತ್ತಿ” ಎನ್ನುತ್ತಾರೆ.

 

 

ನಮ್ಮಲ್ಲಿನ ಭಾವನೆಗಳನ್ನು ಇಷ್ಟದ ಅನುಸಾರ ಹೋಗದಂತೆ ಬಂಧಿಸುವುದರಿಂದ ಮನೋ ನಿಗ್ರಹವನ್ನು ಹೊಂದುವುದನ್ನು  ಆತ್ಮ ತಿಳಿಯುತ್ತದೆ. ಯೋಚನೆಗಳು ಉದ್ರೇಕಗೊಳ್ಳುತ್ತಿರುವವರೆಗೂ ಶರೀರದೊಳಗಿನ ಆತ್ಮ ತಿಳಿಯುವುದಿಲ್ಲ. ಅನೇಕ ಯೋಚನೆಗಳನ್ನು ಕೂದಲಿನ ಸಂಖ್ಯೆಗಳೊಂದಿಗೆ ಹೋಲಿಸಿ ಯೋಚನೆಗಳನ್ನು ಉದ್ರೇಕಗೊಳ್ಳದಂತೆ ಮಾಡುವ ಅರ್ಥ ಬರುವಂತೆ ಕೂದಲುಗಳನ್ನು ಮುಡಿ ಹಾಕುತ್ತಿದ್ದರು.

 

ಯೋಚನೆಗಳು ನಿಲ್ಲುವುದರಿಂದ ತಲೆ ಮಧ್ಯದಲ್ಲಿನ ಆತ್ಮ ತಿಳಿಯುತ್ತದೆ. ಆದ್ದರಿಂದ ಕೂದಲನ್ನು ಸಹ ತಲೆಯ ಮಧ್ಯ ಭಾಗದಲ್ಲಿ ಮುಡಿ ಹಾಕುತ್ತಿದ್ದರು. ಪೂರ್ವ ಕಾಲದಲ್ಲಿ ಸ್ತ್ರೀಯರು ಪುರುಷರು ಎಲ್ಲರೂ ತಲೆಯ ಮೇಲೆ ಕೂದಲನ್ನು ಕುಪ್ಪೆಯಾಗಿ ಕಟ್ಟುತ್ತಿದ್ದರು. ಕೂದಲುಗಳ “ಕುಪ್ಪೆ” ಎಂಬ ಪದವು ಕಾಲಕ್ರಮದಲ್ಲಿ ಸ್ವಲ್ಪ ಬದಲಾಗಿ “ಕೊಪ್ಪೆ” ಆಗಿದೆ. ಜ್ಞಾನದ ಅರ್ಥ ಹೊಂದಿರುವ ಕೊಪ್ಪೆ ಪೂರ್ವದಲ್ಲಿ ಪುರುಷರಿಗೆ ಸ್ತ್ರೀಯರಿಗೆ ತಲೆಯ ಮೇಲೆ ಇರುತ್ತಿತ್ತು .

 

 

ತಲೆಯ ಮದ್ಯ ಸ್ಥಾನವೂ ಆತ್ಮ ಸ್ಥಾನವೆಂದು, ಆ ಸ್ಥಾನಕ್ಕೆ ಪೂಜ್ಯ ಭಾವನೆಯಿಂದ ಸುವಾಸನೆ ಇರುವ ಬಿಳಿಯ ಮಲ್ಲಿಗೆ ಹೂವುಗಳನ್ನು ಧರಿಸುತ್ತಿದ್ದರು. ಪೂರ್ವ ಕಾಲದಲ್ಲಿ ಸ್ತ್ರೀಯರು ಪುರುಷರೆಲ್ಲರೂ ತಮ್ಮ ತಮ್ಮ ಕೊಪ್ಪೆಗಳ ಮೇಲೆ ಹೂವುಗಳನ್ನು ಮುಡಿಯುತ್ತಿದ್ದರು. ಪುರುಷರು ಹೂವುಗಳನ್ನು ಮುಡಿಯುತ್ತಿದ್ದರೆಂದರೆ ವಿಚಿತ್ರವಾಗಿದೆ ಅಲ್ಲವೇ ?

ಜ್ಞಾನ ಚಿಹ್ನೆಯಾದ ಚಂದ್ರನ ಬಿಂಬವು ಬಿಳಿಯದು. ಹಾಗೆಯೇ ಬೆಳ್ಳಗಿರುವ ಮಲ್ಲಿಗೆ ಹೂಗಳು ಸಹ ಜ್ಞಾನಾರ್ಥ ಕೊಡುವವೇ, ನಮ್ಮ ತಲೆಗಳಲ್ಲಿ ಸ್ವಚ್ಛವಾದ ಜ್ಞಾನ ಉಂಟಾಗಬೇಕೆಂದು ಪೂಜ್ಯ ಭಾವನೆಯಿಂದ ಸ್ವಚ್ಛತೆಗೆ ಮತ್ತೊಂದು ಹೆಸರಾದ ಬಿಳಿ ಬಣ್ಣದ ಮಲ್ಲಿಗೆ ಹೂವುಗಳನ್ನೇ  ಧರಿಸುತ್ತಿದ್ದರು .ಈ ವಿಧವಾಗಿ ಪೂರ್ವ ಕಾಲದ ಇಂದೂಗಳು ಎಷ್ಟೋ ಭಾವನೆಯಿಂದ ಕೂಡಿಕೊಂಡಿರುವ ತಲೆಯ ಮುಡಿಯನ್ನು ತಲೆಯ ಮಧ್ಯಭಾಗದಲ್ಲಿಯೇ ಇರಿಸಿಕೊಳ್ಳುತ್ತಿದ್ದರು.

ಇಂದಿನ ಕಾಲದಲ್ಲಿ ಪುರುಷರ ತಲೆಯ ಮೇಲಿನ ಕಪ್ಪೆ ಮಾಯವಾಗಿದೆ. ಸ್ತ್ರೀಯರಲ್ಲಿಯೂ ಸಹ ಕ್ರಾಪುಗಳು, ಜಡೆಗಳು ಬಂದು ಕೊಪ್ಪೆ ಕಟ್ಟುವವರೇ ಇಲ್ಲದಂತಾಗಿದ್ದಾರೆ. ಎಲ್ಲಿಯಾದರೂ ಯಾರಾದರೂ ಕೊಪ್ಪೆ ಕಟ್ಟುವವರಿದ್ದಾರೆ ಎಂದರೆ ಆ ಕೊಪ್ಪೆ ತಲೆ ಮೇಲೆ ಇರದೇ, ತಲೆಯ ಹಿಂದೆ ಇರುತ್ತದೆ. ಸ್ತ್ರೀಯರು ಎಲ್ಲರೂ ಹೂವುಗಳನ್ನು ಇಟ್ಟುಕೊಳ್ಳುವುದು  ಇಂದಿಗೂ ಇದ್ದರೂ, ಅವು ದೇವರಿಗೆ ಅಲ್ಲ. ಮುಡಿಯುವ ಹೂವುಗಳು ಸಹ ಅಲಂಕಾರಕ್ಕಾಗಿ ಆಕರ್ಷಣೆಗಾಗಿ ಮಾತ್ರವೇ ಮುಡಿಯುತ್ತಿದ್ದಾರೆ. ಪೂರ್ವದಲ್ಲಿ ಎಷ್ಟೋ ಜ್ಞಾನದಿಂದ ಕೂಡಿಕೊಂಡಿರುವ ಆಚರಣೆ ಸಂಪ್ರದಾಯವು  ಈ ದಿನ ಅರ್ಥಹೀನವಾಗಿ ಹೋಗಿದೆ .

 

 

ಕೊಪ್ಪೆ ಕಟ್ಟಿನ ಹೂವುಗಳು ಮೂಡಿಸುವುದು ಜ್ಞಾನ ಸಂಪ್ರದಾಯವೆಂಬ ಮಾತೇ ತಿಳಿಯದಂತೆ ಹೋಗಿದೆ. ಇಲ್ಲಿಗೆ ನೂರು ವರ್ಷಗಳ ಕೆಳಗೂ ಸಹ ಪುರುಷರಿಗೆ ಕೊಪ್ಪೆಗಳು ಇರುತ್ತಿದ್ದವು. ಪಂಜಾಬ್ ರಾಷ್ಟ್ರದಲ್ಲಿ ಸಿಕ್ಕರೂ ಈಗಲೂ ತಲೆಯ ಮೇಲೆ ಕೂದಲನ್ನು ಮುಡಿ ಹಾಕುವುದನ್ನು ನೋಡಿದರೆ ಪೂರ್ವದ ಸಂಪ್ರದಾಯ ಅಲ್ಲಲ್ಲಿ ಮಾತ್ರವೇ ಉಳಿದುಕೊಂಡಿದೆ ಎಂದು ತಿಳಿಯುತ್ತದೆ. ಅಲ್ಲಿಯೂ ಸಹ ಪುರುಷರು ಹೂವು ಇಡುವ ಸಂಪ್ರದಾಯ ಇಲ್ಲ.

ಈಗಲಾದರೂ ಜ್ಞಾನ ತಿಳಿದು ಸಂಪ್ರದಾಯದ ಪ್ರಕಾರ ಪುರುಷರು ಕೊಪ್ಪೆ ಕಟ್ಟಿ ಹೂವುಗಳನ್ನು ಇಟ್ಟುಕೊಳ್ಳಬಹುದು. ಆದರೆ ಉಳಿದವರಿಗೆ ಸಂಪ್ರದಾಯದ ಬೆಲೆ ತಿಳಿದಿಲ್ಲ. ಆದ್ದರಿಂದ ಹೂ ಮುಡಿದು ಕೊಂಡವರನ್ನು ನಪುಂಸಕನೆಂದು ಅಂದುಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಮೊದಲು ಇಂದೂ ಸಂಪ್ರದಾಯಗಳನ್ನು ಕುರಿತು ಪ್ರಜೆಗಳಿಗೆ ತಿಳಿಸಬೇಕಾದ ಜವಾಬ್ದಾರಿ ಎಷ್ಟಾದರೂ ಇದೆ. ಎಲ್ಲರಿಗೂ  ತಿಳಿದಾಗ ಆಚರಣೆಗೆ ಅರ್ಥ ಏರ್ಪಡುತ್ತದೆ. ಇಲ್ಲದಿದ್ದರೆ ಅನರ್ಥ ಮಾಡಿಕೊಳ್ಳುವ ಸಾಧ್ಯತೆ ಇದೆ. ಇಂದೂ ಸಂಪ್ರದಾಯಗಳಲ್ಲಿ ತಲೆ ಮೇಲೆ ಮುಡಿ ಹಾಕುವುದನ್ನು ಸ್ತ್ರೀಯರಾದರೂ ಮುಖ್ಯವಾದ ಕೆಲಸವಾಗಿ ಇಟ್ಟುಕೊಳ್ಳಬೇಕೆಂದು , ಕೋರುತ್ತಿದ್ದೇವೆ ಹಾಗೆ ಆಗದಿದ್ದಲ್ಲಿ , ಮುಡಿ ಸಂಪ್ರದಾಯ ನಮ್ಮ ತಳಪಾಯದಿಂದಲೇ ಅಂತ್ಯವಾಗಿ ಹೋಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top