ಮನೋರಂಜನೆ

ಕಾಣೆಯಾಗಿದ್ದ ಪ್ರಕಾಶ್ ರೈ ಕೊನೆಗೂ ಪತ್ತೆ- ಚುನಾವಣಾ ಫಲಿತಾಂಶದ ಬಗ್ಗೆ ಹೇಳಿದ್ದೇನು ಗೊತ್ತಾ.

ಸಮಾಜದಲ್ಲಿ ನಡೆಯುತ್ತಿರೋ ವಿದ್ಯಮಾನಗಳ ಬಗ್ಗೆ ಮಾತಾಡುತ್ತಲೇ ನೇರಾ ನೇರ ಅಭಿಪ್ರಾಯ ಮಂಡಿಸೋ ಮೂಲಕ ಚರ್ಚೆ ಹುಟ್ಟು ಹಾಕಿ ವಿವಾದಕ್ಕೂ ಕಾರಣವಾಗಿರುವವರು ಬಹು ಭಾಷಾ ನಟ ಪ್ರಕಾಶ್ ರೈ. ಸಮಾಜದ ಆಗು ಹೋಗುಗಳ ಬಗ್ಗೆ ನಿರ್ಬಿಢೆಯಿಂದ ಧ್ವನಿಯೆತ್ತುತ್ತಾ ಒಂದು ಪಂಥದವರ ವಿರೋಧವನ್ನೂ ಕಟ್ಟಿಕೊಂಡಿರುವ ನಟ ಪ್ರಕಾಶ್ ರೈ, ಧರ್ಮಾಧಾರಿತ ರಾಜಕಾರಣ ಮತ್ತು ಆ ಭೂಮಿಕೆಯಲ್ಲಿ ಬಿಜೆಪಿ ಮತ್ತು ಸಂಘಪರಿವಾರಗಳ ಅಜೆಂಡಾಗಳನ್ನು, ವಿರೋಧಿಸುತ್ತಾ ಕೋಮು ಸೌಹಾರ್ದ ಕದಡುವವರನ್ನು ಗುರಿಯಾಗಿಟ್ಟುಕೊಂಡು ಪ್ರಶ್ನಿಸುತ್ತಲೇ ಬಂದಿದ್ದರು.

 

 

ಅದರಲ್ಲೂ ಚುನಾವಣೆ ನಡೆಯುವ ಮುನ್ನವಂತೂ ಬಿಜೆಪಿ ಮತ್ತು ನರೇಂದ್ರ ಮೋದಿಯವರ ವಿರುದ್ಧ ಮೇಲಿಂದ ಮೇಲಿ ಟೀಕೆ ಮಾಡುತ್ತಿದ್ದ ರೈ ಚುನಾವಣೆ ಮುಗಿಯುದ್ದಂತೆ ದಿಢೀರ್ ಕಾಣೆಯಾಗಿಬಿಟ್ಟಿದ್ದರು, ಅತ್ತ ಸಂವಾದ ಕಾರ್ಯಕ್ರಮಗಳು ಇಲ್ಲ ಇತ್ತ ಸೋಷಿಯಲ್ ಮೀಡಿಯಾಗಳಲ್ಲೂ ಪ್ರಕಾಶ್ ರೈ ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಆದರೆ ಇದೀಗ ಚುನಾವಣಾ ಫಲಿತಾಂಶ ಹೊರಬರುತ್ತಿದ್ದಂತೆ ತಮ್ಮ ಟೀಕಾ ಕೆಲಸವನ್ನು ಮುಂದುವರೆಸಿದ್ದಾರೆ.

ಫಲಿತಾಂಶದ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಸರಣಿಯೋಪಾದಿಯಲ್ಲಿ ಟ್ವೀಟ್ ಮಾಡಿರುವ ಪ್ರಕಾಶ್ ರೈ ಮುಂದಿನ ಸರ್ಕಾರ ಯಾರದ್ದೇ ಆಗಲಿ ಪ್ರಶ್ನಿಸುವುದನ್ನು ನಿಲ್ಲಿಸುವುದಿಲ್ಲ ಎಂದು ಬರೆದುಕೊಂಡಿದ್ದಾರೆ. “ಚುನಾವಣೆ ಫಲಿತಾಂಶ ನೋಡುತ್ತಿದ್ದೇನೆ…, ಬಿಜೆಪಿ ಪಕ್ಷ ಹಣ ಬಲ, ತೋಳು ಬಲ, ಹೇಳಿದಂತದಹ ಮಹಾ ಸುಳ್ಳುಗಳ ಹೊರತಾಗಿಯೂ ಅಧಿಕಾರ ಹಿಡಿಯಲು ಹೋಗಿದ್ದರು. ಆದ್ರೆ ಸರ್ಕಾರ ರಚಿಸಲು ಅಗತ್ಯವಿರುವ ಬಹುಮತ ಬಿಜೆಪಿಗೆ ಸಿಗಲಿಲ್ಲ. ಈಗ ಎರಡು ಪಕ್ಷಗಳು ಸೇರಿ ಮೈತ್ರಿ ಸರ್ಕಾರ ರಚಿಸಲು ಒಟ್ಟಿಗೆ ಬಂದಿವೆ. ಪ್ರೀತಿಯ ನಾಗರೀಕರೇ ನಾಟಕ ಇವಾಗ ಶುರುವಾಗುತ್ತೆ ನೋಡಿ”

 

 

“1. ಬಿಜೆಪಿ ದೊಡ್ಡ ಪಕ್ಷ ಎಂದು ಹೇಳಿಕೊಂಡು ಗವರ್ನರ್ ಅನ್ನು ಭೇಟಿ ಮಾಡಿದೆ. ಅವರಿಗೆ ಬಹುಮತ ಸಾಬೀತುಮಾಡಲು ಸಮಯವನ್ನು ನೀಡುತ್ತಾರೆ (ಕಳ್ಳತನಕ್ಕೆ) … 3. ಚಾಣಕ್ಯ ಕಳ್ಳತನಕ್ಕೆ ಆಗಮಿಸುತ್ತಾನೆ … 4. paid ಮೀಡಿಯಾ ಆತನ ಮಹಾನ್ ಕಾರ್ಯವನ್ನು ಸಂಭ್ರಮಿಸುತ್ತಾರೆ 5. ಕೊನೆಗೆ ನಾವು(ಪ್ರಜೆಗಳು) ಕುದುರೆ ವ್ಯಾಪಾರದ ಪಂದ್ಯವನ್ನು ವೀಕ್ಷಿಸಲು ಸಿದ್ಧರಾಗಬೇಕು”

 

 

“ಈ ನಾಚಿಕೆಗೇಡಿನ ರಾಜಕೀಯ ಸರ್ಕಸ್ , ಯಾವುದೇ ಸರ್ಕಾರ ಬಂದರೂ ಪ್ರಜೆಗಳ ಪರವಾಗಿ ನಾನು ನಿಲ್ಲಲ್ಲು ಮತ್ತು ‘justasking’ ಅಭಿಯಾನದ ಮೂಲಕ ಪ್ರಶ್ನಿಸಲು ಮುಂದಾಗಬೇಕು ಎಂದು ತೀರ್ಮಾನ ಮಾಡಿದ್ದೇನೆ. ನಮ್ಮ ಅಭಿಯಾನದಿಂದ ಜೋಕರ್’ಗಳ ನಿಜಬಣ್ಣ ಬಯಲಾಗಲಿದೆ. ನೋಡುತ್ತಾ ಖುಷಿಪಡಿ” ಎಂದು ಬರೆದುಕೊಂಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top