ದೇವರು

ಶಿವನ ಶಾಪದ ಪರಿಣಾಮವಾಗಿ ಈ ಜಾಗಕ್ಕೆ ಗಂಡಸರು ಹೋದರೆ ಹೆಣ್ಣಾಗಿ ಪರಿವರ್ತನೆಯಾಗುತ್ತಾರಂತೆ ಏನಿದು ಕಥೆ ಮುಂದೆ ಓದಿ

ಈ ಜಾಗಕ್ಕೆ ಗಂಡಸರು ಹೋದರೆ ಹೆಣ್ಣಾಗಿ ಪರಿವರ್ತನೆಯಾಗುತ್ತಾರೆ .ಇದು ಶಿವನ ಶಾಪವಂತೆ. ಯಾಕೆ ಗೊತ್ತಾ ?

 

ಪುರಾಣದಲ್ಲಿ ಹೇಳಿರುವ ಪ್ರಕಾರ ಇಲ್ಲಿ ಗಂಡಸರು  ಹೋದರೆ ಹೆಣ್ಣಾಗಿ ಪರಿವರ್ತನೆ  ಯಾಗುತ್ತಾರಂತೆ.  ನಿಜಕ್ಕೂ ಇದು ಹೇಳಲು ತುಂಬಾ ವಿಚಿತ್ರವಾಗಿದೆ. ಪುರುಷರನ್ನು ಹೆಣ್ಣು ಮಕ್ಕಳಾಗಿ ಪರಿವರ್ತನೆ ಮಾಡುವಂತಹ ಈ ವನದ ಬಗ್ಗೆ ನಿಮಗೆ ಗೊತ್ತಾ ?

 

 

ನಮ್ಮ ಪುರಾಣಗಳನ್ನು ನೋಡಿದರೆ ಅದರಲ್ಲಿ  ಅದೆಷ್ಟೋ ಅನೇಕ  ಆಸಕ್ತಿಕರ ವಿಷಯಗಳಿವೆ. ಅಂತಹ ಕತೆಯಲ್ಲಿ ನಾವು ಈಗ ಹೇಳುವ ಕಥೆ ಕೂಡ ಒಂದು. ಕುಮಾರ ವನವೆಂಬ  ವನಕ್ಕೆ ಹೋದರೆ, ಗಂಡು ಮಕ್ಕಳು ಹೆಣ್ಣು ಮಕ್ಕಳಾಗಿ ಪರಿವರ್ತನೆಯಾಗುತ್ತಾರಂತೆ.  ಈ ರೀತಿ ಆಗುವುದರ ಹಿಂದೆ ಇರುವಂತಹ ಒಂದು ಕಥೆಯನ್ನು ಈಗ ತಿಳಿದುಕೊಳ್ಳೋಣ..

ವೈವಸ್ವತ ಮತ್ತು ಅವನ ಹೆಂಡತಿ ಶ್ರದ್ಧಾ ದೇವಿ. ಇವರು ಸಂತಾನಕ್ಕಾಗಿ ಒಂದು ಯಾಗವನ್ನು ಶುರು ಮಾಡ್ತಾರೆ. ಶ್ರದ್ದಾ ದೇವಿಗೆ ಹೆಣ್ಣು ಮಕ್ಕಳೆಂದರೆ ತುಂಬಾ  ಇಷ್ಟ.  ಈ ಕಾರಣದಿಂದ ಯಾಗ ನಡೆಸುತ್ತಿದ್ದ ಮುನಿಗಳನ್ನು ಕರೆದು ಹೆಣ್ಣು ಮಗು ಹುಟ್ಟುವಂತೆ ಯಾಗ ಮಾಡುವಂತೆ ರಹಸ್ಯವಾಗಿ ಆತನ ಬಳಿ ಕೇಳಿಕೊಳ್ಳುತ್ತಾಳೆ. ಆಕೆಯ ಮಾತಿನಂತೆ ಮುನಿಗಳು ಹೆಣ್ಣು ಮಗು ಹುಟ್ಟುವಂತೆ ಯಾಗ ನಡೆಸುತ್ತಾರೆ. ಆದರ ಫಲವಾಗಿ ಕೆಲವು ದಿನಗಳಲ್ಲಿ ಅವಳು ಒಂದು ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ.  ಆ ಮಗುವಿಗೆ ಇಳಾ ಎಂದು ನಾಮಕರಣ ಮಾಡ್ತಾರೆ.

 

 

ನಂತರ ವೈವಸ್ವತ ಮನು ವಸಿಷ್ಠನ  ಬಳಿ ಹೋಗಿ ನಾನು ಪುತ್ರ ಜನಿಸಬೇಕು  ಎಂದು ಯಾಗ ಮಾಡಿದ್ರೆ, ಹೆಣ್ಣು ಮಗುವಾಗಿದೆ. ಅದು ಹೇಗೆ ಸಾಧ್ಯ ? ಎಂದು ಪ್ರಶ್ನೆ ಮಾಡಿದಾಗ ವಸಿಷ್ಠರು  ತನ್ನ ದಿವ್ಯ ದೃಷ್ಟಿಯಿಂದ ನಡೆದ ವಿಷಯ ತಿಳಿದು ವೈವಸ್ವತ ಮನುವಿಗೆ ಶಾಂತವಾಗುವಂತೆ ಹೇಳಿ. ಆ ಹೆಣ್ಣು ಮಗುವನ್ನು ಗಂಡು ಮಗುವಾಗಿ ತಾನು ಮಾಡುವಂತೆ ಆಶ್ವಾಸನೆ ನೀಡಿ ಆ ಕೆಲಸವನ್ನು ಮಾಡ್ತಾನೆ. ಆ ಗಂಡು ಮಗುವಿಗೆ ಸದ್ಯುಮ್ನ ಎಂದು ಹೆಸರು ಇಡಲಾಗುತ್ತದೆ.

ಆ ಬಾಲಕ ಬೆಳೆದು ರಾಜ್ಯ ಪಾಲನೆ ಮಾಡಲು ಪ್ರಾರಂಭ ಮಾಡುತ್ತಾನೆ. ಒಂದು ದಿನ ಸದ್ಯುಮ್ನ ಆತನ ಪಡೆಯ ಜೊತೆ ಪರ್ವತಗಳ ಮಧ್ಯೆ ಇರುವಂತಹ ಕುಮಾರವನಕ್ಕೆ  ಭೇಟೆಗೆ ಎಂದು ಹೋಗುತ್ತಾರೆ. ಅವರು ಅ ವನ ಪ್ರವೇಶ ಮಾಡುತ್ತಿದ್ದಂತೆ ಹೆಣ್ಣು ಮಕ್ಕಳಾಗಿ ಪರಿವರ್ತಿತವಾಗಿ ಬಿಡುತ್ತಾರೆ. ಅವರ ಕುದುರೆಗಳು ಕೂಡ ಹೆಣ್ಣು ಕುದುರೆಗಳಾಗಿ ಪರಿವರ್ತಿತವಾಗುತ್ತವೆ. ಇದರಿಂದ ಎಲ್ಲರೂ ಆಶ್ಚರ್ಯ ಗೊಳ್ಳುತ್ತಾರೆ. ಆದರೆ  ಇದಕ್ಕೂ ಒಂದು ಕಾರಣವಿತ್ತು.

 

 

ಕುಮಾರವನ ಶಿವ ಮತ್ತು ಪಾರ್ವತಿ ದೇವಿಯ ಏಕಾಂತ ವಿಹಾರ ಸ್ಥಳ. ಒಂದು ದಿನ ಕೆಲವು ಮುನಿಗಳು ಶಿವನ ದರ್ಶನಕ್ಕೆ ಕುಮಾರ ವನಕ್ಕೆ ಒಟ್ಟಾರೆ ಆ ಸಮಯದಲ್ಲಿ ಶಿವ ಮತ್ತು ಪಾರ್ವತಿ ದೇವಿ ಏಕಾಂತ ಶೃಂಗಾರ ತಪಸ್ಸಿನಲ್ಲಿ ಇದ್ದರು . ಮುನಿಗಳು ಬರಬಾರದ  ಸಮಯದಲ್ಲಿ ಅಲ್ಲಿಗೆ ಹೋದ ಕಾರಣ ಪಶ್ಚಾತಾಪದಿಂದ  ಶಿವನಿಗೆ ಕ್ಷಮೆ ಕೇಳಿ ಅಲ್ಲಿಂದ ಹೊರಟು ಹೋಗ್ತಾರೆ. ಕೋಪಗೊಂಡ ಪಾರ್ವತಿಗೆ ಶಿವ ದುಃಖ ಪಡದಿರುವಂತೆ ಹೇಳಿ, ಆ ಕುಮಾರ ವನಕ್ಕೆ ಯಾವ ಪುರುಷ ಬಂದರೂ ಹೆಣ್ಣಾಗಿ ಪರಿವರ್ತಿತವಾಗುವಂತೆ ಪಾರ್ವತಿಗೆ ವರ ನೀಡುತ್ತಾನೆ.

 

 

ಮತ್ತೆ ಇಳಾ ರೂಪವಾದ ಸದ್ಯುಮ್ನ ತನ್ನ ಪಡೆಯ ಜೊತೆ ಕುಮಾರವನದಿಂದ ಹೊರ ಹೋಗುವಾಗ ಚಂದ್ರನ ಮಗನಾದ ಬುಧನ ಕಣ್ಣು ಇಳಾ ರೂಪವಾದ ಸದ್ಯುಮ್ನನ  ಮೇಲೆ ಬಿಳುತ್ತೆ. ಅವಳನ್ನು ಕಾಮಿಸಿ ಅವಳನ್ನು ಬುಧ ಅವನ ಜೊತೆ ಕರೆದುಕೊಂಡು ಹೋಗ್ತಾನೆ. ಒಟ್ಟಿನಲ್ಲಿ ಇಳಾ ಮತ್ತು ಚಂದ್ರನ ಮಗನಾದ ಬುಧನಿಗೆ  ಹುಟ್ಟಿದ ಮಗುವೇ  ಪುರೂರವಸ.

 

 

ಈ ಜೀವನದಿಂದ ಬೇಸರಗೊಂಡ ಇಳಾ ಆತನನ್ನು ಮತ್ತೆ ಗಂಡಾಗಿ ಮಡುವಂತೆ ವಸಿಷ್ಠ   ಮುನಿಯ ಬಳಿ ಕೇಳಿಕೊಂಡಾಗ.ವಸಿಷ್ಠ ಮುನಿಗಳು ಶಿವನಲ್ಲಿ ಕೇಳಿಕೊಳ್ಳುತ್ತಾರೆ. ಶಿವನು ಪಾರ್ವತಿ ದೇವಿಗೆ ಕೊಟ್ಟ ಮಾತಿಗೆ ಭಂಗ ಬಾರದಂತೆ ಇಳಾ ಒಂದು ದಿನ ಗಂಡು ಇನ್ನೊಂದು ದಿನ ಹೆಣ್ಣಾಗುವಂತೆ ವರ ನೀಡುತ್ತಾನೆ. ಶಿವ ಮತ್ತು ಪಾರ್ವತಿ ದೇವಿಯ ಏಕಾಂತದಲ್ಲಿ ಮುನಿಗಳು ಹೋದ ಕಾರಣದಿಂದ  ಕುಮಾರವನ  ಪುರುಷರನ್ನು ಹೆಣ್ಣು ಮಕ್ಕಳಾಗಿ ಪರಿವರ್ತಿತ ಮಾಡುತ್ತದೆ ಎಂದು ಪುರಾಣ ಕತೆಗಳು ಹೇಳುತ್ತವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top