ಸಿನಿಮಾ

‘ಶಿವಗಾಮಿ’ ಪಾತ್ರವನ್ನು ಶ್ರೀದೇವಿ ಕೈಬಿಡಲು ಅಸಲಿ ಕಾರಣ ಬಿಚ್ಚಿಟ್ಟ ವರ್ಮಾ

ಸದಾ ಒಂದಲ್ಲ ಒಂದು ಸುದ್ದಿಯ ಮೂಲಕ ಮಾಧ್ಯಮದಲ್ಲಿ ರಾರಾಜಿಸುವ ವಿವಾದಿತ ಡೈರೆಕ್ಟರ್ ರಾಮ್ ಗೋಪಾಲ ವರ್ಮಾ ಈಗ ಮತ್ತೊಂದು ವಿಷಯವನ್ನು ಬಹಿರಂಗಪಡಿಸಿದ್ದಾರೆ.

 

 

ಇತ್ತೀಚಿಗೆ ಸಾವನಪ್ಪಿದ ಖ್ಯಾತ ಬಾಲಿವುಡ್ ನಟಿ ಅವರು ಈ ಹಿಂದೆ ಅವರು ಅಂದು ಕೊಂಡಂತೆ ಆಗಿದ್ದರೆ ‘ಬಾಹುಬಲಿ’ ಸಿನಿಮಾದಲ್ಲಿ ಅಭಿನಯ ಮಾಡಬೇಕಿತ್ತು. ಆದರೆ ಅವರಿಗೆ ಎದುರಾದ ಕೆಲವು ಕಾರಣದಿಂದ ಅವರು ಈ ಸಿನಿಮಾ ಕೈಬಿಡಬೇಕಾಗಿ ಬಂತು. ಆದರೆ ಅಭಿಮಾನಿಗಳಿಗೆ ಇವರು ಯಾವ ಕಾರಣಕ್ಕೆ ಈ ಬಹುಕೋಟಿ ಚಿತ್ರ ಕೈಬಿಟ್ಟರು ಎಂಬ ಪ್ರಶ್ನೆ ಕಾಡುತ್ತಲೇ ಇತ್ತು. ಈಗ ರಾಮ್ ಗೋಪಾಲ್ ವರ್ಮಾ ಈ ಮಾಹಿತಿ ಬಿಚ್ಚಿಟ್ಟಿದ್ದಾರೆ.

 

 

ನಟಿ ಶ್ರೀದೇವಿ ‘ಬಾಹುಬಲಿ’ ಸಿನೆಮಾದಿಂದ ಹಿಂದೆ ಸರಿಯಲು ಕಾರಣ ಅವರ ಪತಿ ಬೋನಿ ಕಪೂರ್ ಎಂದು ರಾಮ ಗೋಪಾಲ್ ವರ್ಮಾ ಹೇಳುವ ಮೂಲಕ ಎಲ್ಲರಿಗು ಅಚ್ಚರಿ ಮೂಡಿಸಿದ್ದಾರೆ. ವರ್ಮಾ ಹೇಳುವ ಪ್ರಕಾರ ಶ್ರೀದೇವಿಗೆ ಈ ಸಿನಿಮಾದಲ್ಲಿ ಅಭಿನಯ ಮಾಡುವೆ ಆಸೆ ಇತ್ತು. ಆಕೆಯ ಆಸೆಗೆ ತಣ್ಣೀರೆಚಿದ್ದು ಆಕೆಯ ಪತಿ ಬೋನಿ ಕಪೂರ್. ದೊಡ್ಡ ಬಜೆಟ್ ಚಿತ್ರದಲ್ಲಿ ಅಭಿನಯ ಮಾಡಲು ಕಾತುರಳಾಗಿದ್ದಳು ಶ್ರೀದೇವಿ. ಆದರೆ ಬೋನಿ ಕಪೂರ್ ಈ ಹೆಚ್ಚಿನ ಸಂಭಾವನೆಗೆ ಬೇಡಿಕೆ ಇಟ್ಟರು ಎನ್ನಲಾಗಿದೆ. ಅದರಿಂದ ಶ್ರೀದೇವಿ ಈ ಚಿತ್ರವನ್ನು ಕಳೆದುಕೊಳ್ಳಬೇಕಾಯಿತು.

 

 

ಶ್ರೀದೇವಿ ಈ ಚಿತ್ರ ಕೈಬಿಟ್ಟ ನಂತರ ಈ ಸ್ಥಾನಕ್ಕೆ ಬಹು ಭಾಷಾ ನಟಿ ರಮ್ಯಕೃಷ್ಣ ಎಂಟ್ರಿ ಕೊಟ್ಟರು ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top