ಉಪ್ಪಯುತ್ತ ಮಾಹಿತಿ

ಕರಿಬೇವನ್ನು ಬಳಸಿ ಕೂದಲಿನ ಸಮಸ್ಯೆಗಳನ್ನು ನಿವಾರಿಸುವ ಉಪಾಯಗಳು ಹೀಗಿವೆ ನೋಡಿ

ಕರಿಬೇವನ್ನು ಬಳಸಿ ಕೂದಲಿನ ಸಮಸ್ಯೆಗಳನ್ನು ನಿವಾರಿಸುವ  ಹೀಗಿವೆ

ನೋಡಿ

ಅಂದವಾಗಿ ಕಾಣಲು ಚೆಂದ ವಾಗಿ ಇರಲು ನಮ್ಮ ವ್ಯಕ್ತಿತ್ವ ಆಕರ್ಷಕವಾಗಿ ಇರಬೇಕು.ಆಕರ್ಷಕವಾಗಿ ಇರಬೇಕೆಂದರೆ ನಾವು ಆರೋಗ್ಯವಂತರಾಗಿ ಇರಬೇಕು. ಆರೋಗ್ಯವಂತರಾಗಿ ಇರಬೇಕಂದ್ರೆ ಮನೆಯಲ್ಲಿರುವ ಚಿಕ್ಕ ಚಿಕ್ಕ ಮನೆ ಮದ್ದುಗಳಿಂದ ನಾವು ನಮ್ಮ ಆರೋಗ್ಯವನ್ನು ಬಹು ಸುಲಭವಾಗಿ ಕಾಪಾಡಿಕೊಳ್ಳಬಹುದು. ದಟ್ಟವಾದ ಕೂದಲು ಎಲ್ಲರಿಗೂ ಬೇಕು. ಅಂದವಾಗಿ ಕಾಣಬೇಕೆಂದರೆ ಕೂದಲು ಮುಖ್ಯ. ಕೂದಲಿಲ್ಲದ ಬೊಕ್ಕ ತಲೆ ಅಂದ ಹೀನವಾಗಿ ಇರುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಷಯವಾಗಿದೆ.ಅಷ್ಟೇ ಅಲ್ಲದೆ ಒಂದು ಬಗೆಯ ಆತ್ಮನ್ಯೂನ್ಯತೆಯನ್ನು ಎದುರಿಸಬೇಕಾಗುತ್ತದೆ.ಯಾರೇ ಆಗಲಿ ಕೂದಲು ದಟ್ಟವಾಗಿ ಇದ್ದರೆ ಅಂದವಾಗಿ ಚೆಂದವಾಗಿ ಕಾಣ್ತಾರೆ.

ಇನ್ನು ಕೂದಲುಗಳು ಕಪ್ಪಗಿದ್ದು,ಸೊಂಪಾಗಿದ್ದು ಉದ್ದವಾಗಿ ಇರಬೇಕೆಂದರೆ ನಾವು ಕೆಲವು ಎಚ್ಚರಿಕೆಗನ್ನು ಕೆಲವು ಸುಲಭ ಉಪಾಯಗಳನ್ನು ಮಾಡಲೇಬೇಕು.ಈಗ ಸಧ್ಯದ ಪರಿಸ್ಥಿತಿಯಲ್ಲಿ ಅನೇಕ ಕಾರಣಗಳಿಂದ ಕೂದಲು ಉದುರುವುದು ಕೂದಲು ಬೆಳ್ಳಗಾಗುವುದು ಮತ್ತು ತಲೆಯಲ್ಲಿ ಹೊಟ್ಟಾಗುವುದು ಇದೆಲ್ಲ ಸರ್ವೇ ಸಾಧಾರಣ ಸಮಸ್ಯೆಗಳಾಗಿವೆ.

 

ಇಂದು ನಾವು ಹೇಳುತ್ತಿರುವ ಸುಲಭವಾದ ಉಪಾಯ ಏನಂದ್ರೆ ಕರಿಬೇವಿನ ಉಪಾಯ.ಕರಿಬೇವಿನಿಂದ ಸುಲಭವಾದ ಟಿಪ್ಸ್ ಗಳನ್ನು ಫಾಲೋ ಆದರೆ ಸಾಕು ನಾವು ನಮ್ಮ ಕೂದಲನ್ನು ಆರೋಗ್ಯಕರವಾಗಿ ದಟ್ಟವಾಗಿ ಬೆಳೆಸಿಕೊಳ್ಳಬಹುದು.ಇನ್ನು ಕೂದಲಿನ ಎಲ್ಲ ಸಮಸ್ಯೆಗಳನ್ನು ಪರಿಷ್ಕಾರ ಮಾಡಿಕೊಳ್ಳಬಹುದು. ಕೂದಲಿಗೆ ಸರಿಯಾದ ಆರೈಕೆ, ಪೋಷಣೆ ಇಲ್ಲದ ಕರಣಗಳಿಂದ ಪೋಷಕ ಲೋಪಗಳ ಕಾರಣಗಳಿಂದ ಅಥವಾ ಬೇರಾವುದೋ ಕಾರಣಗಳಿಂದ ಕೂದಲು ಉದುರುವುದು,ಒಣಗುವುದು,ಬಿಳಿಚಾಗುವುದು ಅಂದರೆ ಕೂದಲು ಬೆಳ್ಳಗಾಗುವುದು. ಈ ಸಮಸ್ಯೆಗಳನ್ನು ನಿವಾರಿಸಲು ಕರಿಬೇವು ಒಂದು ಅತ್ತ್ಯುತ್ತಮ ಮನೆ ಮದ್ದು ಅಂತಾನೆ ಹೇಳಬಹದು.ಕರಿಬೇವು ಬಹು ಸುಲಭವಾಗಿ ಸರಳವಾಗಿ ಸಿಗುವಂತಹ ಪದಾರ್ಥ.ಅದನ್ನು ಬಳಸಿಕೊಂಡು ನಾವು ನಮ್ಮ ಕೂದಲನ್ನು ಸೊಂಪಾಗಿ,ಸದೃಢವಾಗಿ,ಆರೋಗ್ಯಕರವಾಗಿ ಬೆಳಿಸಿಕೊಳ್ಳಬಹುದು.

ಇನ್ನು ಅದನ್ನು ಹೇಗೆ ತಯಾರಿಸಿಕೊಳ್ಳಬೇಕು ಅಂತ ಹೇಳ್ತಿವಿ ನೋಡಿ. ಒಂದು ಬೊಗಸೆಯಷ್ಟು ಕರಿಬೇವನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ಸ್ವಲ್ಪ ತಣ್ಣಗಾದ ಮೇಲೆ ಕೂದಲಿಗೆ ಚೆನ್ನಾಗಿ,ಒಳಗೆ ಕೂದಲಿನ ಮೂಲಗಳಿಗೆ ತಗಲುವಂತೆ ಮೂರ್ನಾಲ್ಕು ನಿಮಿಷಗಳ ಕಾಲ ಹಚ್ಚಿಕೊಂಡು ಚೆನ್ನಾಗಿ ಮಸಾಜ್ ಮಾಡಿಕೊಳ್ಳಬೇಕು.ತದನಂತರ ಅದು ಸ್ವಲ್ಪ ಒಣಗಲು ಬಿಟ್ಟು ನಾಲ್ಕೈದು ನಿಮಿಷಗಳ ನಂತರ ಅಥವಾ ಒಂದು ಹತ್ತು ನಿಮಿಷಗಳ ನಂತರ ನೀವು ನಿಮ್ಮ ತಲೆಯನ್ನು ಶುಭ್ರವಾಗಿ ತೊಳೆದುಕೊಂಡು ಬಿಡಿ.ಇದರಿಂದ ನಿಮ್ಮ ಕೂದಲು ಉದುರುವುದು ನಿಲ್ಲಿವುದಲ್ಲದೆ ದಟ್ಟವಾಗಿ ಬೆಳೆಯಲು ಸಹಕಾರಿಯಾಗುತ್ತದೆ.ಇನ್ನು ಕರಿ ಬೇವಿನಲ್ಲಿ ಎಷ್ಟು ಪೋಶಕಾಂಶಗಳು ಇವೆ ಎಂದರೆ ನಿಜವಾಗಲೂ ಅದು ಅತ್ಯದ್ಭುತವಾದ ಮನೆ ಮದ್ದು ಅಂತಾನೆ ಹೇಳಬಹುದು.ಕರಿಬೇವನ್ನು ಹಚ್ಚುವುದರಿಂದ ಕೂದಲಿಗೆ ಬೇಕಾಗುವ ಕೆರೋಟಿನ್, ಪ್ರೊಟೀನ್ ಗಳು ಕೂದಲು ಉದರುವುದನ್ನು ನಿಲ್ಲಿಸುತ್ತವೆ.ಅಷ್ಟಲ್ಲದೇ ಕೂದಲಿಗೆ ಬೇಕಾಗುವ ಪೋಶಕಾಂಶಗನ್ನು ನೀಡಿ ಕೂದಲು ದಟ್ಟವಾಗಿ ಬೆಳೆಯಲು ಅವಕಾಶ ಮಾಡಿಕೊಡುತ್ತದೆ ಈ ಕರಿಬೇವು.

 

 

ಮತ್ತೊಂದು ಟಿಪ್: ಹೇಳ್ತಿನಿ ಅರ್ಧಕ್ಕಿಂತ ಕಡಿಮೆ ಬಟ್ಟಲಿನಷ್ಟು ಕರಿಬೇವಿನ ಪೇಸ್ಟ್ ಗೆ ಎರಡು ಸ್ಪೂನ್ ಮೊಸರನ್ನು ಬೆರಸಿ ಪೇಸ್ಟ್ ನಂತೆ ತಯಾರಿಸಿಕೊಂಡು ಕೂದಲಿನ ಮೂಲಗಳಿಗೆ ಚೆನ್ನಾಗಿ ಹಚ್ಚಿ. ಸ್ವಲ್ಪ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ.ಅರ್ಧ ಗಂಟೆಯ ನಂತರ ಕೂದಲನ್ನು ತೊಳೆದುಕೊಳ್ಳಬೇಕು .ಇದು ಕೂದಲು ಉದುರುವುದನ್ನು ನಿಲ್ಲಿಸುವುದಲ್ಲದೆ ತೇವವನ್ನು ನೀಡುತ್ತದೆ.ಕೂದಲು ಆರೋಗ್ಯಕರವಾಗಿ ದಟ್ಟವಾಗಿ ಬೆಳೆಯಲು ಇದು ಸಹಕಾರ ಮಾಡುತ್ತದೆ.

 

ಮತ್ತೊಂದು ಟಿಪ್ :ಕರಿಬೇವನ್ನು ಬಿಸಿಲಲ್ಲಿ ಒಣಗಿಸಿ ಪುಡಿ ಮಾಡಿಕೊಂಡು ಕೊಬ್ಬರಿ ಎಣ್ಣೆಯಲ್ಲಿ ಹಾಕಿ ನಾಲ್ಕೈದು ನಿಮಿಷಗಳ ಕಾಲ ಬಿಸಿ ಮಾಡಿ.ಸ್ವಲ್ಪ ಉಗುರು ಬೆಚ್ಚಗಾದ ಮೇಲೆ ಆ ಎಣ್ಣೆಯನ್ನು ತಲೆಗೆ ಹಚ್ಚಿಕ್ಕೊಂದು ಐದು ನಿಮಿಷಗಳ ಕಾಲ ಮಸಾಜ್ ಮಾಡಿಕೊಂಡು ಎರಡು ಗಂಟೆಗಳ ನಂತರ ಯಾವುದಾದರು ಶ್ಯಾಂಪೂವಿನಿಂದ ತೊಳೆದುಕೊಳ್ಳಿ.ಆಗ ನಿಮ್ಮ ಕೂದಲಿಗೆ ಸಾಕಷ್ಟು ಪೋಷಣೆ ನೀಡಿದಂತಾಗುತ್ತದೆ.ಇದು ಕೂದಲಿಗೆ ಪೋಷಣೆಯನ್ನು ನೀಡುವುದಲ್ಲದೆ ಕೂದಲು ಉದುರುವುದನ್ನು ನಿಲ್ಲಿಸಿ, ಕೂದಲು ದಟ್ಟವಾಗಿ ಕಪ್ಪಾಗಿ ಬೆಳೆಯುವಂತೆ ಮಾಡುತ್ತದೆ.ಹೀಗೆ ಮೇಲಿಂದ ಮೇಲೆ ಮಾಡುವುದರಿಂದ ಕೂದಲಿನ ಆರೋಗ್ಯವನ್ನು ನೀವು ಕಾಪಾಡಿಕೊಂಡವರಾಗುತ್ತೀರಿ.ಅಷ್ಟೇ ಅಲ್ಲದೆ ಬಿಳಿ ಕೂದಲನ್ನು ದಟ್ಟವಾದ ಕಪ್ಪಾದ ಬಣ್ಣಕ್ಕೆ ತಿರುಗಿಸಿಕೊಂಡವರಾಗುತ್ತೀರಿ.

ಅಷ್ಟೇ ಅಲ್ಲದೆ ಒಂದು ಬೊಗಸೆ ಕರಿಬೇವನ್ನು ತೆಗೆದುಕೊಂಡು ಎರಡು ಗ್ಲಾಸ್ ನೀರಿನಲ್ಲಿ ಐದು ನಿಮಿಷ ಹಾಕಿ ಗ್ಯಾಸ್ ಮೇಲಿಟ್ಟು ಕುದಿಯಲು ಬಿಡಿ. ಅದು ಕುದಿದ ನಂತರ ಶೋಧಿಸಿಕೊಂಡು ನೀವು ದಿನಾ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿದರೆ ನಿಮ್ಮ ಶರೀರಕ್ಕೆ ಬೇಕಾಗುವ ಪೋಶಕಾಂಶಗಳು ಸಿಗುತ್ತವೆ. ಅದರಿಂದ ಕೂದಲು ಉದುರುವುದನ್ನು ನಿಲ್ಲಿಸುವುದಲ್ಲದೆ ಕೂದಲು ಬೆಳ್ಳಗಾಗುವುದನ್ನು ತಡೆಯಬಹುದು. ಅಷ್ಟೇ ಅಲ್ಲದೆ ಉದುರಿದ ಕೂದಲು ಮತ್ತೆ ಸೊಂಪಾಗಿ ಬೆಳೆಯಲು ಇದು ಸಹಕಾರಿಯಾಗಿದೆ .ಹೀಗೆ ಮನೆಯ ಮದ್ದು ನಮ್ಮ ಆರೋಗ್ಯವನ್ನು ಸಾಕಷ್ಟು ರಕ್ಷಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top