ಸಮಾಚಾರ

ಮಾಡು ಇಲ್ಲವೇ ಮಾಡಿ ಪಂದ್ಯದಲ್ಲಿ ಜಯಗಳಿಸುವ ಮೂಲಕ ಪತ್ನಿಗೆ ಭರ್ಜರಿ ಬರ್ತಡೇ ಗಿಫ್ಟ್ ನೀಡಿದ ವಿರಾಟ್ ಕೊಹ್ಲಿ!

ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಇಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬಯಿ ಇಂಡಿಯನ್ಸ್ ವಿರುದ್ಧ ನಡೆದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 14 ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ. ವಿಶೇಷ ಎಂದರೆ ಇಂದು ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮ ಅವರ ಹುಟ್ಟಿದ ದಿನವಾಗಿದ್ದು ತಮ್ಮ ತಂಡವನ್ನು ಗೆಲ್ಲಿಸುವ ಮೂಲಕ ಪತ್ನಿಗೆ ಹುಟ್ಟುಹಬ್ಬದ ಉಡುಗೊರೆಯನ್ನು ನೀಡಿದ್ದಾರೆ.

 

 

ಮೊದಲು ಟಾಸ್ ಸೋತು ಬ್ಯಾಟಿಂಗ್‌ಗಿಳಿಸಲ್ಪಟ್ಟ ಬೆಂಗಳೂರು ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 167 ರನ್‌ಗಳ ಸ್ಫರ್ಧಾತ್ಮಕ ಮೊತ್ತ ಪೇರಿಸಿತ್ತು. ಆರ್ಸಿಬಿ ತಂಡದ ಸ್ಟಾರ್ ಆಟಗಾರ ಎಬಿಡಿ ವಿಲಿಯರ್ಸ್ ಗಾಯದಿಂದ ಹೊರಗುಳಿದ ಕಾರಣ ಬ್ಯಾಟಿಂಗ್ ನಲ್ಲಿ ನಿರೀಕ್ಷಗಿಂತ ಕಡಿಮೆಯೇ ಸ್ಕೋರ್ ಪೇರಿಸಲಾಯಿತು. ಆರ್ಸಿಬಿ ಪರ ಮನನ್ ವೋಹ್ರಾ 45 ರನ್ ಭಾರಿಸಿದರೆ, ಬ್ರಾಂಡನ್ ಮೆಕಲಮ್ 37 ಮತ್ತು ನಾಯಕ ವಿರಾಟ್ ಕೊಹ್ಲಿ 32 ರನ್ನು ಗಳನ್ನು ಗಳಿಸಲಷ್ಟೇ ಶಕ್ತರಾದರು. ಮುಂಬೈ ಪರ ಉತ್ತಮ ಬೌಲಿಂಗ್ ಮಾಡಿದ ಹಾರ್ಧಿಕ್ ಪಾಂಡ್ಯ ಮೂರು ವಿಕೆಟ್ ಕಬಳಿಸಿ ಮಿಂಚಿದರು.

 

 

ಬೆಂಗಳೂರು ತಂಡ ನೀಡಿದ ಸ್ಪರ್ಧಾತ್ಮಕ 168 ರನ್‌ಗಳ ಗುರಿ ಬೆನ್ನತ್ತಿದ ಮುಂಬಯಿಗೆ ಆರ್‌ಸಿಬಿ ವೇಗಿಗಳಾದ ಉಮೇಶ್ ಯಾದವ್ ಮತ್ತು ಟಿಮ್ ಸೌಥಿ ಆರಂಭಿಕ ಆಘಾತ ನೀಡಿದರು. ಕೇವಲ 84 ರನ್‌ಗಳಿಗೆ ಪ್ರಮುಖ ಐದು ವಿಕೆಟುಗಳನ್ನು ಕಳೆದುಕೊಂಡಿದ್ದ ಮುಂಬೈಗೆ ಪಾಂಡ್ಯ ಬ್ರಧರ್ಸ್ ಒಂದು ಹಂತದಲ್ಲಿ ಆಸರೆಯಾದರೂ ಡೆತ್ ಓವರ್ಸ್ ನಲ್ಲಿ ಬೆಂಗಳೂರು ತಂಡ ಮಾಡಿದ ಬಿಗಿ ಬೌಲಿಂಗ್ ಪ್ರದರ್ಶನದಿಂದಾಗಿ ಆರ್ಸಿಬಿ 14 ರನ್ ಗಳ ಅಮೋಘ ಜಯ ಗಳಿಸಿತು. ಮುಂಬೈ ಪರ ಹಾರ್ಧಿಕ್ ಪಾಂಡ್ಯ ೫೦ ರನ್ ಗಳಿಸಿದರೆ ಕೃಣಾಲ್ ಪಾಂಡ್ಯ ೨೩ ರನ್ ಗಳನ್ನು ಮಾತ್ರ ಗಳಿಸಲು ಶಕ್ತರಾದರು. ಆರ್ಸಿಬಿ ಪರ ಟಿಮ್ ಸೌಥಿ, ಉಮೇಶ್ ಯಾದವ್ ಮತ್ತು ಸಿರಾಜ್ ತಲಾ ಎರಡು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಎರಡು ಅತಿಮುಖ್ಯ ವಿಕೆಟ್ ಪಡೆದ ಟಿಮ್ ಸೌಥಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಆರ್ಸಿಬಿ ತನ್ನ ಮುಂದಿನ ಪಂದ್ಯವನ್ನು ಮೇ 5 ರಂದು ಸಾಂಪ್ರದಾಯಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ಮೇಲೆ ಸೆಣಸಾಡಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top