ಸಮಾಚಾರ

ಹನುಮಂತನ ಭಕ್ತರನ್ನು ಅತ್ಯಾಚಾರಿಗಳು ಎಂದ ರಶ್ಮಿ ನಾಯರ್ ವಿರುದ್ಧ ಸಿಡಿದೆದ್ದ ಸಪ್ನಾ ಶೆಟ್ಟಿಗಾರ್!

ರಶ್ಮಿ ನಾಯರ್ ಎಂಬ ನಟಿ ಯಾಕಾದರೂ ಉಬರ್ ಕ್ಯಾಬ್ ಡ್ರೈವರ್‌ಗಳು ಮತ್ತು ಟ್ಯಾಕ್ಸಿಗಳ ಹಿಂದಿನ ಭಜರಂಗಿ ಹನುಮಂತನ ವಿರುದ್ಧ ಮಾತಾಡಿದಳೋ.. ಆರೆಸ್ಸೆಸ್, ಶ್ರೀರಾಮಸೇನೆಯಂಥಾ ಉಗ್ರ ಹಿಂದೂಪರ ಸಂಘಟನೆಗಳು ಈಗ ರಶ್ಮಿನಾಯರ್ ಮೇಲೆ ‘ಕಂಡಲ್ಲಿ ಕಲ್ಲು’ ಹೊಡೆಯಲು ತೀರ್ಮಾನಿಸಿವೆ.

 

 

ಕಿಸ್ ಆಫ್ ಲವ್ ಆಯೋಜನೆ ಮಾಡಿ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದಳಲ್ಲಾ? ಅವಳೇ ರಶ್ಮಿ ನಾಯರ್. ಆನಂತರ ಕೇರಳದಲ್ಲಿ ‘ಕೊಚ್ಚು ಸುಂದರಿಕಳ್’ ಎನ್ನುವ ಪೋಲಿ ಫೇಸ್ ಬುಕ್ ಖಾತೆ ತೆರೆದು ಸಿಗೇಬಿದ್ದವಳೂ ಈಕೆಯೇ. ಇಷ್ಟೇ ಅಲ್ಲದೆ ಕೇರಳದಲ್ಲಿ ಹೆಣ್ಣುಮಕ್ಕಳ ದಂಧೆ ನಡೆಸಲು ಹೋಗಿ ಸಿಕ್ಕಿಬಿದ್ದ ಆರೋಪವೂ ರಶ್ಮಿ ನಾಯರ್ ಮೇಲಿದೆ.

ಆಗಾಗ ಅಂಗಾಗ ಪ್ರದರ್ಶನದ ಮೂಲಕ ಸುದ್ದಿಯಲ್ಲಿರಲು ಪ್ರಯತ್ನಿಸುವ ಈಕೆ ಏಕಾಏಕಿ ಈ ಬಾರಿ ತನ್ನ ಪ್ರಚಾರಕ್ಕಾಗಿ ಬಳಸಿಕೊಂಡಿರೋದು ಕೇಸರೀ ಹನುಮಂತನನ್ನು. ಕಳೆದೆರಡು ವರ್ಷಗಳಿಂದ ಕರ್ನಾಟಕದ ಯಾವುದೇ ಕ್ಯಾಬುಗಳ ಮೇಲೂ ಈ ಭಜರಂಗಿ ಆಂಜನೇಯನ ಚಿತ್ರ ರಾರಾಜಿಸುತ್ತಿರೋದನ್ನು ಯಾರು ತಾನೆ ಕಂಡಿಲ್ಲ… ಬಹುಶಃ ಈ ಆಂಜನೇಯನನ್ನು ತಮ್ಮ ಕಾರಿನ ಮೇಲೆ ಅಂಟಿಸಿಕೊಂಡವರನ್ನು ಟಾರ್ಗೆಟ್ ಮಾಡಿದರೆ ಹೆಚ್ಚು ಪಬ್ಲಿಸಿಟಿ ಪಡೆಯಬಹುದು ಅನ್ನೋದು ಈಕೆಯ ಪ್ಲಾನಾಗಿತ್ತೋ ಏನೋ?

 

 

“ನಾನು ಬೆಂಗಳೂರಿನಲ್ಲಿದ್ದಾಗ ಉಬರ್ ಕ್ಯಾಬ್ ಬಳಸುತ್ತಿದ್ದೆ. ಎಷ್ಟೋ ಸಲ ನಾನೊಬ್ಬಳೇ ಇಂಥಾ ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡಿದ್ದಿದೆ. ನನ್ನೊಂದಿಗೆ ಕಾರ್ಯ ನಿರ್ವಹಿಸುವ ನನ್ನ ಸ್ನೇಹಿತೆಯರೂ ಉಬರ್ ನಲ್ಲಿ ಪ್ರಯಾಣ ಮಾಡುತ್ತಾರೆ. ಬಹಳಷ್ಟು ಕ್ಯಾಬ್‌ಗಳ ಹಿಂಬದಿಯಲ್ಲಿ ಭಜರಂಗಿ ಹನುಮಾನ್ ಚಿತ್ರವನ್ನು ಅಂಟಿಸಿರುತ್ತಾರೆ. ಈಗ ಹಿಂದೂ ಸಂಘಟನೆಗಳು ಕಥುವಾದಲ್ಲಿ ನಡೆದಿರುವಂಥಾ ರೇಪ್ ಕೇಸ್‌ನ ಆರೋಪಿಗಳ ಪರವಾಗಿ ವಕಾಲತ್ತು ವಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನನಗೆ ಹಿಂದುತ್ವದ ಸಂಕೇತದಂತಿರುವ ಹನುಮಂತನ ಚಿತ್ರವನ್ನು ಅಂಟಿಸಿಕೊಂಡ ಉಬರ್ ಕ್ಯಾಬುಗಳಲ್ಲಿ ಪ್ರಯಾಣಿಸಲು ಭಯ ಪಡುವಂತಾಗಿದೆ. ಇನ್ನೆಂದೂ ಇಂಥಾ ಕ್ಯಾಬ್ ಗಳಲ್ಲಿ ನಾನು ಪ್ರಯಾಣ ಮಾಡುವುದಿಲ್ಲ. ಒಂದೊಮ್ಮೆ ನಾನು ಬುಕ್ ಮಾಡಿದಾಗ ಹನುಮಂತನ ಚಿತ್ರವಿರೋ ಕ್ಯಾಬ್ ಬಂದರೂ ನಾನು ಅದನ್ನು ಕ್ಯಾನ್ಸಲ್ ಮಾಡುತ್ತೇನೆ. ರೇಪಿಸ್ಟ್‌ಗಳಿಗೆ ಮತ್ತು ಅದನ್ನು ಬೆಂಬಲಿಸುವವರಿಗೆ ಹಣ ನೀಡೋದು ನನಗಿಷ್ಟವಿಲ್ಲ” ಎಂದು ತನ್ನ ಪೇಜಿನಲ್ಲಿ ಬರೆದುಕೊಂಡಿರೋದು ವಿವಾದಕ್ಕೆ ಕಾರಣವಾಗಿದೆ.

 

 

ಈಕೆ ರೇಪ್ ಪ್ರಕರಣದ ವಿರುದ್ಧ ದನಿಯೆತ್ತಿದ್ದರೆ ಯಾರ ತಕರಾರೂ ಇರುತ್ತಿರಲಿಲ್ಲ. ಹಿಂದೂತ್ವ ಸಂಘಟನೆಗಳನ್ನು ಲೇವಡಿ ಮಾಡೋ ಭರದಲ್ಲಿ ಈಕೆ ಕ್ಯಾಬ್ ಡ್ರೈವರ್ ಗಳು ಮತ್ತು ಅವರು ಅಂಟಿಸಿರೋ ಆಂಜನೇಯನ ವಿರುದ್ಧ ಮಾತಾಡಿಬಿಡೋದೇ? ತಮ್ಮ ಕ್ಯಾಬ್ ಗಳ ಹಿಂದೆ ಹನುಮಂತನ ಸ್ಟಿಕರ್ ಅಂಟಿಸಿಕೊಂಡವರಲ್ಲಿ ಹಿಂದೂತ್ವ ಅಂದರೇನು? ಹಿಂದೂತ್ವವಾದ ಎಂದರೇನು ಅನ್ನುವುದನ್ನು ತಿಳಿಯದವರೇ ಹೆಚ್ಚಿದ್ದಾರೆ. ಶಕ್ತಿದೇವತೆ ಹನುಮಂತನ ಮೇಲಿನ ಭಕ್ತಿ ಮತ್ತು ಆ ಚಿತ್ರದಲ್ಲಿರುವ ಕಲಾತ್ಮಕತೆಯ ಕಾರಣಕ್ಕೆ ಬಹುತೇಕ ಚಾಲಕರು, ಕ್ಯಾಬ್ ಮಾಲೀಕರು ತಮ್ಮ ವಾಹನಗಳ ಹಿಂದೆ ಭಜರಂಗಿ ಹನುಮಂತನ ಚಿತ್ರವನ್ನು ಅಂಟಿಸಿಕೊಂಡಿರುತ್ತಾರೆ. ಅದನ್ನು ರಾಜಕೀಯಗೊಳಿಸುವ ಪ್ರಯತ್ನವನ್ನು ಈವರೆಗೆ ಯಾರೂ ಮಾಡಿರಲಿಲ್ಲ.  ರಶ್ಮಿ ನಾಯರ್ ಅದನ್ನೇ ಬಂಡವಾಳ ಮಾಡಿಕೊಂಡಿದ್ದಾಳೆ.

 

 

ತಿರುಗಿಬಿದ್ದಳು ಸಪ್ನಾ ಶೆಟ್ಟಿಗಾರ್!
ರಶ್ಮಿ ನಾಯರ್‌ಳ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ ಹಿಂದೂಪರ ಸಂಘಟನೆಗಳು, ಹನುಮಂತನ ಭಕ್ತರು ಮತ್ತು ಕ್ಯಾಬ್ ಚಾಲಕರು ದನಿಯೆತ್ತಿದ್ದಾರೆ. ಕರಾವಳಿ ಮೂಲದ ನಟಿ ಸಪ್ನ ಶೆಟ್ಟಿಗಾರ್ ಎಂಬ ಹೆಣ್ಣುಮಗಳು ರಶ್ಮಿನಾಯರ್ ವಿರುದ್ಧ ಒಂದು ವಿಡಿಯೋ ಮಾಡಿ ಆನ್‌ಲೈನಿಗೆ ಬಿಡೋ ಮೂಲಕ ಆಕೆಯಮೇಲೆ ಮುರಕೊಂಡು ಬಿದ್ದಿದ್ದಾಳೆ.

 

 

‘ನೀನು ನಾಯರ್ ಆದರೂ ಸರಿ, ನಾಯಿಯಾದರೂ ಸರಿ ಹಿಂದೂಗಳ ಮನಸ್ಸಿಗೆ ನೋಯಿಸಿರುವ, ಕ್ಯಾಬ್ ಚಾಲಕರನ್ನು ರೇಪಿಸ್ಟ್ ಗಳು ಎಂದಿರುವುದರ ಬಗ್ಗೆ ಕ್ಷಮೆ ಕೇಳಲೇಬೇಕು. ಇಲ್ಲದಿದ್ದರೆ ಸುಮ್ಮನೆ ಬಿಡೋದಿಲ್ಲ’ ಎಂಬರ್ಥದಲ್ಲಿ ಥೇಟು ಸಿನಿಮಾ ಶೈಲಿಯಲ್ಲಿ ಖಡಕ್ಕು ವಾರ್ನಿಂಗ್ ನೀಡಿದ್ದಾಳೆ. ಆ ವಿಡಿಯೋ ಈಗ ಮಂಗಳೂರನ್ನು ಧಾಟಿ ಮಿಕ್ಕ ಊರೆಲ್ಲಾ ವೈರಲ್ ಆಗುತ್ತಿದೆ!

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top