ಸಮಾಚಾರ

ಮಂದೀಪ್ ಸಿಂಗ್‍ಗೆ ಬಹಿರಂಗ ಸವಾಲೆಸೆದ ವಿರಾಟ್ ಕೊಹ್ಲಿ ವಿಡಿಯೋ ವೈರಲ್

ಆರ್.ಸಿ.ಬಿ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ತಮ್ಮದೇ ತಂಡದ ಆಟಗಾರ ಮಂದೀಪ್ ಸಿಂಗ್‍ಗೆ ಚಾಲೆಂಜ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.

 

 

ನಾಯಕ ವಿರಾಟ್ ಕೊಹ್ಲಿ ಸದಾ ಕ್ರೀಡಾಂಗಣದಲ್ಲಿ ತಮ್ಮ ಆಕ್ರಮಣಕಾರಿ ಆಟದಿಂದಲೇ ಖ್ಯಾತಿ ಪಡೆದಿದ್ದಾರೆ. ಅಲ್ಲದೇ ತಮ್ಮ ತಂಡದ ಆಟಗಾರರಿಗೂ ಇದೇ ರೀತಿ ತಮ್ಮ ಈ ಆಕ್ರಮಣಕಾರಿ ಪ್ರವೃತ್ತಿಯನ್ನು ಮೈಗೂಡಿಸಲು ಹುರಿದುಂಬಿಸುತ್ತಾರೆ. ಸದ್ಯ ಕೊಹ್ಲಿ ತಮ್ಮ ತಂಡದ ಯುವ ಆಟಗಾರ ಮಂದೀಪ್ ಸಿಂಗ್‍ಗೆ ಚಾಲೆಂಜ್ ಮಾಡಿರುವ ವಿರಾಟ್ ಕೊಹ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

 

ನಾಯಕ ವಿರಾಟ ಕೊಹ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ ಕೇವಲ 8.90 ಸೆಕೆಂಡ್ ನಲ್ಲಿ ವೇಗವಾಗಿ 3 ರನ್ ಓಡಿದ್ದಾರೆ. ಮೊದಲ ರನ್ 3.9 ಸೆಕೆಂಡ್, 2ನೇ ರನ್ 2.39 ಸೆಕೆಂಡ್ ಹಾಗೂ ಮೂರನೇ ರನ್ 2.61 ಸೆಕೆಂಡ್ ನಲ್ಲಿ ಓದಿದ್ದರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈಯಾರಲ್ ಆಗಿದೆ. ಮಂದೀಪ್ ಸಿಂಗ್‍ಗೆ ಚಾಲೆಂಜ್ ಮಾಡಿರುವ ವಿರಾಟ್ ಕೊಹ್ಲಿ, ನೀವು ನನಗಿಂತಲೂ ವೇಗವಾಗಿ ಓಡುತ್ತಿರಾ? ಇಲ್ಲಿ ನನ್ನ ವೇಗದ 3 ರನ್ ಗಳ ವಿಡಿಯೋ ನೀಡಿದ್ದೇನೆ. ಪ್ಯಾಡ್ ಧರಿಸಿ ನಿಮ್ಮ ವೇಗದ 3 ರನ್ ವಿಡಿಯೋ ಟ್ವಿಟ್ ಮಾಡಿ ಎಂದು ಹೇಳೀದ್ದಾರೆ. ನೀವು ನನ್ನ 8.90 ಸೆಕೆಂಡ್ ವೇಗವನ್ನು ಮೀರಿಸುವಿರಾ ಎಂದು ಸವಾಲೆಸಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top