ಉಪ್ಪಯುತ್ತ ಮಾಹಿತಿ

ಬೆಳಗ್ಗೆ ಬೆಳಗ್ಗೆ ರಾಗಿ ಮುದ್ದೆ ಯಾರು ತಿಂತಾರೆ ಅನ್ನುವವರು ಸುಲಭವಾಗಿ ತಯಾರಿಸಿ ರುಚಿಯಾದ ರಾಗಿ ಇಡ್ಲಿ..

ಬೆಳಗ್ಗೆ ಬೆಳಗ್ಗೆ ರಾಗಿ ಮುದ್ದೆ ಯಾರು ತಿಂತಾರೆ ಅನ್ನುವವರು ಸುಲಭವಾಗಿ ತಯಾರಿಸಿ ರುಚಿಯಾದ ರಾಗಿ ಇಡ್ಲಿ..

Image result for ragi idli

ರಾಗಿ ಇಡ್ಲಿ  ಮಾಡಲು ಬೇಕಾಗುವ ಸಾಮಗ್ರಿ :

*1 ಕಪ್ ರಾಗಿ ಹಿಟ್ಟು,

* ಉಪ್ಪು,

*1 ಕಪ್ ಬಾಂಬೆ ರವಾ,

*1 ಕಪ್ ಮೊಸರು,

*ಬೇಕಿಂಗ್ ಸೋಡಾ,

*1 ಕಪ್ ನೀರು.

 

 

 

Image result for ragi idli

 

 

 

ರಾಗಿ ಇಡ್ಲಿ ಮಾಡುವ ವಿಧಾನ :

ಮೊದಲು ಸಣ್ಣ ಉರಿಯಲ್ಲಿ ರವೆಯನ್ನು ಹುರಿದುಕೊಳ್ಳಿ. ಅದು ತಣ್ಣಗಾದ ಮೇಲೆ ಇಡ್ಲಿ ಹಿಟ್ಟನ್ನು ಕಲೆಸಲು ಆರಂಭಿಸಿ. ದೊಡ್ಡ ಬೌಲ್ ನಲ್ಲಿ ಹುರಿದ ರವೆ, ರಾಗಿ ಹಿಟ್ಟನ್ನು ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮೊಸರನ್ನು ಬೆರೆಸಿ.

 

ಅಗತ್ಯಕ್ಕೆ ತಕ್ಕಷ್ಟು ನೀರನ್ನು ಹಾಕಿಕೊಳ್ಳಿ. ಚೆನ್ನಾಗಿ ಕಲಸಿ 30 ನಿಮಿಷ ಹಾಗೇ ಇಡಿ. ನಂತರ ಚಿಟಿಕೆ ಸೋಡಾ ಬೆರೆಸಿ, ಇಡ್ಲಿ ಹದಕ್ಕೆ ಕಲಸಿಕೊಂಡು, ಎಣ್ಣೆ ಸವರಿದ ಇಡ್ಲಿ ತಟ್ಟೆಗಳಲ್ಲಿಟ್ಟು ಬೇಯಿಸಿ. 8-10 ನಿಮಿಷ ಬೇಯಿಸಿದರೆ ಸಾಕು. ಸ್ಟವ್ ಆಫ್ ಮಾಡಿದ ನಂತರ 5 ನಿಮಿಷ ಇಡ್ಲಿಯನ್ನು ಪಾತ್ರೆಯಲ್ಲಿ ಹಾಗೇ ಬಿಡಿ. ನಂತರ ರುಚಿಯಾದ ಚಟ್ನಿಯ ಜೊತೆಗೆ ಸರ್ವ್ ಮಾಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top