ಸಮಾಚಾರ

ಹಿಂದಿಯ ಅರ್ಜುನ್ ರೆಡ್ಡಿಯಾಗ್ತಾನಂತೆ ಶಾಹಿದ್ ಕಪೂರ್!

ಪದ್ಮಾವತ್ ಚಿತ್ರ ಬಿಡುಗಡೆಯಾದ ನಂತರ ಶಾಹಿದ್ ಕಪೂರ್ ಜನಪ್ರಿಯತೆ ಮತ್ತು ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ಅದೇ ರೀತಿಯಾಗಿ ಶಾಹೀದ್ ಸಂಭಾವನೆಯೂ ವಿಪರೀತ ಏರುಮುಖ ಕಂಡಿದೆ. ಸದ್ಯ ಶಾಹೀದ್ ಭಟ್ಟಿ ಗುಲ್ಲು ಮೀಟರ್ ಚಾಲು ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾನೆ. ಹೀಗಿರುವಾಗಲೇ ತೆಲುಗಿನಿಂದ ಹಿಂದಿಗೆ ರೀಮೇಕ್ ಆಗಲಿರೋ ಒಂದು ಚಿತ್ರದಲ್ಲಿ ನಟಿಸಲು ಶಾಹೀದ್ ಬಹುತೇಕ ಒಪ್ಪಿಕೊಂಡಂತಿದೆ!

 

 

ಭಟ್ಟಿ ಗುಲ್ಲು ಮೀಟರ್ ಚಾಲು ಚಿತ್ರದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡು ಶ್ರದ್ಧಾ ಕಪೂರ್ ಮತ್ತು ಯಾಮಿ ಗೌತಮ್ ಜೊತೆ ರೊಮ್ಯಾನ್ಸ್ ಮಾಡಿರುವ ಶಾಹೀದ್ ಕಪೂರ್ ಹಿಂದಿಯಲ್ಲಿ ಅರ್ಜುನ್ ರೆಡ್ಡಿಯ ಅವತಾರದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾದಂತಿದೆ. ತೆಲುಗಿನಲ್ಲಿ ಬ್ಲಾಕ್ ಬಸ್ಟರ್ ಚಿತ್ರವಾಗಿ ಹೊರ ಹೊಮ್ಮಿದ್ದ ಅರ್ಜುನ್ ರೆಡ್ಡಿ ಚಿತ್ರವನ್ನು ಹಿಂದಿಗೆ ರೀಮೇಕ್ ಮಾಡಲಾಗುತ್ತಿದೆ. ಇದರಲ್ಲಿ ಅರ್ಜುಲನ್ ರೆಡ್ಡಿಯಾಗಿ ಶಾಹೀದ್ ಕಾಣಿಸಿಕೊಳ್ಳಲಿದ್ದಾನಂತೆ.

 

 

ನಿರ್ದೇಶಕರಾದ ಸಂದೀಪ್ ರೆಡ್ಡಿ ವಂಗ ಅರ್ಜುನ್ ರೆಡ್ಡಿ ರೀಮೇಕ್ ವಿಚಾರವಾಗಿ ಈಗಾಗಲೇ ಶಾಹೀದ್ ಜೊತೆ ಮಾತಾಡಿದ್ದಾರಂತೆ. ಈ ಚಿತ್ರದಲ್ಲಿ ಅರ್ಜುನ್ ರೆಡ್ಡಿ ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದರೂ ಶಾಹೀದ್ ಯಾವತ್ತಿನಿಂದ ಪಾಲ್ಗೊಳ್ಳಲಿದ್ದಾರೆಂಬ ಬಗ್ಗೆ ಖಚಿತವಾಗಿಲ್ಲವಂತೆ. ಭಟ್ಟಿ ಗುಲ್ಲು ಮೀಟರ್ ಚಾಲು ಚಿತ್ರದ ಜೊತೆ ಜೊತೆಗೇ ಇನ್ನೊಂದು ಚಿತ್ರವೂ ಬಾಕಿ ಇರೋದರಿಂದ ಅದಾದ ನಂತರ ಶಾಹೀದ್ ಅರ್ಜುನ್ ರೆಡ್ಡಿಯಾಗುವ ಲಕ್ಷಣಗಳಿವೆ.

ಅಂದಹಾಗೆ ಶಾಹೀದ್ ಹಾಗೂ ನಿರ್ದೇಶಕ ಸಂದೀಪ್ ಒಟ್ಟಾಗಿ ಅರ್ಜುನ್ ರೆಡ್ಡಿ ಚಿತ್ರವನ್ನು ನೋಡಿದ್ದಾರಂತೆ. ಈ ಪಾತ್ರಕ್ಕಾಗಿ ಶಾಹೀದ್ ಕಪೂರ್ ದೈಹಿಕವಾಗಿಯೂ ಬದಲಾವಣೆಗಳನ್ನು ಮಾಡಿಕೊಳ್ಳಬೇಕಿರೋದರಿಂದ ಈ ಪ್ರಾಜೆಕ್ಟ್ ಲಾಂಚ್ ಆಗಲು ಒಂದಷ್ಟು ಕಾಲ ಬೇಕಾಗ ಬಹುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top