ಸಮಾಚಾರ

ಯಡಿಯೂರಪ್ಪ ಮನೆಗೆ ಬ್ಯಾಕ್ ಡೋರ್ ನಿಂದ ಬಂದ ಪಕ್ಷೇತರ ಶಾಸಕ ಯಾರು

ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು ಈ ಭಾರಿ ಕರ್ನಾಟಕ ಅತಂತ್ರ ವಿಧಾನ ಸಭೆಯನ್ನು ಅನಿವಾರ್ಯವಾಗಿ ಪಡೆದುಕೊಂಡಿದೆ. ಫಲಿತಾಂಶದ ನಂತ್ರ ರಾಜ್ಯ ರಾಜಕಾರಣದಲ್ಲಿ ಕ್ಷಣ ಕ್ಷಣಕ್ಕೂ ತಿರುವು ಪಡೆದುಕೊಳ್ಳುತ್ತಿದ್ದು ಒಂದು ಕಡೆ ಬಿಜೆಪಿಯಾದರೆ ಮತ್ತೊಂದು ಕಡೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರ ರಚಿಸುವ ಬಗ್ಗೆ ನಾನಾ ಸರ್ಕಸ್ ನಡೆಸುತ್ತಿವೆ.

 

 

104 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿಯ ಮುಂದಿನ ನಡೆ ಏನೆಂಬುದರ ಬಗ್ಗೆ ತೀವ್ರ ಕೂತುಹಲವನ್ನು ಹುಟ್ಟುಹಾಕಿದೆ.

ರಾಣೆಬೆನ್ನೂರು ನೂತನ ಶಾಸಕ ಆರ್.ಶಂಕರ್ ಬಿಎಸ್ ವೈ ನಿವಾಸಕ್ಕೆ ಹಿಂಬಾಗಿಲಿನಿಂದ ಆಗಮಿಸಿದ್ದಾರೆ. ಇವರನ್ನು ಈಶ್ವರಪ್ಪ ಕರೆತಂದಿದ್ದು, ಈಶರಪ್ಪ ಮಾತ್ರ ಮುಂಬಾಗಿಲಿನಿಂದ ಬಂದಿದ್ದಾರೆ. ಅಷ್ಟೇ ಅಲ್ಲದೇ ಇವರು ಈಶ್ವರಪ್ಪ ಸಂಬಂಧಿಯೂ ಕೂಡ ಆಗಿದ್ದಾರೆ.

ಕೇರಳದ ಕೊಚ್ಚಿನ್ ರೆಸಾರ್ಟ್ ಗೆ ಶಿಫ್ಟ್ ಆಗಲು ಕಾಂಗ್ರೆಸ್ ತೀರ್ಮಾನ ಮಾಡಿದ್ದಾರೆ ಎಂದು ಒಬ್ಬರು ಹೇಳುತ್ತಿದ್ದಾರೆ ,ರಾಮನಗರ ರಸ್ತೆಯಲ್ಲಿರುವ ಈಗಲ್ ಟನ್ ರೆಸಾರ್ಟ್ ನಲ್ಲಿ ರೆಸಾರ್ಟ್ ರಾಜಕೀಯ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top