ಸಿನಿಮಾ

ರಾಧಾ ರಮಣ ಸೀರಿಯಲ್ ನ ಕ್ಯೂಟ್ ಹುಡುಗ ರಮಣನ ರಿಯಲ್ ಲೈಫ್ ರಾಧಾ ಯಾರು ಗೊತ್ತಾ

ಹ್ಯಾಂಡ್ ಸಮ್ ಲುಕ್ಸ್ ,ಅರ್ಧಂಬರ್ಧ ಕನ್ನಡ ಮಾತಾಡುತ್ತಾ, ಕ್ಯೂಟ್ ಲುಕ್ಸ್ ನಿಂದ ಪ್ರೇಕ್ಷಕರನ್ನು ರಾಧಾರಮಣ ಧಾರಾವಾಹಿಯ ಮೂಲಕ ಎಲ್ಲರ ಜನ ಮನ ಗೆದ್ದಿದ್ದಾರೆ ರಮಣ ಅಲಿಯಾಸ್ ಸ್ಕಂದ ಅಶೋಕ್ .

 

 

ಈ ಹಿಂದೆ ಚಾರುಲತಾ ,ಯು- ಟರ್ನ್ ಚಿತ್ರಗಳಲ್ಲೂ ಅಭಿನಯ ಮಾಡಿದ್ದಾರೆ ಇದು ಎಷ್ಟೋ ಜನಕ್ಕೆ ಗೊತ್ತೇ ಇಲ್ಲ .

 

ಸ್ಕಂದನ ಫಿಲಂ ಜರ್ನಿ

 

ಆದರೆ ಕನ್ನಡ ಫಿಲಂಸ್ ,ಸಿರಿಯಲ್ಸ್ ಮಾತ್ರವಲ್ಲ ಸ್ಕಂದ ಇದಕ್ಕೂ ಮುನ್ನ ತಮಿಳು ,ತೆಲುಗು ,ಮಲಯಾಳಂ ,ಚಿತ್ರಗಳಲ್ಲೂ ನಟನೆ ಮಾಡಿದ್ದಾರೆ ಎಂಬುದು ಅನೇಕ ಜನರಿಗೆ ಗೊತ್ತಿಲ್ಲ , ಹೌದು ನೀವು ಕೇಳ್ತಿರೋದು ನಿಜ .

ಸ್ಕಂದ ಅವರು ಮಲಯಾಳಂ ಚಿತ್ರ ನೋಟ್ಬುಕ್ (2006) ನಲ್ಲಿ ಹೀರೋ ಆಗಿ ಅಭಿನಯಿಸುತ್ತಿದ್ದಾರೆ ನಂತರ ಮಲಯಾಳಂ ಚಿತ್ರ ಪಾಸಿಟಿವ್ (2008) ನಲ್ಲಿ ಎರಡನೇ ಹೀರೋ ಆಗಿ ಕಾಣಿಸಿಕೊಂಡರು, ತೆಲುಗು ರೊಮ್ಯಾಂಟಿಕ್ ಚಿತ್ರ ಮಲ್ಲಿ ಮಲ್ಲಿ (2009)ಯಲ್ಲಿ ಪ್ರಮುಖ ಪಾತ್ರವಹಿಸಿದ್ದರು .

ಎಲೆಕ್ಟ್ರಾ ಚಿತ್ರದಲ್ಲಿ ಪ್ರಕಾಶ್ ರಾಜ್, ಮನೀಶಾ ಕೊಯಿರಾಲಾ ಮತ್ತು ನಯಂತರಾ ಅವರೊಂದಿಗೆ ನಟಿಸಿದ್ದಾರೆ, ದ್ವಿಭಾಷಾ ಚಿತ್ರವಾದ ಚಾರುಲತಾ (2012), ಕನ್ನಡ ಥ್ರಿಲ್ಲರ್ ಚಿತ್ರ ಯು ಟರ್ನ್ (2016) ಮತ್ತು ಮುಪರಿಮಣಂನಲ್ಲಿ (2017) ಎರಡನೇ ನಾಯಕ ನಟನಾಗಿ ಕೆಲಸ ಮಾಡಿದ್ದಾರೆ .

 

 

2017 ರಲ್ಲಿ ರಾಧಾ ರಮಣ ಸೀರಿಯಲ್ ನಲ್ಲಿ ಕಾಣಿಸಿಕೊಂಡಿದ್ದಾರೆ ,ಇದು ಸ್ಕಂದ ಅವರಿಗೆ ಭಾರಿ ಯಶಸ್ಸನ್ನು ತಂದುಕೊಟ್ಟಿತು .

ಕಾನೂರಾಯಣ , ದೇವಯಾನಿ , ಭೈರಾ ದೇವಿ ಚಿತ್ರಗಳು ಇನ್ನೇನು ಇತ್ತೀಚಿನ ಚಿತ್ರಗಳಾಗಿವೆ ..

ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಶಿಖಾ ಅವರನ್ನು ಸ್ಕಂದ ಅಶೋಕ್ ಇನ್ನೇನು ಕೆಲವು ತಿಂಗಳುಗಳಲ್ಲಿ ಮದುವೆಯಾಗಲಿದ್ದಾರೆ .

 

 

 

ಸ್ಕಂದ ಹಾಗು ಶಿಖಾ ಅವರ ಮಧುರ ಕ್ಷಣಗಳ ಅಪರೂಪದ ಚಿತ್ರಗಳು ಇಲ್ಲಿವೆ ..

 

 

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top