ಸಮಾಚಾರ

ಮೈದಾನದಲ್ಲೇ ಜಡೇಜಾಗೆ ಚಮಕ್ ಕೊಟ್ಟ ಮಹೇಂದ್ರ ಸಿಂಗ್ ಧೋನಿ -ವಿಡಿಯೋ ನೋಡಿ

ಈ ವರ್ಷ ಐಪಿಎಲ್ ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌‌ ಉತ್ತಮ ಪ್ರದರ್ಶನ ನೀಡುತ್ತಿದ್ದು, ಕಳೆದ ಟೂರ್ನಿಗಳಿಗೆ ಹೋಲಿಕೆ ಮಾಡಿದಾಗ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ಭರ್ಜರಿ ಬ್ಯಾಟ್‌‌ ಮಾಡುತ್ತಿದ್ದಾರೆ. ಹೈದರಾಬಾದ್ ವಿರುದ್ಧ ನಡೆದ ಪಂದ್ಯದ ಸಮಯ್ದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಆನ್ ಫೀಲ್ಡ್ ನಲ್ಲೇ ರವೀಂದ್ರ ಚಮಕ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಎನ್ನಲಾಗಿದೆ.

 

 

ಸನ್ ರೈಸರ್ಸ್ ಹೈದರಾಬಾದ್ ತಂಡ ಬ್ಯಾಂಟಿಂಗ್ ಮಾಡುತ್ತಿದ್ದ ವೇಳೆ ಶಿಖರ್ ಧವನ್ ಬಾರಿಸಿದ ಚೆಂಡು ಶಾರ್ಟ್ ಮಿಡ್ ವಿಕೆಟ್ ಕಡೆ ಹೋಗಿತ್ತು. ಎರಡನೇ ರನ್ ಓಡಬಾರದೆಂಬ ಕಾರಣಕ್ಕೆ ವೇಗವಾಗಿ ಓಡಿಹೋದ ಕೀಪರ್ ಧೋನಿ ಚೆಂಡನ್ನು ಹಿಡಿದರು.ಆಗ ಎದುರಿಗೆ ಬಂದ ರವೀಂದ್ರ ಜಡೇಜಾ ಗೆ ಧೋನಿ ಬಾಲ್ ಎಸೆಯುವಂತೆ ಮಾಡಿ ಹೆದರಿಸಿದರು ಇದರಿಂದ ಜಡೇಜಾ ಸ್ವಲ್ಪ ಶಾಕ್ ಆದಂತೆ ಕಂಡು ಬಂತು. ಆದರೆ ಇಬ್ಬರು ಆಮೇಲೆ ನಕ್ಕರು.

ವೈರಲ್ ಆದ ಈ ವಿಡಿಯೋ ನೋಡಿ:

ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೈದರಾಬಾದ್ ವಿರುದ್ಧ ಪಂದ್ಯವನ್ನು ಗೆಲ್ಲುವ ಮೂಲಕ ಟೂರ್ನಿಯಲ್ಲಿ ಪ್ಲೇ ಆಫ್ ಗೆ ಪ್ರವೇಶ ಪಡೆದಿದೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top